ಉತ್ತಮ ಸಮಾಜಕ್ಕಾಗಿ

ಶುಕ್ರವಾರ ಬೆಳ್ಳಿತೆರೆಗೆ ‘ಜಯಸೂರ್ಯ’

0

ಬೆಳಗಾವಿ: ಚಲನಚಿತ್ರ ಉದ್ಯಮ ದಕ್ಷಿಣ ಕರ್ನಾಟಕದವರ ಸ್ವತ್ತು ಎಂಬ ಭಾವನೆ ಹೊಡೆದೋಡಿಸುವ ನಿಟ್ಟಿನಲ್ಲಿ, ಬೆಳಗಾವಿಯ ಯುವ ಪತ್ರಕರ್ತ ಸಂತೋಷ ಶ್ರೀರಾಮುಡು ಹೊಸ ಪ್ರಯತ್ನ ಮಾಡಿದ್ದು ಅವರ ಚೊಚ್ಚಲ ‘ಜಯಸೂರ್ಯ’ ಚಲನಚಿತ್ರ ರಾಜ್ಯಾದ್ಯಂತ ಶುಕ್ರವಾರ ಬಿಡುಗಡೆಯಾಗಲಿದೆ.

ಅಪ್ಪಟ ಗ್ರಾಮೀಣ ಮತ್ತು ಸ್ಥಳೀಯ ಪ್ರತಿಭೆಗಳನ್ನೇ ಬಳಸಿಕೊಂಡು ಚಲನಚಿತ್ರ ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಚಿತ್ರೀಕರಣಗೊಂಡಿದ್ದು, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಮುಖ್ಯಮಂತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಾತಿ, ಭಾಷೆ, ಪ್ರೀತಿ, ಮೋಹ, ಆಸ್ತಿ, ಅಂತಸ್ತು ಇತರ ಎಲ್ಲ ಜೀವನ ಜಂಜಾಟಗಳ ಆಚೆ ಅಸ್ಪ್ರಶ್ಯ ವರ್ಗದ ಹಡುಗನೊಬ್ಬ ಯಾರ ಹೀಯಾಳಿಕೆಗೂ ಗಮನಕೊಡದೆ ಉನ್ನತ ಮಟ್ಟಕ್ಕೆ ಏರಿದ ಸೈನಿಕನ ಸುತ್ತ ಚಿತ್ರ ಹೆಣೆದುಕೊಂಡಿದೆ.

‘ಯಾರ ಹಣೆಬರಹ ಯಾರ ಕೈಯಲ್ಲೂ ಇಲ್ಲ…’ ಸಮಯ ಸಂದರ್ಭ ಮತ್ತು ಅವರವರ ಪರಿಶ್ರಮದ ಮೇಲೆ ಒಳಿತು ಕೆಡುಕಿನ ಹಣೆಬರಹ ನಿರ್ಧಾರವಾಗುತ್ತದೆ ಎಂಬ ಸಂದೇಶವನ್ನು ಧನಾತ್ಮಕವಾಗಿ ಕಟ್ಟಿಕೊಡಲಾಗಿದೆ. ಶುಕ್ರವಾರ ಮಧ್ಯಹಾನ 12ಕ್ಕೆ ಮೊದಲ ಷೋ ಪ್ರಕಾಶ ಮತ್ತು ಐನಾಕ್ಸ್ ಥಿಯೇಟರ್ ಗಳಲ್ಲಿ ರಿಲೇ ಆಗಲಿದ್ದು ಚಿತ್ರಪ್ರೇಮಿಗಳು, ಕಲಾವಿದರು ಹಾಗೂ ಸಾರ್ವಜನಿಕರನ್ನು ಸೆಳೆಯಲಿದೆ.

Leave A Reply

 Click this button or press Ctrl+G to toggle between Kannada and English

Your email address will not be published.