ಉತ್ತಮ ಸಮಾಜಕ್ಕಾಗಿ

ಉಡುಪಿಯಲ್ಲಿ ನ. 24ರಿಂದ ಮೂರು ದಿನ ಧರ್ಮಸಂಸತ್ ಮಹಾ ಅಧಿವೇಶನ

0

ಬೆಳಗಾವಿ: ವಿಶ್ವ ಹಿಂದೂ ಪರಿಷದ್ ವತಿಯಿಂದ ನ.24, 25 ಮತ್ತು 26 ಕ್ಕೆ ಮೂರು ದಿನ ಉಡುಪಿಯಲ್ಲಿ ಧರ್ಮ ಸಂಸತ್ ಮಹಾ ಅಧಿವೇಶನ ನಡೆಯಲಿದೆ. ವಿಶ್ವ ಹಿಂದೂ ಪರಿಷತ್ ಧಾರ್ಮಿಕ, ಸಾಮಾಜಿಕ ಹಾಗೂ ಧರ್ಮ ಸಂಸ್ಕ್ರತಿ ವಿಕಾಸ ಸಂಸ್ಥೆ ಯಾಗಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ವಿಹಿಂಪ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಗೋಪಾಲಜೀ ಹಾಗೂ ಚಿತ್ ಪ್ರಕಾಶನ ಸ್ವಾಮೀಜಿ ಸುಮಾರು ಎರಡೂ ಸಾವಿರ ಸಾಧು, ಸಂತರು, ಸನ್ಯಾಸಿಗಳು, ಧರ್ಮ ಚಿಂತಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ರಾಮದೇವ ಬಾಬಾ, ಮಾತಾ ಅಮೃತಾನಂದಮಯಿ, ತುಮಕೂರು ಸಿದ್ಧಗಂಗಾ ಸ್ವಾಮೀಜಿ, ರವಿಶಂಕರ ಗುರೂಜಿ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸೇರಿದಂತೆ ಅಸ್ಸಾಂ, ಬಂಗಾಲ, ಜಮ್ಮು ಕಾಶ್ಮೀರ, ಕೇರಳ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ಎಲ್ಲ ಪಂಗಡ, ಪಂಥಗಳ ಹಿಂದೂ, ಜೈನ್, ಸಿಖ್ ಇತರ ಧರ್ಮ ಗುರುಗಳು ಬರಲಿದ್ದಾರೆ ಎಂದರು.

ದೇಶದಲ್ಲಿ ಹಿಂದೂಗಳನ್ನು ಮತಾಂತರಗೊಳಿಸಲಾಗುತ್ತಿದೆ. ಅದನ್ನು ತಡೆಗಟ್ಟಿ ಹಿಂದುತ್ವ ಗಟ್ಟಿಗೊಳಿಸಲಾಗುತ್ತಿದೆ. ಮುಂದಿನ 25 ವರ್ಷಗಳ ರಾಷ್ಟ್ರ ಧರ್ಮಜೀವನದ ಪ್ರಮುಖ ನಿರ್ಧಾರ ಈ ಮೂರು ದಿನಗಳಲ್ಲಿ ಪ್ರಕಟಗೊಳ್ಳಲಿದೆ. ದೇಶದಲ್ಲಿ ಹಿಂದುತ್ವ ಕಾಯ್ದು ಬೆಳೆಸಲು ಈ ಧರ್ಮ ಸಂಸತ್ ಅಧಿವೇಶನ ಪ್ರಮುಖ ನಿರ್ಧಾರ ಪ್ರಕಟಗೊಳ್ಳಲಿದೆ. ಬೆಳಗಾವಿ ಜಿಲ್ಲೆಯಿಂದ ಕನಿಷ್ಠ 250 ಜನ ವಿವಿಧ ಜಾತಿ, ಧರ್ಮ ಮಠಗಳ ಸ್ವಾಮೀಜಿಗಳು, ಸನ್ಯಾಸಿಗಳು, ಧರ್ಮ ಸಂಸ್ಥೆಗಳ ಹಿರಿಯರು ಆಗಮಿಸಲಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಉಡುಪಿಗೆ ಆಗಮಿಸಲಿದ್ದಾರೆ ಎಂದರು.

Leave A Reply

 Click this button or press Ctrl+G to toggle between Kannada and English

Your email address will not be published.