ಉತ್ತಮ ಸಮಾಜಕ್ಕಾಗಿ

ಸಚಿವ ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯಗೆ ಟಾಂಗ್

Talk to Minister DK Shivakumar Siddaramaiah

0

ಬಂಗಾರಪೇಟೆ/ಕೋಲಾರ: (tarun kranti ) ಇಂಧನ ಸಚಿವ ಡಿ.ಕೆ ಶಿವಕುಮಾರ್ ರವರು ಸಿಎಂ ಸಿದ್ದರಾಮಯ್ಯನವರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ. ಕೋಲಾರದ ಬಂಗಾರಪೇಟೆಯಲ್ಲಿ ಕೆಂಪೇಗೌಡ ವೃತ್ತ ಹಾಗೂ ಜೋಡಿ ರಸ್ತೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಾಸ್ಯಾಸ್ಪದವಾಗಿ ಮಾತನಾಡಿದ ಅವರು, ಬಹಳ ಜನ ನನ್ನನ್ನು ಮುಂದಿನ ಸಿಎಂ ಎಂದು ಹೇಳುತ್ತಾರೆ. ಹಾಗಂತ ಜೋರಾಗಿ ಕೂಗಿ ಹೇಳಬೇಡಿ, ಇದು ಸಿಎಂ ಸಿದ್ದರಾಮಯ್ಯ ನವರಿಗೆ ಏನಾದರು ಗೊತ್ತಾದರೆ, ಇರೋ ಸೀಟು ಹೋಗ್ಬಿಡುತ್ತದೆ ಎಂದು ಹೇಳಿದರು.
ನನಗೆ ಈಗಲೆ ಅರ್ಜೆಂಟಿಲ್ಲ, ಶುಭ ಘಳಿಗೆ ಬಂದರೆ ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ, ಅವಕಾಶದ ಸೀಟು ಸಿಕ್ಕರೆ ನಾನು ಕೂತುಬಿಡುತ್ತೇನೆ ಎಂದು ನಗೆ ಚಟಾಕಿ ಹಾರಿಸುತ್ತಲೆ ಸಿಎಂ ಸಿದ್ದರಾಮಯ್ಯ ನವರಿಗೆ ಟಾಂಗ್ ನೀಡಿದರು. ಕೊಟ್ಟ ಕುದುರೆ ಏರದೆ ಮತ್ತೊಂದು ಕುದುರೆ ಏರುವವನು ವೀರನು ಅಲ್ಲ ಶೂರನೂ ಅಲ್ಲ. ಅಧಿಕಾರ ಕೊಟ್ಟಾಗ ಮಾಡದೇ ಹರಿತೀನಿ ಹರಿತೀನಿ ಅಂದರೆ ಹೇಗೆ. ಬಿಜೆಪಿಯವರು ಏನು ಮಾಡಲ್ಲ ಎಂದು ಸಚಿವ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದರು.

Talk to Minister DK Shivakumar Siddaramaiah

Leave A Reply

 Click this button or press Ctrl+G to toggle between Kannada and English

Your email address will not be published.