ಉತ್ತಮ ಸಮಾಜಕ್ಕಾಗಿ

ಪೊಲೀಸ್ ವ್ಯವಸ್ಥೆ ಮತ್ತು ಪ್ರತಿಭಟನೆಗೆ ಸೂಕ್ತ ವ್ಯವಸ್ಥೆ

0

ಬೆಳಗಾವಿ ಚಳಿಗಾಲದ ಅಧಿವೇಶನ ಬಂದೋಬಸ್ತ ಕರ್ತವ್ಯ, ಪೊಲೀಸ್ ವ್ಯವಸ್ಥೆ ಮತ್ತು ಪ್ರತಿಭಟನೆಗೆ ಸೂಕ್ತ ವ್ಯವಸ್ಥೆ ಕುರಿತು.ಪ್ರತಿ ಬಾರಿಯಂತೆ ಕರ್ನಾಟಕ ವಿಧಾನ ಮಂಡಳದ ಅಧಿವೇಶನವು ಈ ಬಾರಿ 13/11/2017 ರಿಂದ 24/11/2017 ರವರೆಗೆ ಜರುಗಲಿದ್ದು, ಸದರಿ ಕಾಲಕ್ಕೆ ಸೂಕ್ತ ಬಂದೋಬಸ್ತ ಒದಗಿಸಲು ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರು 4 ಸಾವಿರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ನಿಯೋಜಿಸಲಾಗಿದೆ. ಈ ಬಾರಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಯವರಿಗೆ ಉತ್ತಮ ಬ್ರಾಂಡ್‍ನ ಅಕ್ಕಿ, ಗೋದಿ ಹಿಟ್ಟು, ತಾಜಾ ತರಕಾರಿ ಬಳಕೆ ಮಾಡಿ ಅಡುಗೆ ತಯಾರಿಸಿ ಉತ್ತಮ ಊಟ ಕಲ್ಪಿಸಲಾಗಿದೆ. ಪೊಲೀಸ್ ಅಧಿಕಾರಿ ಸಿಬ್ಬಂದಿಯವರು ಸುಮಾರು 12 ದಿನ ಸತತವಾಗಿ ಬೆಳಗಾವಿಯಲ್ಲಿ ಇದ್ದು ಕರ್ತವ್ಯ ನಿರ್ವಹಿಸಬೇಕಾಗಿದ್ದರಿಂದ ಅವರಿಗೆ ಯಾವುದೇ ಕೊರತೆಯಾಗದಂತೆ ಹಾಗೂ ಮನೆಯ ಊಟದ ಅನುಭವ ನೀಡುವಷ್ಟರ ಮಟ್ಟಿಗೆ ಉತ್ತಮ ಆಹಾರ ನೀಡಲು ಪ್ರಯತ್ನಿಸಲಾಗುತ್ತಿದೆ. ಬಂದೋಬಸ್ತಗೆ ಬಂದು ತಂಗುವ ಪೊಲೀಸ್‍ರಿಗೆ ವಿಧಾನ ಸೌಧದ ಸುತ್ತ ಹಾಗೂ ತಂಗಿದ ಸ್ಥಳಗಳ ಕಡೆಗೆ ಹೀಗೆ ಸುಮಾರು 7 ಸ್ಥಳಗಳಲ್ಲಿ ಅಡುಗೆ ತಯಾರಿಸಿ ಬಿಸಿಯಾದ ಊಟವನ್ನು ಬಡಿಸಲೆತ್ನಿಸುತ್ತಿದ್ದು, ಬಹಳ ಅನಿವಾರ್ಯ ಎನ್ನುವಂತಹ ಸ್ಥಳಗಳಲ್ಲಿ ಮಾತೃ ಪಾಕೇಟನಲ್ಲಿ ಆಹಾರ ವಿತರಣೆ ಮಾಡಲಾಗುವುದು. ಬೆಳಗಿನ ತಿಂಡಿಗೆ ಶಿರಾ ಉಪ್ಪಿಟ್ಟು, ಪೂರಿಬಾಜಿ ಚಿತ್ರಾನ್ನ ಪುಳಿಯೊಗರೆ, ಶಾವಿಗೆ ಬಾತ್ ಹೀಗೆ ಪ್ರತಿದಿನ “ಟ್ವಿನ್ ತಿಂಡಿ” ನೀಡಲಾಗುವುದು. ಹಗಲು ಮತ್ತು ರಾತ್ರಿ ಊಟದಲ್ಲಿ ಸಿಹಿ, ಚಪಾತಿ, ಎರಡು ತರಹದ ಪಲ್ಯ, ಅನ್ನ, ಸಾಂಬರ ಮತ್ತು ಬಾಳೆ ಹಣ್ಣು ಹೀಗೆ ಊಟ ಮತ್ತು ತಿಂಡಿಯ ವ್ಯವಸ್ಥೆ (Uಟಿಟimiಣeಜ ಈooಜ) ಮಾಡಲಾಗಿದೆ.
ಪ್ರತಿ ಪೊಲೀಸ್ ಪೇದೆಗೆ ಮಿನರಲ್ ವಾಟರ್ ಸಹ ನೀಡಲಾಗುತ್ತಿದ್ದು, ಕೆಐಎಡಿಬಿ, ಚಿಂಡಕ್ ಹಾಲ್, ಬಾಬು ಜಗಜೀವನ ರಾಮ ಹಾಲ್ ಸೇರಿ ಸುಮಾರು 13 ಸ್ಥಳದಲ್ಲಿ ಬೃಹತ್ ಸುಸಜ್ಜಿತ ಪೆಂಡಾಲ್‍ಗಳನ್ನು ಹಾಕಲಾಗಿದೆ. ಸಿಬ್ಬಂದಿಗೆ ಮಲಗಲು ಹೊಸ ಚಾಪೆ, ಶೌಚಾಲಯ ಬಳಕೆಯ ಸ್ಲೀಪರ್ ಮೋಬೈಲ್ ಚಾರ್ಜರ್ ಸಾಕೇಟ್, ಕಂಪಾರ್ಟಮೆಂಟ್ಸ ಸಹ ಒದಗಿಸಲಾಗಿದೆ. ಅದೇ ರೀತಿ ಸ್ವಚ್ಚತೆ ಕಾಪಾಡಿಕೊಂಡು ಬರಲು ಡಸ್ಟಬೀನ್ ಇಡಲಾಗಿದೆ. ಸ್ನಾನಕ್ಕೆ ಪ್ರತಿದಿನ ಬಿಸಿನೀರು ಒದಗಿಸಲಾಗುತ್ತಿದ್ದು, ಬಳಸಲು ಎಲ್ಲ ಸ್ನಾನ ಗೃಹದಲ್ಲಿ ಬಕೇಟ್ ಸಹ ವ್ಯವಸ್ಥೆ ಮಾಡಲಾಗಿದೆ. ಬಂದೋಬಸ್ತ ಕರ್ತವ್ಯದ ಸ್ಥಳಗಳಿಗೆ ನಿಗಧಿತ ಅವಧಿಗೆ ತಲುಪಲು ಸಾರಿಗೆ ಬಸ್ ವ್ಯವಸ್ಥೆ ಸಹ ಮಾಡಲಾಗಿದೆ. ಪ್ರತಿ ದಿನ ರಾತ್ರಿ ಕೆಐಡಿಬಿ ಹಾಲ್‍ನಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗತ್ತಿದ್ದು, ಈ ಕಾರ್ಯಕ್ರಮಗಳನ್ನು ಪೊಲೀಸ್ ಸಿಬ್ಬಂದಿಯವರಿಂದಲೇ ನಡೆಸಿ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡಿ ಅವರ ಒತ್ತಡವನ್ನು ಕಡಿಮೆ ಮಾಡಲಾಗುತ್ತಿದೆ. ಅದಲ್ಲದೇ ಅವರ ಆರೋಗ್ಯದ ಹಿತ ದೃಷ್ಠಿಯಿಂದ ವೈದ್ಯಕೀಯ ತಂಡ ಸತತ 24 ಗಂಟೆ ಅಲ್ಲಿಯೇ ಇದ್ದು, ಪೊಲೀಸ್ ಸಿಬ್ಬಂದಿ ಆರೋಗ್ಯದ ಬಗ್ಗೆ ಗಮನಹರಿಸಲಿದೆ.
ಈ ಬಾರಿ ಅಧಿವೇಶನ ಕಾಲಕ್ಕೆ ಸರ್ಕಾರಕ್ಕೆ ತಮ್ಮ ಸಮಸ್ಯೆಗಳನ್ನು ಹೇಳಲು ರೈತ ಸಂಘ, ಖಾಸಗಿ ವೈದ್ಯರು, ಮೀಸಲಾತಿ ಹೋರಾಟಗಾರರ ಬೃಹತ್ ಪ್ರತಿಭಟನೆಗಳೊಂದಿಗೆ ಸುಮಾರು 40 ಸಂಘ ಸಂಸ್ಥೆಗಳು ಭಾಗವಹಿಸಲಿದ್ದು, ಸದರಿವರ ಪ್ರತಿಭಟನೆಗೆ ಒಟ್ಟು ಜನ ಸಂಖ್ಯೆಗನುಗುಣವಾಗಿ 07 ಬೃಹತ್ ಸುಸ್ಸಜ್ಜಿತ ಪೆಂಡಾಲಗಳನ್ನು ನಿರ್ಮಿಸಿದ್ದು, ಅಲ್ಲಿಯೂ ಸಹ ನೀರು, ಮೈಕ್ ಹಾಗೂ ಧರಣಿ ನಿರತರಿಗೆ ಕುಳಿತುಕೊಳ್ಳಲು ಸೂಕ್ತ ಹಾಗೂ ವ್ಯವಸ್ಥಿತ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ.

Leave A Reply

 Click this button or press Ctrl+G to toggle between Kannada and English

Your email address will not be published.