ಉತ್ತಮ ಸಮಾಜಕ್ಕಾಗಿ

ಪೇಜಾವರ ಶ್ರೀ ವಿರುದ್ಧ ಅಪಪ್ರಚಾರ ನಿಲ್ಲಿಸಿ: ವಿಜಯೀಂದ್ರ ಶ್ರೀ, ಅನಿಲ ಪೋತದಾರ ಆಗ್ರಹ

Stop piracy against Pajavar Shree: Vijayendra Shri, demand for gas pantry

0

‌ಬೆಳಗಾವಿ:(news belgaum) ಕೇವಲ ಬ್ರಾಹ್ಮಣ ಸಮಾಜವನ್ನು ಟಾರ್ಗೆಟ್ ಮಾಡಿ ಧರ್ಮರಕ್ಷಕರಾದ ನಾಡಿಬ ಹಿರಿಯ ಶ್ರೀಗಳಾದ ಉಡುಪಿ ಶ್ರೀ ಪೇಜಾವರರಿಗೆ ಮಾನಹಾನಿ ಮಾಡಲಾಗುತ್ತಿದೆ ಎಂದು ಅಸಮಧಾನ ವ್ಯಕ್ತವಾಗಿದೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಾಹ್ಮಣ ಸಮಾಜದ ಮುಖಂಡ ಹಾಗೂ ಉದ್ಯಮಿ ಅನಿಲ ಪೋತದಾರ ನಾಡಿನ ಹಿರಿಯ ಶ್ರೀಗಳಾದ ಪೇಜಾವರರ ವಿರುದ್ದ ಮಾನಸಿಕ ರೋಗಿ ವ್ಯಕ್ತಿಯೊಬ್ಬ ಇಲ್ಲಸಲ್ಲದ ಆರೋಪ ಸಾರ್ವಜನಿಕವಾಗಿ ಮಾಡುತ್ತಿದ್ದಾನೆ. ಸಾರ್ವಜನಿಕ ಪ್ರಚಾರದ ಗೀಳು ಹೊಂದಿರುವ ಕೆಲವರು ಪೇಜಾವರ ಶ್ರೀಗಳ ವಿರುದ್ದ ವೈಯಕ್ತಿಕ ಅಪಪ್ರಚಾರ ನಡೆಸಿದ್ದು, ಕೂಡಲೇ ನಿಲ್ಲಿಸದಿದ್ದರೆ ಬ್ರಾಹ್ಮಣರು ರಸ್ತೆಗಿಳಿಯಬೇಕಾಗುತ್ತದೆ ಎಂದು ಅನಿಲ ಪೋತದಾರ ಎಚ್ಚರಿಸಿದ್ದಾರೆ.
ಜಿಲ್ಲಾಧಿಕಾರಿ & ರಾಜ್ಯ ಸರಕಾರಕ್ಕೆ ಈ ಹಿಂದೆ ಬ್ರಾಹ್ಮಣರ ಮೇಲೆ ಆಗುತ್ತಿರುವ ಅನ್ಯಾಯ ದೌರ್ಜನ್ಯಗಳ ಬಗ್ಗೆ ಮನವಿ ಸಲ್ಲಿಸಲಾಗಿದೆ ಆದರೆ ಸರಕಾರ ಮಾತ್ರ ಯಾವುದೇ ಗಮನ ಹರಿಸುತ್ತಿಲ್ಲ ಎಂದು ಅನಿಲ ಪೋತದಾರ ಅಸಮಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಗೃಹಸಚಿವ ಡಾ. ಜಿ. ಪರಮೇಶ್ವರ ಕೂಡಲೇ ಬ್ರಾಹ್ಮಣರ ಸಹಾಯಕ್ಕೆ ನಿಲ್ಲಬೇಕು. ಬೆಳಗಾವಿ ಶ್ರೀ ರಾಘವೇಂದ್ರ ನವವೃಂದಾವನ ಮಠದ ಕುಲಪತಿ ಪಂ. ಎನ್. ಆರ್. ವಿಜಯೀಂದ್ರ ಸ್ವಾಮೀಜಿ ಮಾತನಾಡಿ ಉಡುಪಿ ಶ್ರೀಕೃಷ್ಣನ ನೈಜ ಆರಾಧಕ ಪ್ರತಿಬಿಂಬ ಎಂದು ಪೇಜಾವರ ಶ್ರೀಗಳು ಹೆಸರಾಗಿದ್ದಾರೆ. ವಿದ್ವತ್ ಶ್ರೀಗಳ 88ನೇ ವಯಸ್ಸಿನಲ್ಲಿ ಅವರ ವಿರುದ್ಧ ಅಲ್ಲಸಲ್ಲದ ಆರೊಪ ಮಾಡಲಾಗುತ್ತಿದೆ. ಹಿರಿಯ ರಾಜಕಾರಣಿ ಎ. ಕೆ. ಸುಬ್ಬಯ್ಯ ಎಂಬುವರು ತತಕ್ಷಣ ಅಫ್ರಚಾರ ಕೆಲಸ ನಿಲ್ಲಿಸಬೇಕು ಎಂದರು. ಎ. ಕೆ. ಸುಬ್ಬಯ್ಯ ತತಕ್ಷಣ ಸಮಾಜದ ಕ್ಷಮೆ ಕೇಳಬೇಕು. ರಾಜ್ಯ ಸರಕಾರ ತನಿಖೆ ಆದಷ್ಟು ಬೇಗ ಮುಗಿಸಲಿ. ಪೇಜಾವರ ಶ್ರೀಗಳು ತನಿಖೆಯಲ್ಲಿ ತಪ್ಪಿತಸ್ಥರು ಎಂದು ಕಂಡುಬಂದೇ ಬಂಧಿಸಲಿ ಎಂದು ಶ್ರೀ ವಿಜಯೇಂದ್ರ ಶರ್ಮಾ ಆಗ್ರಹಿಸಿದ್ದಾರೆ.
ಎ. ಕೆ. ಸುಬ್ಬಯ್ಯ ಅವರು ಅಪಪ್ರಚಾರ ಮಾಡುತ್ತ ತಿರುಗಾಡುವ ವರದಿಗಳು ಮಾಧ್ಯಮಗಳಲ್ಲಿ ವರದಿಯಾಗಿರುವುದು ಖೇದಕರ ಎಂದರು. ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಪೇಜಾವರರ ವಿರುದ್ಧ ನಡೆಯುತ್ತಿರುವ ಪಿತೂರಿ ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.