ಉತ್ತಮ ಸಮಾಜಕ್ಕಾಗಿ

ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಿ- ಗೊಪಾಲ ಜಿನಗೌಡ

0

ಬೆಳಗಾವಿ.ನ.12: ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ವಿದ್ಯಾರ್ಥಿ ದಿಸೆಯಿಂದಲೆ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಬೇಕೆಂದು ಉದ್ಯಮಿ ಗೋಪಾಲ ಜಿನಗೌಡ ಅವರು ಇಂದಿಲ್ಲಿ ಹೇಳಿದರು.
ಬೆಳಗಾವಿಯ ಜಿಐಟಿ ಸಭಾಂಗಣದಲ್ಲಿ ರವಿವಾರದಂದು ಜೈನ ಇಂಟರ್‍ನ್ಯಾಷನಲ್ಲ ಟ್ರೆಡ್ ಆರ್ಗನೈಸ್‍ಜೇಷನ ಸಂಸ್ಥೆಯ (ಜಿತೋ) ವತಿಯಿಂದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗಾಗಿ ವೃತ್ತ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಬೇಕೆಂದು ಅವರು ಹೇಳಿದರು.
ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಉನ್ನತ ಶಿಕ್ಷಣ ಹಾಗೂ ತಾವು ಮುಂದೆ ಮಾಡುವ ವೃತ್ತಿಯ ಬಗ್ಗೆಯೂ ಚಿಂತನೆ ನಡೆಸಿ, ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಬೇಕು. ಯಾವುದೇ ವೃತ್ತಯಲ್ಲಿದ್ದರೂ ಸಹ ಲೋಭ, ಕಾಮ, ಕ್ರೋಧ,ಮದ ಮತ್ತು ಮತ್ಸರ ಭಾವನೆಗಳನ್ನು ತೊಡೆದುಹಾಕಿ ಮುಕ್ತ ಹಾಗೂ ಶುದ್ದ ಮನಸ್ಸಿನಿಂದ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರ ಉದ್ಯಮ ಮತ್ತು ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ತಿಳಿಸಿದ ಅವರು,ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಕಠಿಣ ಪರಿಶ್ರಮ ಹೊಂದಬೇಕು. ಸಂಬಂಧಪಟ್ಟ ವೃತ್ತಿ ಮತ್ತು ಉದ್ಯಮದ ಬಗ್ಗೆ ಉತ್ತಮ ಜ್ಞಾನ ಹೊಂದಬೇಕು. ಅನುಭವಸ್ಥರಿಂದ ನಿರಂತರ ಮಾರ್ಗದರ್ಶನ ಪಡೆಯಬೇಕೆಂದು ಅವರು ಸಲಹೆ ನೀಡಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿನ ಕೌಶಲ್ಯವನ್ನು ಅರಿತುಕೊಂಡು ವೃತ್ತಿ ಆಯ್ಕೆಮಾಡಿಕೊಳ್ಳಬೇಕು. ನಿರಂತರ ಪರಿಶ್ರಮ ಮತ್ತು ಅಧ್ಯಯನದಲ್ಲಿ ನಿರತವಾಗಿರಬೇಕು. ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಕ್ಯಾರಿಯರ ಎಕ್ಸ್‍ಲ್ ಸಂಸ್ಥೆಯ ನಿರ್ದೇಶಕ ವಿನೋದ ದೇಶಪಾಂಡೆ ಹಾಗೂ ಹೆಡಾ ಉದ್ಯೋಗ ಸಮೂಹದ ರಾಜೇಶ ಹೆಡಾ ಅವರು ಉಪನ್ಯಾಸ ನೀಡಿ, ಎಸ್.ಎಸ್.ಎಲ್.ಸಿ. ನಂತರ ಯಾವ ವೃತ್ತಿಯನ್ನು ಆಯ್ಕೆಮಾಡಿಕೊಳ್ಳಬೇಕು. ಯಾವ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರೆ ಯಾವ ವೃತ್ತಿಯ ಶೀಕ್ಷಣ ಪಡೆಯಬಹುದು ಮತ್ತು ಉದ್ಯೋಗ ಆಯ್ಕೆ ಮಾಡಿಕೊಳ್ಳಬಹುದು ಎಂಬ ವಿಷಯಗಳ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು.
ಜಿತೋ ಸಂಸ್ಥೆಯ ಬೆಳಗಾವಿ ವಿಭಾಗದ ಅಧ್ಯಕ್ಷ ಸಂತೋಷ ಪೋರವಾಲ ಅತಿಥಿಗಳನ್ನು ಸ್ವಾಗತಿಸಿದರು. ನರೇಂದ್ರ ಗಾಡಿಯಾ ಪ್ರಾಸ್ತಾವಿಕವಾಗಿ ಮಾತನಾಡಿ, ಜಿತೋ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆ ಮೇಲೆ ಕಾರ್ಯಕ್ರಮದ ಸಂಯೋಜಕ ವೀರಧವನ ಉಪಾಧ್ಯೆ , ಸಂಜು ದೊಡ್ಡಣ್ಣವರ ಸೇರಿದಂತೆ ಜಿತೋ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು . ಈ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಐಶ್ವರ್ಯ ದೇಸಾಯಿ ಹಾಗೂ ಸಾಹಿತ್ಯ ದೊಡ್ಡಣ್ಣವರ ಕಾರ್ಯಕ್ರಮ ನಿರೂಪಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.