ಉತ್ತಮ ಸಮಾಜಕ್ಕಾಗಿ

ಡೊಂಕು ಕಾಲಿಗೆ ಯಶಸ್ವಿ Elizarov ಶಸ್ತ್ರಚಿಕಿತ್ಸೆ; ಬಾಲಕನಿಗೆ ಮಂದಹಾಸ

0

ಬೆಳಗಾವಿ: ಮಹತ್ತರ ವೈದ್ಯಕೀಯ ಬೆಳವಣಿಗೆಯಲ್ಲಿ ನಗರದ ವಿಜಯಾ ಆರ್ಥೋ ಮತ್ತು ಟ್ರಾಮಾ ಸೆಂಟರ್ ನಿರ್ದೇಶಕ ಡಾ. ರವಿ ಪಾಟೀಲ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹುಟ್ಟಿನಿಂದ ಡೊಂಕಾಗಿದ್ದ ಮಗುವಿನ ಕಾಲು ಉಚಿತವಾಗಿ ಸರಿಪಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂಬೈ, ಬೆಂಗಳೂರು ಮಹಾನಗರಗಳಲ್ಲಿ ಮಾತ್ರ ಲಭ್ಯವಿರುವ ಈಲಿಜರವ್ ತಂತ್ರಜ್ಞಾನ (Elizerov) ಈಗ ನಗರದಲ್ಲೂ ಲಭ್ಯ ಎಂಬುವುದು ಗಮನಕ್ಕೆ ಬಂದಿದೆ.ಪ್ರಕರಣವೊಂದರಲ್ಲಿ ಖಾನಾಪುರದ ವೈಭವ ವಿಷ್ಠೇಕರ(5)ಎಂಬ ಬಾಲಕ ಹುಟ್ಟಿನಿಂದಲೇ ಎಡಗಾಲು ಅಂಕುಡೊಂಕಾಗಿದ್ದು ಜತೆಗೆ ಸುಮಾರು 10 ಸೆಮೀ. ಎಡ ಕಾಲು ಚಿಕ್ಕದಾಗಿತ್ತು. ಶಸ್ತ್ರಚಿಕಿತ್ಸೆ ಮೂಲಕ ಕಾಲು ಸರಿಪಡಿಸಿದ್ದಲ್ಲದೇ ಕಾಲು ಉದ್ದ ಸಹ ಮಾಡಲಾಗುತ್ತಿದೆ. ದಿನಕ್ಕೆ ಕನಿಷ್ಠ 1 ಮಿಮೀ ಬೆಳೆಯುತ್ತ ಸಾಗಿ ಬಲಗಾಲಿನ ಸಮಕ್ಕೆ ಎಡಗಾಲು ಬೆಳೆಯುತ್ತಿದ್ದಂತೆ ಎಲುಬಿನ ಬೆಳವಣಿಗೆ ನಿಲ್ಲಿಸಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿಸಿ ಎಲುವು ಗಟ್ಟಿ ಮಾಡಲಾಗುತ್ತದೆ ಎಂದು ಡಾ. ರವಿ ಪಾಟೀಲ ತಮ್ಮ ಯಶಸ್ವಿ ಶಸ್ತ್ರ ಚಿಕಿತ್ಸೆಯ ಮಾಹಿತಿ ಹಂಚಿಕೊಂಡರು.

ಡಾ. ರವಿ ಪಾಟೀಲ, ಡಾ. ಹಾಲೇಶ ಎನ್. ಬಿ., ಡಾ. ಅರವಿಂದ ಹಂಪನ್ನವರ, ಡಾ. ಶಿವಪ್ರಸನ್ನ, ಡಾ. ಶ್ರೀಧರ, ಡಾ. ಚೌಡಿ ತಂಡ ಈ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿತು. ವಿಶೇಷವೆಂದರೆ ಬಾಲಕನ ಕುಟುಂಬ ಬಡವರಾಗಿದ್ದು ಬಿಪಿಎಲ್ ಕಾರ್ಡದಾರರಾಗಿದ್ದು ಡಾ. ರವಿ ಪಾಟೀಲ ಈ ಸೂಕ್ಷ್ಮ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಿದ್ದರಿಂದ, ಬಾಲಕನ ತಾಯಿ ಮಾಧ್ಯಮಗಳ ಎದುರು ಹರ್ಷ ವ್ಯಕ್ತಪಡಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.