ಉತ್ತಮ ಸಮಾಜಕ್ಕಾಗಿ

‘ಬೆಳಕಿನ ಕನ್ನಡಿ’ ಮಕ್ಕಳ ಚಲನಚಿತ್ರ ಟ್ರೇಲರ್ ಅನಾವರಣ

0

ಬೆಳಗಾವಿ: ‘ಬೆಳಕಿನ ಕನ್ನಡಿ’ ಮಕ್ಕಳ ಚಲನಚಿತ್ರದ ಟ್ರೇಲರ್ ಬಿಡುಗಡೆ ಇಂದು ನಗರದ ಮಿಲನ್ ಹೊಟೇಲ್ ನಲ್ಲಿ ನಡೆಯಿತು. ಚಿತ್ರಕತೆ ಬರೆದ ಉಮೇಶ ಬಡಿಗೇರ ಮಾತನಾಡಿ ಸಾಮಾಜಿಕ ಸಂದೇಶ ಹೊಂದಿದ ಕತೆಯಿದು. ಕಳೆದ ಒಂದು ವರ್ಷದಿಂದ ಚಿತ್ರ ನಿರ್ಮಾಣಕ್ಕೆ ಬಹಳ ಶ್ರಮ ಮಾಡಲಾಗಿದೆ. ಖ್ಯಾತ ಮಕ್ಕಳ ನಟ ಪುಟ್ಟರಾಜ ಇದರಲ್ಲಿ ಪ್ರಮುಖ ನಾಯಕ ಪಾತ್ರ ವಹಿಸಿದ್ದು ವಿಭಿನ್ನ ಶೈಲಿಯ ಚಿತ್ರದಲ್ಲಿ ತಾಂತ್ರಿಕತೆ ಅತ್ಯುಚ್ಚವಾಗಿ ಬಳಸಲಾಗಿದೆ. ಜಿಲ್ಲೆಯ ಗೊರವನಕೊಳ್ಳ ಗ್ರಾಮದಲ್ಲಿ ಈ ಚಿತ್ರ ಮೂಡಿ ಬಂದಿದೆ, ಸಂಪೂರ್ಣ ದೇಶಿಯತೆ, ಸ್ಥಳಿಯ ಸಂಸ್ಕ್ರತಿಯ ಅನಾವರಣ ಇದರಲ್ಲಿದೆ ಎಂದರು.

ಪುಟ್ಟರಾಯ ಮಾತನಾಡಿ ನನಗೆ ಈ ಅಪರೂಪದ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಲು ಬಹಳ ಹೆಮ್ಮೆ ಆನಂದ ಎಂದರು. ಸುಭಾಷ ಏಣಗಿ, ಅನಂತ ಚೋಪ್ರಾ, ಎಸ್. ಪಿ. ಧಾರವಾಡಕರ, ರಾಜು ಟೋಪನ್ನವರ, ಅಭಿಷೇಕ ಜನವಾಡ, ಉಮೇಶ ಬಡಿಗೇರ, ಬಸವರಾಜ ಹಮ್ಮಿಣಿ, ಚಿತ್ರದ ಸಹ ನಾಯಕ ಪುಣಿತ ಶಿವಪೂಜಿ, ಕಳ ನಾಯಕ ಮಹಾದೇವ, ಪುಟ್ಟರಾಜ ಹೂಗಾರ, ಮುರಗೇಶ ಶಿವಪೂಜಿ, ಅಶೋಕ ಚಂದರಗಿ, ಶಿವರಾಯ ಏಳುಕೋಟಿ ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.