ಉತ್ತಮ ಸಮಾಜಕ್ಕಾಗಿ

ಆನಂದ ಅಪ್ಪುಗೋಳಗೆ ಹೈಕೋರ್ಟ ರಿಲೀಫ್

0

ಬೆಳಗಾವಿ: ಶ್ರೀ ಸಂಗೋಳ್ಳಿ ರಾಯಣ್ಣ ಹಾಗೂ ಶ್ರೀ ಭೀಮಾಂಬಿಕಾ ವಿವಿದೋದ್ಧೇಶ ಸೊಸೈಟಿಯ ಬಹುಕೋಟಿ ಹಣದ ಹಗರಣಕ್ಕೆ ಸಂಬಂಧಿಸಿ ಹಿಂಡಲಗಾ ಜೈಲಿನಲ್ಲಿರುವ ಸಂಸ್ಥಾಪಕ ಆನಂದ ಅಪ್ಪುಗೋಳಗೆ ಉಚ್ಚನ್ಯಾಯಾಲಯ ಇಂದು ಜಾಮೀನು ನೀಡಿದೆ. ಠೇವಣಿದಾರರ ಹಣ ಮರುಪಾವತಿಸದೇ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಅಪ್ಪುಗೋಳನನ್ನು ಬೆಳಗಾವಿ ಪೊಲೀಸರು ಕರೆ ತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಸಿಗದೇ ಜೈಲುಪಾಲಾಗಿದ್ದ ಆನಂದ ಈಗ ಎರಡು ತಿಂಗಳ ನಂತರ ಹೊರಬರಲಿದ್ದಾರೆ. ಜೈಲು ಅಧಿಕಾರಿಗಳಿಗೆ ಆದೇಶ ಪತ್ರ ಸಿಕ್ಕ ನಂತರವೇ ಬಿಡುಗಡೆಯಾಗುವ ಲಕ್ಷಣಗಳಿವೆ. ಪೊಲೀಸ್ ತನಿಖೆಗೆ ತಡೆ ಕೋರಿದ್ದ ಅರ್ಜಿಗೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್ ಈಗ ಸ್ಟೆ ತೆರವು ಮಾಡಿದ್ದರಿಂದ ಅಪ್ಪುಗೋಳ ಜೈಲಿನಿಂದ ಹೊರಬಂದರೂ ಪೊಲೀಸ್ ತನಿಖೆ ಪ್ರಾರಂಭಗೊಳ್ಳಲಿದೆ.

Leave A Reply

 Click this button or press Ctrl+G to toggle between Kannada and English

Your email address will not be published.