ಉತ್ತಮ ಸಮಾಜಕ್ಕಾಗಿ

Do or Die: ಮಾದಿಗ ದಂಡೋರ ಸಮಿತಿ ಸರಕಾರಕ್ಕೆ ಎಚ್ಚರಿಕೆ

0

ಬೆಳಗಾವಿ: ಕಳೆದ 21 ವರ್ಷದಿಂದ ಮಾದಿಗ ಮೀಸಲಾತಿಯ ಹೋರಾಟ ನಡೆದಿದೆ, ಆದರೂ ನ್ಯಾಯ ಸಿಕ್ಕಿಲ್ಲ ಎಂದು ಮಾದಿಗ ದಂಡೋರ ಹೋರಾಟ ಸಮಿತಿ ಅಸಮಧಾನ ವ್ಯಕ್ತಪಡಿಸಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ದೇವರಾಜ ಮಾದಿಗ ಮಾತನಾಡಿ ಜಸ್ಟೀಸ್ ಎ. ಜೆ. ಸದಾಶಿವ ಆಯೋಗ ವರದಿ ಕೊಟ್ಟು ಏಳು ವರ್ಷವಾಗಿದೆ. ಆದರೆ ಸದಾಶಿವ ಆಯೋಗದ ವರದಿ ಸರಕಾರ ಅನುಷ್ಠಾನಕ್ಕೆ ತರುತ್ತಿಲ್ಲ. ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಮಾದಿಗರು ಈಗ ಸಜ್ಜಾಗಿದ್ದಾರೆ. ಜಸ್ಟೀಸ್ ಸದಾಶಿವ ಆಯೋಗದ ವರದಿ ಜಾರಿಯಾಗಬೇಕು.

ಈ ಸರಕಾರದ ಕೊನೆಯ ಬೆಳಗಾವಿ ಸೆಶನ್ ನಲ್ಲಿ ರಾಜ್ಯ ಸರಕಾರ ಸದಾಶಿವ ಆಯೋಗದ ವರದಿ ಸ್ವೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಇಲ್ಲದಿದ್ದರೆ ನಾವು ಕಾಂಗ್ರೆಸ್ ಸರಕಾರವನ್ನು ಮುಂಬರುವ ಚುನಾವಣೆಯಲ್ಲಿ ಧೂಳಿಪಟ ಮಾಡುತ್ತೇವೆ. ಶಾಂತಿಯುತ ಹೋರಾಟಕ್ಕೆ ಸರಕಾರ ಬೆಲೆ ಕೊಡಬೇಕು. ಕಳೆದ ಅಧಿವೇಶನದಲ್ಲಿ ನಮ್ಮ ಮೇಲೆ ಸರಕಾರ ದೌರ್ಜನ್ಯ ಮಾಡಿ ಲಾಠಿ ಚಾರ್ಜ ಮಾಡಿ ತಣ್ಣಗಾಗಿಸಲು ಪ್ರಯತ್ನಿಸಿತು. ರಾಜ್ಯದ ಎಲ್ಲ ಶಾಸಕರಿಗೂ ನಮ್ಮ ಬೇಡಿಕೆಯ ಮನವಿ ಸಲ್ಲಿಸಲಾಗಿದೆ. ನಮ್ಮ ಸಮಾಜಕ್ಕೆ ನಮ್ಮವರೇ ಮೋಸ ಮಾಡಿದರೆ ಅಂಥವರ ವಿರುದ್ಧ ಹೋರಾಟ ಮಾಡಿದ್ದೇವೆ. ಸಚಿವ ಎಚ್. ಆಂಜನೇಯ ನಮಗೆ ಬೆಂಬಲಿಸದಿದ್ದರೆ ನಾವು ಅವರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದರು. ಪೊಲೀಸರು ನಾಯಕರನ್ನು ಬಂಧಿಸಬಹುದು, ಆದರೆ ಲಕ್ಷಾಂತರ ಮಾದಿಗರನ್ನು ಅವರು ಏನೂ ಮಾಡಲಾಗದು. ಈ ಬಾರಿ ಮಾಡು ಇಲ್ಲವೇ ಮಡಿ ಎಂಬಂತೆ ಸರಕಾರದಿಂದ ಸ್ಪಷ್ಠ ನಿರ್ಧಾರ ಪಡೆದು ನಾವು ಬೆಳಗಾವಿಯಿಂದ ಹೊರ ಹೋಗುತ್ತೇವೆ ಎಂದರು. ವೆಂಕಟೇಶ ಮಾದಿಗ, ದೇವರಾಜ ಮಾದಿಗ, ಗೋಪಿ ಬಳ್ಳಾರಿ ಮಾದಿಗ, ಡಾ. ಶಿವಸೋಮಣ್ಣ ಇತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.