ಉತ್ತಮ ಸಮಾಜಕ್ಕಾಗಿ

ಶೀಘ್ರದಲ್ಲಿಯೇ ಐಟಿ ಪಾರ್ಕ ನಿರ್ಮಾಣ- ಶಾಸಕ ಅಭಯ ಪಾಟೀಲ

news belagavi

0

ಬೆಳಗಾವಿ : (news belgaum)ಬೆಳಗಾವಿ ನಗರ ದೇಶದ ವಿಶೇಷ ಗಮನ ಸೆಳೆಯುತ್ತಿದ್ದು, ಐಟಿ ಕ್ಷೇತ್ರದಲ್ಲಿ ತನ್ನದೆ ಆದ ವಿಶೇಷ ಛಾಪು ಮೂಡಿಸಲಿದೆ. ಮುಂಬರುವ ದಿನಗಳಲ್ಲಿ ಶೀಘ್ರವೇ ಬೆಳಗಾವಿಯಲ್ಲಿ ಸುಮಾರು 500 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುವುದೆಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಹೇಳಿದರು.
ಬೆಳಗಾವಿಯ ಟಿಳಕವಾಡಿ ಪ್ರದೇಶದಲ್ಲಿ ನೂತನವಾಗಿ ಆರಂಭಗೊಂಡ ಟೆಕ್‍ಟ್ರೀ ಸಿಸ್ಟಮ್ಸ್ ಐಟಿ ಸಂಸ್ಥೆಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಆದರೆ ಅವರಿಗೆ ತಮ್ಮ ಪ್ರತಿಭೆ ತೋರಿಸಲು ಇಲ್ಲಿ ಅವಕಾಶಗಳಿಲ್ಲ. ಈ ವಿದ್ಯಾರ್ಥಿಗಳು ಬೆಂಗಳೂರು, ಮುಂಬೈ ಮತ್ತು ಪೂಣೆ ನಗರಗಳ ಮೇಲೆ ಅವಲಂಬಿತರಾಗಿದ್ದಾರೆ. ಬೆಳಗಾವಿ ನಗರ ಮೂರು ರಾಜ್ಯಗಳಿಗೆ ಹೊಂದಿಕೊಂಡಿರುವುದರಿಂದ ಮತ್ತು ಇಲ್ಲಿನ ಉತ್ತಮ ವಾತಾವರಣದಲ್ಲಿ ಐಟಿ ಪಾರ್ಕ ಸ್ಥಾಪಿಸಲು ಉತ್ತಮ ಅವಕಾಶವಿದೆ. ಈ ನಿಟ್ಟಿನಲ್ಲಿ ಈಗಾಗಲೇ ತಾವು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದು, ಶೀಘ್ರವೇ ಬೆಳಗಾವಿಯಲ್ಲಿ ಬೃಹತ್ ಐಟಿ ಪಾರ್ಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.
ಸಮಾರಂಭದಲ್ಲಿ ಟೆಕ್‍ಟ್ರೀ ಸಿಸ್ಟಮ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿವೃತ್ತ ಲೆಪ್ಟಿನೆಂಟ್ ಕರ್ನಲ ಸಂಜಯ ಅಹುಜಾ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಇಂಡಸ್ಟ್ರೀಜ ವೆಟರನ್ ಬಿಪ್ಲೋವ ಬೆಲ್ವಾಲ ಅವರು ಸಂಸ್ಥೆಯ ವಿವಿಧ ಕ್ಷೇತ್ರಗಳ ಮಾಹಿತಿ ಮತ್ತು ತನ್ನ ಗ್ರಾಹಕರಿಗೆ ನೀಡುವ ಸೇವೆಯ ಬಗ್ಗೆ ಮಾಹಿತಿ ನೀಡಿದರು. ವೇದಿಕೆ ಮೇಲೆ ಪೀಪಲ್‍ಟ್ರೀ ಎಜ್ಯುಕೇಶನ ಸೋಸೈಟಿ ಅಧ್ಯಕ್ಷ ಜಗದೀಶ ಸವದತ್ತಿ, ಭರತೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪುಷ್ಪದಂತ ದೊಡ್ಡಣ್ಣವರ, ಉಪಸ್ಥಿತರಿದ್ದರು. ಬೆಳಗಾವಿ ಕಚೇರಿಯ ಮುಖ್ಯಸ್ಥ ನಾಗರಾಜ ಹೊಸಮನಿ ಅತಿಥಿಗಳನ್ನು ಸ್ವಾಗತಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.