ಉತ್ತಮ ಸಮಾಜಕ್ಕಾಗಿ

ಸ್ವೀಪ್ ಕಾರ್ಯಚಟುವಟಿಕೆ ಚುರುಕುಗೊಳಿಸಲು ಸೂಚನೆ ‘ಮತದಾರರಿಗೆ ಮಮತೆಯ ಕರೆಯೋಲೆ’

Suggestion To Activate Sweep Function 'Vote for Voters'

0

ಬೆಳಗಾವಿ,(news belgaum) ಮತದಾನ ದಿನ (ಮೇ 12) ಸಮೀಪಿಸುತ್ತಿರುವುದರಿಂದ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಸ್ವೀಪ್ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಚುರುಕಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ(ಏ.25) ನಡೆದ ಸ್ವೀಪ್ ಸಮಿತಿಯ ಮೂರನೇ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
News Belgaum-ಸ್ವೀಪ್ ಕಾರ್ಯಚಟುವಟಿಕೆ ಚುರುಕುಗೊಳಿಸಲು ಸೂಚನೆ ‘ಮತದಾರರಿಗೆ ಮಮತೆಯ ಕರೆಯೋಲೆ’ಮುಂದಿನ ಹದಿನೈದು ದಿನಗಳ ಕಾಲ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ವಿಶೇಷವಾಗಿ ಯುವ ಸಮುದಾಯದಲ್ಲಿ ಹಾಗೂ ಕೊಳಚೆ ಪ್ರದೇಶದಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅದಕ್ಕಾಗಿ ಕಾರ್ಯಯೋಜನೆ ತಯಾರಿಸಿ ಅದರ ಪ್ರಕಾರ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.
ಯಾವುದೇ ಜಾತಿ-ಧರ್ಮದ ಪ್ರಭಾವ, ಅಥವಾ ಹಣದ ಆಮಿಷಕ್ಕೆ ಒಳಗಾಗದೇ ಮುಕ್ತವಾಗಿ ಮತ್ತು ಕಡ್ಡಾಯವಾಗಿ ಮತ ಚಲಾಯಿಸುತ್ತೇನೆ ಎಂದು ಯುವ ಸಮುದಾಯದಿಂದ ‘ಸಹಿ ಆಂದೋಲನ’ ಹಮ್ಮಿಕೊಳ್ಳಬೇಕು.
ಅದೇ ರೀತಿ ಇದೇ ಮೊದಲ ಬಾರಿ ವಿವಿಪ್ಯಾಟ್ ಬಳಕೆ ಮಾಡುತ್ತಿರುವುದರಿಂದ ಜನಸಂದಣಿ ಇರುವ ಪ್ರದೇಶಗಳಲ್ಲಿ ವಿವಿಪ್ಯಾಟ್ ಬಳಕೆ ಕುರಿತ ಸ್ಟಿಕ್ಕರ್ ಹಾಗೂ ಪೋಸ್ಟರ್‍ಗಳನ್ನು ಅಂಟಿಸಬೇಕು ಎಂದು ಸಲಹೆ ನೀಡಿದರು.
ಆಟೋ ನಿಲ್ದಾಣಗಳಿಗೆ ತೆರಳಿ ಆಟೋ ಚಾಲಕರಿಗೆ ಮತದಾನದ ಬಗ್ಗೆ ತಿಳಿವಳಿಕೆ ನೀಡಬೇಕು ಹಾಗೂ ಆಟೋಗಳ ಮೇಲೆ ಸ್ಟಿಕ್ಕರ್ ಅಂಟಿಸಬೇಕು ಎಂದು ಹೇಳಿದರು.
ಕೊಳಚೆಪ್ರದೇಶಗಳಲ್ಲಿ ಜಾಥಾ ಹಮ್ಮಿಕೊಳ್ಳುವುದು; ನಗರ ಪ್ರದೇಶಗಳಲ್ಲಿ ಮೊಂಬತ್ತಿ ಮೆರವಣಿಗೆ, ಸ್ಕೇಟಿಂಗ್ ಹಾಗೂ ಸ್ವಿಮ್ಮಿಂಗ್ ಕ್ಲಬ್‍ಗಳಿದ್ದರೆ ಅವುಗಳ ಆಶ್ರಯದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಮತದಾರರ ಮಮತೆಯ ಕರೆಯೋಲೆ:
News Belgaum-ಸ್ವೀಪ್ ಕಾರ್ಯಚಟುವಟಿಕೆ ಚುರುಕುಗೊಳಿಸಲು ಸೂಚನೆ ‘ಮತದಾರರಿಗೆ ಮಮತೆಯ ಕರೆಯೋಲೆ’ 1ಒಂದು ಮದುವೆ ಸಮಾರಂಭಕ್ಕೆ ಯಾವ ರೀತಿ ಆಮಂತ್ರಣ ನೀಡುತ್ತೆವೆಯೋ ಅದೇ ರೀತಿ ಮತದಾನಕ್ಕೆ ಆಗಮಿಸುವಂತೆ ಕೋರಿ ತಯಾರಿಸಲಾಗಿರುವ ‘ಮತದಾರರ ಮಮತೆಯ ಕರೆಯೋಲೆ’ಯನ್ನು ಮನೆ ಮನೆಗೆ ತೆರಳಿ ವಿತರಿಸಬೇಕು ಎಂದು ಸ್ವೀಪ್ ಸಮಿತಿ ಅಧ್ಯಕ್ಷ ರಾಮಚಂದ್ರನ್ ಸೂಚನೆ ನೀಡಿದರು.
ಮತದಾರರ ಚೀಟಿಯನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಮತದಾರರ ಜಾಗೃತಿ ಕರಪತ್ರಗಳನ್ನು ಕೂಡ ವಿತರಿಸಬೇಕು. ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿ ನಡೆಸುತ್ತಿರುವ ಸ್ಥಳಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಅದೇ ರೀತಿ ದಿನಪತ್ರಿಕೆಗಳ ಜತೆಗೆ ವಿವಿಪ್ಯಾಟ್ ಬಳಕೆ ಕುರಿತ ಕರಪತ್ರಗಳನ್ನು ಹಂಚಲು ಹಾಗೂ ಸ್ಥಳೀಯ ಕೇಬಲ್ ಚಾನೆಲ್‍ಗಳಲ್ಲಿ ಸ್ವೀಪ್ ವಿಡಿಯೋಗಳನ್ನು ಪ್ರದರ್ಶಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಸ್ವೀಪ್ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪ್ರತಿಯೊಂದು ನಗರ ಸ್ಥಳೀಯ ಸಂಸ್ಥೆಗಳಿಗೆ ಸ್ವೀಪ್ ಸಮಿತಿ ವತಿಯಿಂದ ತಲಾ ಐವತ್ತು ಸಾವಿರ ರೂಪಾಯಿವರೆಗೆ ಹಾಗೂ ಪಿಂಕ್ ಮತಗಟ್ಟೆಗಳ ಸ್ಥಾಪನೆಗೆ ಚುನಾವಣಾ ಆಯೋಗದಿಂದ ಪ್ರತಿ ಮತಗಟ್ಟೆಗೆ ಹತ್ತು ಸಾವಿರ ರೂಪಾಯಿ ನೀಡಲಾಗುವುದು ಎಂದು ರಾಮಚಂದ್ರನ್ ತಿಳಿಸಿದರು.
ಈ ಬಾರಿ ಮತಗಟ್ಟೆಗಳನ್ನು ಮತದಾರ ಸ್ನೇಹಿಯಾಗಿಸಲು ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ವಿವಿಧ ಬಗೆಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ದೃಷ್ಟಿದೋಷ ಇರುವರಿಗೆ ಭೂತಗನ್ನಡಿ, ವಿಕಲಚೇತನರಿಗೆ ಗಾಲಿಕುರ್ಚಿಗಳನ್ನು ಒದಗಿಸಲು ಸಹ ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ಪ್ರತಿಯೊಬ್ಬರು ಮತಗಟ್ಟೆಗೆ ಬಂದು ತಪ್ಪದೇ ಮತ ಚಲಾಯಿಸಬೇಕು ಎಂದು ಮನವಿ ಮಾಡಿಕೊಂಡರು.
ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಪ್ರಭಾರಿ ಯೋಜನಾ ನಿರ್ದೇಶಕ ಗಣಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪುಂಡಲೀಕ ಅನವಾಲ, ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಗುರುನಾಥ ಕಡಬೂರ ಹಾಗೂ ಸ್ವೀಪ್ ಸಮಿತಿಯ ಸದಸ್ಯರಾಗಿರುವ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.Suggestion To Activate Sweep Function ‘Vote for Voters’

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.