ಉತ್ತಮ ಸಮಾಜಕ್ಕಾಗಿ

“ವಿದೇಶ ವಿನೋದ” ಕಾರ್ಯಕ್ರಮದಲ್ಲಿ ಪ್ರೊ. ಜಿ. ಕೆ. ಕುಲಕರ್ಣಿ

0

ನಮ್ಮಲ್ಲಿರುವ ಹಾಸ್ಯ ಪ್ರಜ್ಞೆ ವಿದೇಶಿಯರಲ್ಲಿಲ್ಲ
ಬೆಳಗಾವಿ ನಮ್ಮ ನಾಡಿನಲ್ಲಿರುವ ಹಾಸ್ಯಪ್ರಜ್ಞೆ ವಿದೇಶಿಯರಲ್ಲಿ ನಾನು ಕಾಣಲಿಲ್ಲ. ಜೀವನವನ್ನು ನಿಜವಾಗಿ ಆನಂದಿಸುವವರೆಂದರೆ ನಮ್ಮ ಜನ. ನಾನು ಮೂರು ತಿಂಗಳು ಲಂಡನ್‍ನಲ್ಲಿದ್ದೆ ಅಲ್ಲಿ ಜನರ ಮುಖದಲ್ಲಿ ನಾನೊಮ್ಮೆಯೂ ಬಿಚ್ಚು ಮನಸ್ಸಿನ ನಗೆಯನ್ನು ಕಾಣಲಿಲ್ಲ. ಬರೀ ಲೆಕ್ಕಾಚಾರದ ಜೀವನ. ಅದು ಶ್ರೀಮಂತ ದೇಶವಿರಬಹುದು ಆದರೆ ಹೃದಯ ಶ್ರಿಮಂತಿಕೆಯಲ್ಲಿ ಸಂಸ್ಕøತಿಯಲ್ಲಿ ಭಾರತವೇ ಉತ್ತುಂಗ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಪ್ರೊ. ಜಿ. ಕೆ. ಕುಲಕರ್ಣಿ ಇಂದಿಲ್ಲಿ ಹೇಳಿದರು.
ನಗರದ ಹಾಸ್ಯಕೂಟ ಹಾಗೂ ಸಾಹಿತ್ಯ ಭವನ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ವಿದೇಶ ವಿನೋದ” ಎಂಬ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ಪ್ರೋ. ಜಿ. ಕೆ ಕುಲಕರ್ಣಿಯವರು ಮೇಲಿನಂತೆ ಅಭಿಪ್ರಾಯ ಪಟ್ಟರು
ಭಾರತ ಹಾಗೂ ಲಂಡನ್ ಕ್ಕೂ ಭೂಮಿ ಆಕಾಶದಷ್ಟು ಅಂತರವಿದೆ. ಅಲ್ಲಿ ಕಾರು , ಬಂಗಲೆ, ದುಡ್ಡು ಹೀಗೆ ಸಾಕಷ್ಟು ಆಯುಷ್ಯಾರಮಿ ಜೀವನವಿರಬಹುದು. ಮನಸ್ಸಿಗೆ ನೆಮ್ಮದಿ ಶಾಂತಿ ಎಂಬುದಿಲ್ಲ. ಯಾವಾಗಲೂ ಅವಸರದ ಜೀವನ. ನಗುವೆಂಬುದು ಅವರ ಸನಿಹವೂ ಸುಳಿಯುವುದಿಲ್ಲ. ಯಾರಾದರೂ ಭೇಟಿಯಾದಾಗ ‘ಹಲೋ…’ ‘ಹಾಯ್…’ ಎಂದು ಕೃತಕ ನಗೆ ಸೂಸುತ್ತಾರೆ ಅಷ್ಟೆ. ಅದೇ ಭಾರತೀಯರು ಯಾವಾಗಲೂ ನಗುಮುಖದವರು ನಗು ನಗುತ್ತ ಎಂಥ ಕಷ್ಟೇ ಬರಲಿ ಎದುರಿಸುವ ಸಾಮಥ್ರ್ಯವನ್ನು ಹೊಂದಿದ್ದಾರೆ.
ನಗು, ಮಾತು, ಭಾವನಾತ್ಮಕ ಸಂಬಂಧಗಳಿಲ್ಲದೇ ಉಸಿರುಗಟ್ಟುವ ವಾತಾವರಣದಿಂದ ತಡೆದುಕೊಳ್ಳಲಾರದೇ ಆರುತಿಂಗಳ ನನ್ನ ವೀಸಾವನ್ನು ಮೂರೇ ತಿಂಗಳಿಗೇ ಮೊಟಕುಗೊಳಿಸಿ ಆ ಉಸಿರುಗಟ್ಟಿಸುವ ವಾತಾವರಣದಿಂದ ತಾಯ್ನಾಡಿಗೆ ಓಡೋಡಿ ಅಲ್ಲ ವಿಮಾನಿನಲ್ಲಿ ಹಾರತ್ತ ಬಂದೆ ಎಂದು ಪ್ರೊ. ಕುಲಕರ್ಣಿ ಹೇಳಿದರು. ಲಂಡನ್‍ಗೆ ಹೋಗುವ ಮುಂದೆ ಹಾಗೂ ಅಲ್ಲಿಯ ನಡೆದ ಘಟನೆಗಳನ್ನು ರಸವತ್ತಾಗಿ ಹೇಳಿ ಜನರನ್ನು ನಗೆಗಡಲಲ್ಲಿ ತೇಲಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಪತ್ರಕತ್ರ ಭಿಮಸೇನ ತೊರಗಲ್ಲ ವಿವಿಧ ವಿಷಯಗಳೊಂದಿಗೆ ಪ್ರತಿ ತಿಂಗಳೂ ಹಾಸ್ಯಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಉದಯೋನ್ಮುಖರಿಗೆ ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸುತ್ತಿರುವ ಹಾಸ್ಯಕೂಟದ ಕಾರ್ಯ ಶ್ಲಾಘನೀಯವಾದುದು ಈ ಸಂಘಟನೆ ಅಖಂಡ ಆಯುಷ್ಯನ್ನು ಹೊಂದಲಿ ಎಂದು ಹಾರೈಸಿದರು.
ಕಾರ್ಯಕ್ರಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ ಎಲ್. ಎಸ್. ಶಾಸ್ತ್ರಿ ಥೈಲ್ಯಾಂಡ್ ದೇಶ ಅಪ್ಸರೆಯರ ನಾಡು. ಜಗತ್ತಿನ ಯಾವ ಮೂಲೆಯಲ್ಲಿಯೂ ಸಿಗದ ನಗಮೊಗದ ಚೆಲುವೆಯರಿಲ್ಲಿ ಸಿಗುತ್ತಾರೆ. ನಗುಮೊಗದ ಬಾಲೆಯರನ್ನು ಕಂಡು ನಮ್ಮ ಆಯಾಸ ಪರಿಹಾರ ಮಾಡಿಕೊಳ್ಳಬಹುದು. ಇಲ್ಲಿಯವರ ಹಾಸ್ಯಪ್ರಜ್ಞೆ ಬಹಳ ಮುಗ್ಧವಾದದ್ದು, ಹಾಗೆಯೇ ಸಭ್ಯತೆಯಿಂದ ಕೂಡಿದ್ದು ಎಂದು ಥೈಲ್ಯಾಂಡ್ ದೇಶದ ಹಾಸ್ಯ ಕುರಿತು ಹೇಳಿದರು.
ಪ್ರಾಯೋಜಕತ್ವವನ್ನು ವಹಿಸಿದ್ದ ಶ್ರೀಮತಿ ಸುನಿತಾ ಪಾಟೀಲ ನಾನು ಕೂಡಿಟ್ಟ ಹಣವನ್ನು ನೂರಾರು ಜನರನ್ನು ನಗೆಸಲು ವ್ಯಯ ಮಾಡುತ್ತಿರುವುದು ನನಗೆ ಖುಷಿಯನ್ನುಂಟು ಮಾಡಿದೆ. ನವೆಂಬರ್ ರಾಜ್ಯೋತ್ಸವ ಸಂಭ್ರಮ ಒಂದೆಡೆಯಾದರೆ, ವೀರರಾಣಿ ಚೆನ್ನಮ್ಮನ ಜನ್ಮ ದಿನ, ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಜನ್ಮದಿನ, ಮಕ್ಕಳ ದಿನಾಚಾರಣೆ ಹೀಗೆ ಹಲವಾರ ಮಹತ್ತರ ಘಟನೆಗಳನ್ನು ಹೊಂದಿರುವ ಈ ತಿಂಗಳನ್ನೇ ಪ್ರಾಯೋಜಕತ್ವ ನೀಡಲು ಆಯ್ದುಕೊಂಡೆ ಪ್ರತಿ ವರ್ಷವೂ ನಾನು ಈ ತಿಂಗಳೂ ಪ್ರಾಯೋಜಕತ್ವವನ್ನು ವಹಿಸಿಕೊಳ್ಳುವ ಭರವಸೆಯನ್ನು ನೀಡಿದರು.
ನಿವೃತ್ತ ಬಿ.ಎಸ್. ಎನ್.ಎಲ್ ಅಧಿಕಾರಿ ಎಸ್.ವಿ ದೀಕ್ಷೀತ, ಸಿಂಡೀಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಸಿ. ಜಿ. ಮುನವಳ್ಳಿ ಹಾಗೂ ಹಾಸ್ಯಕೂಟ ಕಲಾವಿದರಾದ ಅಶೋಕ ಮಳಗಲಿ ತಮ್ಮ ವಿದೇಶ ಪ್ರವಾಸದ ಅನುಭವಗಳನ್ನು ಹಂಚಿಕೊಳ್ಳುತ್ತ ಭಾರತೀಯರಿಗೆ ವಿದೇಶಿ ವ್ಯಾಮೋಹ ಕುರಿತಂತೆ, ತಮಗೊದಗಿ ಬಂದ ಫಜೀತಿ ಮಾತೃಭಾಷೆಯಿಂದ ಪಾರಾದದ್ದು, ಅಮೇರಿಕದಲ್ಲಿ ಬ್ರಹ್ಮದೇವರ ಗುಡಿಯಿರುವ ಕುರಿತಂತೆ ಹಲವಾರು ವಿಷಯಗಳನ್ನು ನವಿರಾದ ಹಾಸ್ಯದೊಂದಿ ಹಂಚಿಕೊಂಡು ಜನರನ್ನು ರಂಜಿಸಿದರು.
ಗಾಯಕಿ ಮಂಜುಳಾ ಅರಿಸಿದ್ಧಿ ಹಾಗೂ ತಂಡದವರಿಂದ ಗಾಯನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನಾಡಿದರು. ಜಿ. ಎಸ್ ಸೋನಾರ ನಿರೂಪಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.