ಉತ್ತಮ ಸಮಾಜಕ್ಕಾಗಿ

ಇದೇ ಮೊದಲ ಬಾರಿಗೆ ಪೊಲೀಸ ಸಿಬ್ಬಂಧಿಗೆ ಭಾರಿ ವ್ಯವಸ್ಥೆ

0

ಬೆಳಗಾವಿ: ಇದೇ ಮೊದಲ ಬಾರಿಗೆ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಆಗಮಿಸುವ ಬೃಹತ್ ಸಂಖ್ಯೆಯ ಸಾವಿರಾರು ಪೊಲೀಸರಿಗೆ ಉತ್ತಮ ಊಟ, ವಸತಿ ವ್ಯವಸ್ಥೆ ವ್ಯವಸ್ಥೆ ಕಲ್ಪಿಸಲಾಗಿದೆ.ಉತ್ತಮ ಬ್ರಾಂಡನ ಅಕ್ಕಿ, ಗೋಧಿ ಹಿಟ್ಟು ಮತ್ತು ತಾಜಾ ತರಕಾರಿ ಬಳಕೆ ಮಾಡಿ ಅಡುಗೆ ತಯಾರಿಸಿ ಬಡಿಸಲಾಗುತ್ತಿದೆ. ಪ್ರತಿ ಪೊಲೀಸ್ ಪೆದೆಗೆ ಮಿನರಲ್ ವಾಟರ್ ಸಹ ನೀಡಲಾಗುತ್ತಿದೆ.ಕೆಐಎಡಿಬಿ, ಚಿಂಡಕ್ ಹಾಲ್, ಬಾಬು ಜಗಜೀವನರಾಮ ಹಾಲ್ ಸೇರಿ ಸುಮಾರು 13 ಸ್ಥಳದಲ್ಲಿ ಬೃಹತ್ ಸುಸಜ್ಜಿತ ಪೆಂಡಾಲಗಳನ್ನು ಹಾಕಲಾಗಿದೆ.ಮಲಗಲು ಹೊಸ ಚಾಪೆ, ಶೌಚಾಲಯ ಬಳಕೆಗೆ ಸ್ಲೀಪರ್, ಮೊಬೈಲ್ ಚಾರ್ಜರ್ ಸಾಕೇಟ್, ಕಂಪಾರ್ಟಮೆಂಟ್ಸ ಸಹ ಒದಗಿಸಲಾಗಿದೆ, ಸ್ವಚ್ಚತೆ ಕಾಯಲು ಡಸ್ಟ್ ಬಿನ್, ಅಗತ್ಯತೆ ಇದ್ದವರಿಗೆ ಸ್ನಾನಕ್ಕೆ ಪ್ರತಿದಿನ ಬಿಸಿನೀರು, ಸಾರಿಗೆಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಟಿ. ಜಿ. ಕೃಷ್ಣಭಟ್ ಹಾಗೂ ಡಿಸಿಪಿ ಅಮರನಾಥರೆಡ್ಡಿ ತಿಳಿಸಿದರು.ಮನೆ ಊಟದ ಅನುಭವ ನೀಡುವಷ್ಟರ ಮಟ್ಟಿಗೆ ಉತ್ತಮ ಆಹಾರ ಬಂದೋಬಸ್ತಗೆ ಬಂದು ತಂಗುವ ಪೊಲೀಸರಿಗೆ ವಿಧಾನಸೌಧದ ಸುತ್ತ ಅಡುಗೆ ತಯಾರಿಸಿ ಬಡಿಸಲಿದ್ದಾರೆ. ಬಹಳ ಅನಿವಾರ್ಯ ಎನ್ನುವಂತಹ ಸ್ಥಳಗಳಲ್ಲಿ ಮಾತ್ರ ಪಾಕೆಟ್ ನಲ್ಲಿ ಆಹಾರ ಸಪ್ಲಾಯ್ ಮಾಡಲಾಗುತ್ತದೆ. ಶಿರಾ- ಉಪ್ಪಿಟ್ಟು, ಪುರಿಭಾಜಿ- ಚಿತ್ರಾಣ್ಣ, ಪುಳಿಯೊಗರೆ- ಶಾವಿಗೆ ಬಾತ್ ಹೀಗೆ ಪ್ರತಿದಿನ twin ತಿಂಡಿ ಇರಲಿದೆ.ಡೇ ಮತ್ತು ನೈಟ್ ಊಟದಲ್ಲಿ ಸ್ವೀಟ್, ಚಪಾತಿ, ಎರಡು ಪಲ್ಯ, ಅನ್ನ ಸಾರು, ಬಾಳೆಹಣ್ಣು ಇರಲಿದೆ. ಪ್ರತಿದಿನ ರಾತ್ರಿ ಕೆಐಎಡಿಬಿ ಸಂಕೀರ್ಣದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ಪೊಲೀಸರಿಗೆ ಅವರ ಸ್ವಪ್ರತಿಭೆಯಿಂದ ನಡೆಯಲಿವೆ. ಮೆಡಿಕಲ್ ಟೀಂ ಸತತ 24 ಗಂಟೆ ಪೊಲೀಸ ಸಿಬ್ಬಂಧಿ ಆರೋಗ್ಯದ ಬಗ್ಗೆ ಗಮನ ಹರಿಸಿದೆ. ಸುಮಾರು ಒಂದು ಕೋಟಿಯಷ್ಟು ಸದ್ಯ ಸರಕಾರ ಅನುದಾನ ನೀಡಿದೆ. ಇನ್ನೂ ಒಂದು ಕೋಟಿ ಹಣ ಬರಲಿದೆ ಎಂದು ಡಿಸಿಪಿ ತಿಳಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.