ಉತ್ತಮ ಸಮಾಜಕ್ಕಾಗಿ

ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿ ವಿವಾದ ಬಗೆಹರಿಯಬೇಕಾದರೆ ಬಿಜೆಪಿಯನ್ನು ಬೆಂಬಲಿಸಿ,ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ

Supporting the BJP, BJP national president Amit Shah 

0

ಕಲಬುರಗಿ:(news belgaum)ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಮಹದಾಯಿ ವಿವಾದ ಇತ್ಯರ್ಥವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿ ವಿವಾದ ಬಗೆಹರಿಯಬೇಕಾದರೆ ಬಿಜೆಪಿಯನ್ನು ಬೆಂಬಲಿಸಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ಭರವಸೆ ನೀಡಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಭಿವೃದ್ಧಿ ಮರೀಚಿಕೆಯಾಗಿದ್ದು, News Belgaum-Auto Draft 1ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿದೆ, ರಾಜ್ಯದಲ್ಲಿ ಭ್ರಷ್ಟಾಚಾರದ ಪ್ರಕರಣಗಳು ಹೆಚ್ಚುತ್ತಿವೆ. ಸಿದ್ದರಾಮಯ್ಯ ಅಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದರೆ ಸಿದ್ದರಾಮಯ್ಯ ಎಂದು ಅವರನ್ನು ಲೇವಡಿ ಮಾಡಿದರು.
ಅಪರಾಧ ಆರೋಪ ಎದುರಿಸುತ್ತಿರುವ ಪಿಎಫ್ಐ ಹಾಗೂ ಎಸ್ ಡಿಪಿಐ ಸಂಘಟನೆಗಳ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆದಿರುವುದು ಸಿದ್ದರಾಮಯ್ಯನವರ ಪಕ್ಷಪಾತ ಧೋರಣೆ ತೋರುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಭಾಗದ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆಯವರು 5 ದಶಕಗಳ ಕಾಲ ರಾಜಕೀಯ ಮಾಡಿದ್ದಾರೆ. ಆದರೆ ತಮ್ಮದೇ ಕ್ಷೇತ್ರವನ್ನು ಅಭಿವೃದ್ಧಿಪಡಿಸಿಲ್ಲ ಅವರ ಮಗನನ್ನು ಬೆಳೆಸಿದರು ಎಂದು ಖರ್ಗೆಯವರನ್ನು ಟೀಕಿಸಿದರು.Supporting the BJP, BJP national president Amit Shah

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.