ಉತ್ತಮ ಸಮಾಜಕ್ಕಾಗಿ

ವಿಶ್ವ ಕ್ಷಯರೋಗ ದಿನಾಚರಣೆ ಕ್ಷಯ ಮುಕ್ತ ಭಾರತ ನಿರ್ಮಾಣಕ್ಕೆ ಪಣ

State Level World Tuberculosis Day in Belgaum

0

ಬೆಳಗಾವಿ: (news belgaum)ಕ್ಷಯರೋಗದ ವಿರುದ್ಧ ಆರಂಭಿಸಲಾಗಿರುವ ಸಮರದಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಭಾರತವನ್ನು 2025ರ ವೇಳೆಗೆ ಕ್ಷಯಮುಕ್ತ ರಾಷ್ಟ್ರವನ್ನಾಗಿ ನಿರ್ಮಿಸುವ ಗುರಿ ಸಾಧಿಸೋಣ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಕರೆ ನೀಡಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಲೇಡಿ ವೆಲ್ಲಿಂಗ್‍ಡನ್ ರಾಜ್ಯ ಕ್ಷಯರೋಗ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಗರದ ಜೀರಗೆ ಸಭಾಂಗಣದಲ್ಲಿ ಶುಕ್ರವಾರ(ಮಾ.24) ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
News Belgaum-ಬೆಳಗಾವಿಯಲ್ಲಿ ರಾಜ್ಯಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ ಕ್ಷಯ ಮುಕ್ತ ಭಾರತ ನಿರ್ಮಾಣಕ್ಕೆ ಪಣ 1“ನಾಯಕರು ಬೇಕಾಗಿದ್ದಾರೆ-ಕ್ಷಯರೋಗ ಮುಕ್ತ ವಿಶ್ವ ನಿರ್ಮಾಣಕ್ಕೆ” ಎಂಬ ಘೋಷವಾಕ್ಯದಂತೆ ಕ್ಷಯರೋಗವನ್ನು ಮೂಲೋತ್ಪಾಟನೆ ಮಾಡಲು ದೇಶದ 125 ಕೋಟಿ ಜನರೂ ನಾಯಕರಾಗಿ ಕೆಲಸ ಮಾಡಬೇಕಿದೆ ಎಂದರು.
ಕ್ಷಯರೋಗದ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಅವರು, ಈ ನಿಟ್ಟಿನಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉತ್ತಮ ಮಾಡುತ್ತಿದ್ದಾರೆ. ಆದಾಗ್ಯೂ ಇದುವರೆಗೆ ಗಣನೀಯ ಸಾಧನೆ ಆಗಿಲ್ಲ ಎಂದು ಹೇಳಿದರು.
ನಗರ ಹಾಗೂ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಕ್ಷಯರೋಗದ ಬಗ್ಗೆ ಮಾಹಿತಿ ಒದಗಿಸಲು ಐಇಸಿ ಚಟುವಟಿಕೆಗಳು ಇನ್ನಷ್ಟು ಚುರುಕುಗೊಳಿಸುವ ಮೂಲಕ ಎಲ್ಲರಲ್ಲೂ ಈ ರೋಗದ ಬಗ್ಗೆ ಅರಿವು ಮೂಡಿಸಬೇಕು ಎಂದು ಮೇಘಣ್ಣವರ ಸಲಹೆ ನೀಡಿದರು.
ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್. ಅವರು, ಸ್ವಚ್ಛತೆ ಎಂಬುದು ನಮ್ಮೆಲ್ಲರ ಸ್ವಭಾವವಾದಾಗ ಮಾತ್ರ ಕ್ಷಯ ಸೇರಿದಂತೆ ಅನೇಕ ಬಗೆಯ ಸಾಂಕ್ರಾಮಿಕ ರೋಗಗಳನ್ನು ದೂರ ಇಡುವುದು ಸಾಧ್ಯವಾಗುತ್ತದೆ ಎಂದರು.
ಸ್ವಚ್ಛತೆ ಹಾಗೂ ವಿವಿಧ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಆಶಾ ಕಾರ್ಯಕರ್ತೆಯರ ಗುಲಾಬಿ ಗ್ಯಾಂಗ್ ಶ್ರಮಿಸುತ್ತಿದೆ. ಆನರ ಮನೋಭಾವ ಬದಲಿಸುವ ಕೆಲಸ ಒಂದು ದಿನದಲ್ಲಿ ಸಾಧ್ಯವಿಲ್ಲ; ಆದರೆ ಈ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

ಪ್ರತಿದಿನ 600 ಸಾವು:
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಕ್ಷಯರೋಗ ಕೇಂದ್ರ ಸಹ ನಿರ್ದೇಶಕ ಡಾ.ರಾಮಚಂದ್ರ ಬಾಯರಿ ಅವರು “ಜಗತ್ತಿನ ಒಟ್ಟು ಕ್ಷಯರೋಗಿಗಳ ಪೈಕಿ ಭಾರತದಲ್ಲಿ ಶೇ.25ರಷ್ಟು ಜನರಿದ್ದಾರೆ. ಒಬ್ಬ ಸೋಂಕಿತ ವ್ಯಕ್ತಿಯು ಪ್ರತಿವರ್ಷ 10ರಿಂದ 15 ಜನರಿಗೆ ಸೋಂಕು ಹರಡುತ್ತಿದ್ದಾರೆ” ಎಂದು ತಿಳಿಸಿದರು.
ದೇಶದಲ್ಲಿ ಕ್ಷಯರೋಗದಿಂದ ಪ್ರತಿದಿನ 600 ಜನರು ಸಾವನ್ನಪ್ಪುತ್ತಿದ್ದು, ಒಟ್ಟಾರೆ 6000 ಸಾವಿರ ಜನರು ಕ್ಷಯರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ವಿವರಿಸಿದರು.
ಈ ಸೋಂಕು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೇರ ನಿಗಾವಣೆ ಅಲ್ಪಾವಧಿ ಚಿಕಿತ್ಸೆ (ಡಾಟ್)ಯನ್ನು ಉಚಿತವಾಗಿ ನೀಡುತ್ತಿವೆ ಎಂದು ಹೇಳಿದರು.
ಮುಂಬರುವ ಮೇ ಹಾಗೂ ಡಿಸೆಂಬರ್‍ನಲ್ಲಿ ಮನೆ ಮನೆಗೆ ತೆರಳಿ ತಪಾಸಣೆ ನಡೆಸುವ ಮೂಲಕ ಸೋಂಕಿತರನ್ನು ಗುರುತಿಸುವ ಕೆಲಸ ನಡೆಯಲಿದೆ. ಇದರೊಂದಿಗೆ ಸೋಂಕಿತರಿಗೆ ಪೌಷ್ಟಿಕ ಆಹಾರ ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾನಗರ ಪಾಲಿಕೆ ಮೇಯರ್ ಬಸಪ್ಪ ಚಿಕ್ಕಲದಿನ್ನಿ ಅವರು, ಕ್ಷಯಮುಕ್ತ ಬೆಳಗಾವಿ ಜಿಲ್ಲೆ ನಿರ್ಮಾಣಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪಣ ತೊಟ್ಟಿದ್ದಾರೆ. ನಾವೆಲ್ಲರೂ ಅದಕ್ಕೆ ಕೈಜೋಡಿಸೋಣ ಎಂದರು.
ಇದೇ ಸಂದರ್ಭದಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಹಿರಿಯ ಅಂಚೆ ಅಧೀಕ್ಷಕ ಎಸ್.ಡಿ.ಕುಲಕರ್ಣಿ ಅವರು ಬಿಡುಗಡೆಗೊಳಿಸಿದರು.
ಕೆಎಚ್‍ಪಿಟಿ ನಿರ್ಮಿಸಿರುವ ಕ್ಷಯರೋಗ ತಡೆ ಕುರಿತು ಸಾಕ್ಷ್ಯಚಿತ್ರವನ್ನು ಹಾಗೂ ವಿಶೇಷ ಪ್ರಚಾರಸಾಮಗ್ರಿಗಳನ್ನು ಬಿಡುಗಡೆಗೊಳಿಸಲಾಯಿತು. ಇದೇ ವೇಳೆ ಬಾನುಲಿ ರೂಪಕವನ್ನು ಆಶಾ ಕಾರ್ಯಕರ್ತೆಯರಿಂದು ಬಿಡುಗಡೆಗೊಳಿಸಲಾಯಿತು. ಕ್ಷಯರೋಗ ನಿರ್ಮೂಲನೆಗೆ ಶ್ರಮಿಸಿದ ವಿವಿಧ ತಾಲ್ಲೂಕು ವೈದ್ಯಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಆರೋಗ್ಯ ಇಲಾಖೆಯ ಐಇಸಿ ವಿಭಾಗದ ಸಹ ನಿರ್ದೇಶಕ ಡಾ.ಸುರೇಶ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಪ್ಪಾಸಾಹೇಬ್ ನರಟ್ಟಿ ಸ್ವಾಗತಿಸಿದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶೈಲಜಾ ತಮ್ಮಣ್ಣವರ ವಂದಿಸಿದರು.
ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.State Level World Tuberculosis Day in Belgaum

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.