ಉತ್ತಮ ಸಮಾಜಕ್ಕಾಗಿ

ಬಾಟಲಿಗಳನ್ನು ಟಾಕೀಸ್ ಪಾರ್ಕಿಂಗ ಜಾಗದಲ್ಲಿ ಒಗೆದು ಓಡಿ ಹೋಗಿದ್ದ ಆರೋಪಿಃ ಬಂದನ Talkies bottles were flown in parking space

Talkies bottles were flown in parking space

0

ಬೆಳಗಾವಿ:(news belgaum ) ಅಂದು ದಿನಾಂಕ: 25/01/2018 ರಂದು ಪದ್ಮಾವತ್ ಚಿತ್ರ ಪ್ರದರ್ಶನದ ವೇಳೆಗೆ ರಾತ್ರಿ 9:30 ಗಂಟೆಗೆ ಪ್ರಕಾಶ ಸಿನಿಮಾ ಮಂದಿರದಲ್ಲಿ ಯಾರೋ ಆರೋಪಿತರು ಹೊರಗಡೆಯಿಂದ ಎರಡು ಕೆರೋಸಿನ್ ಇದ್ದ ಬಾಟಲಿಗಳನ್ನು ಟಾಕೀಸ್ ಪಾರ್ಕಿಂಗ ಜಾಗದಲ್ಲಿ ಒಗೆದು ಓಡಿ ಹೋಗಿದ್ದರ ಬಗ್ಗೆ ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತುÉ. ಈ ಕೃತ್ಯದಿಂದ ಆತಂಕದ ವಾತಾವರಣ ಮತ್ತು ಸಾರ್ವಜನಿಕರಿಗೆ ಭೀತಿ ಉಂಟಾಗಿತ್ತು. 

ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಶ್ರೀ ಯು ಎಚ್ ಸಾತೇನಹಳ್ಳಿ ಪಿಐ ಖಡೇಬಜಾರ & ಶ್ರೀ ಬಿ ಆರ್ ಗಡ್ಡೇಕರ ಪಿಐ ಸಿಇಎನ್ ನಗರ ಅಪರಾಧ ಠಾಣೆ ಹಾಗೂ ಅವರ ತಂಡ ಆರೋಪಿ ಸಂಭಾಜಿ ಮಾರುತಿ ಪಾಟೀಲ ವಯಾ: 28 ವರ್ಷ ಸಾ: ಮನೆ ನಂ 53, ಹಲಕರ್ಣಿ ಖಾನಾಪೂರ ಇವನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಸದ್ಯ ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ. ಆರೋಪಿತನು ವಿಚಾರಣೆಯ ವೇಳೆ ಈತನು ಖಾನಾಪೂರ ತಾಲೂಕಿನ ಶ್ರೀ ರಾಮ ಸೇನೆಯ ಸಕ್ರೀಯ ಕಾರ್ಯಕರ್ತ ಇರುವುದಾಗಿ ತಿಳಿಸಿದ್ದಲ್ಲದೇ ಈ ಕೃತ್ಯದಲ್ಲಿ ಇನ್ನಿಬ್ಬರು ತನ್ನೊಡನೆ ಭಾಗಿಯಾದ ಬಗ್ಗೆ ತಿಳಿಸಿದ್ದು. ಉಳಿದ ಇಬ್ಬರು ಆರೋಪಿತರ ಬಗ್ಗೆ ತನಿಖೆ ಕಾರ್ಯ ಪೋಲಿಸ್ರು ಮುಂದುವರಿಸಿದ್ದಾರೆÉ. ಈ ಪ್ರಕರಣವನ್ನು ಚಾಣಾಕ್ಷ್ಯತನದಿಂದ ಬೇಧಿಸಿ ಆರೋಪಿತನನ್ನು ಪತ್ತೆ ಮಾಡಿದ ಪಿಐ ಹಾಗೂ ಅವರ ಸಿಬ್ಬಂದಿಯವರ ಈ ಕಾರ್ಯವನ್ನು ಡಾ|| ಡಿ.ಸಿ.ರಾಜಪ್ಪ, ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ, ಕಾಮತ್ತುಸು ವಿಭಾಗದ ಡಿಸಿಪಿ ಶ್ರೀಮತಿ ಸೀಮಾ ಲಾಟಕರ ಮತ್ತು ಅಪರಾಧ ವಿಭಾಗದ ಡಿಸಿಪಿ ಶ್ರೀ ಮಹಾನಿಂಗಪ್ಪ ನಂದಗಾಂವಿ ರವರು ಶ್ಲಾಘಿಸಿದ್ದಾರೆ. Talkies bottles were flown in parking space

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

 

Leave A Reply

 Click this button or press Ctrl+G to toggle between Kannada and English

Your email address will not be published.