ಉತ್ತಮ ಸಮಾಜಕ್ಕಾಗಿ

ಬೆಳಗಾವಿ ಅಧಿವೇಶನ ಎಫೆಕ್ಟ್ : ನಗರಕ್ಕೆ ನೀಡಲಾಗುತ್ತಿದೆ ಫಿನಿಶಿಂಗ ಟಚ್

0

ಬೆಳಗಾವಿ: ಸೊಮವಾರದಿಂದ ಆರಂಭಗೊಳ್ಳುವ ವಿಧಾನ ಮಂಡಲದ ಚಳಿಗಾಲ ಅಧಿವೇಶನಕ್ಕೆ ನಗರ ನವವಧುವಿನಂತೆ ಸಿಂಗಾರಗೊಳ್ಳುತ್ತಿದ್ದು ಸಮರೋಪಾದಿಯಲ್ಲಿ ಕೊನೇ ಘಳಿಗೆಯ ಕಾರ್ಯಗಳು ನಡೆಯುತ್ತಿವೆ.ನಗರದ ತುಂಬೆಲ್ಲಾ ಧೂಳು ಹಿಡಿದಿದ್ದ ರಸ್ತೆಗಳನ್ನು ನೀರಿನ ಪ್ರೆಶರ್ ಉಪಯೋಗಿಸಿ ಸ್ವಚ್ಛಗೊಳಿಸಲಾಗುತ್ತಿದೆ. ಗಣ್ಯರು ಓಡಾಡುವ ಪ್ರಮುಖ ರಸ್ತೆಗಳ ವಿಭಜಕಗಳಿಗೆ ಬಣ್ಣ ಬಳಿಯಲಾಗುತ್ತಿದೆ. ರಸ್ತೆಗಳ ಮಧ್ಯ ಹಾಗೂ ಅಕ್ಕಪಕ್ಕದಲ್ಲಿ ಹಳದಿ ಬಿಳಿ ಮಾರ್ಗದರ್ಶಿ ಗೆರೆಗಳನ್ನು ಎಳೆಯಲಾಗಿದ್ದು ಪಾರ್ಕಿಂಗ್ ಜಾಗಗಳನ್ನು ಗುರುತಿಸಲಾಗಿದೆ. ನಗರದ ಪ್ರಮುಖ ರಸ್ತೆಗಳ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದ್ದು , ಕ್ರಿಮಿನಾಶಕ ಸಿಂಪಡಿಸಲಾಗಿದೆ.ಅದೇ ರೀತಿ ಕೆಲದಿನಗಳ ಹಿಂದೆ ಅಳವಡಿಸಿದ ಮಲ್ಟಿ ಕಲರ್ ರಸ್ತೆ ದೀಪಗಳನ್ನು ಉಜ್ವಲಿಸುವ ಕಾರ್ಯವನ್ನು ಹೆಸ್ಕಾಂ ನವರು ಅವಿರತವಾಗಿ ನಡೆಸುತ್ತಿದ್ದಾರೆ. ನಗರದೆಲ್ಲೆಡೆ ಪೋಲಿಸ್ ಸರ್ಪಗಾವಲು ಹಾಕಲಾಗಿದ್ದು, ರಸ್ತೆಗಳಲ್ಲಿ ಹೆಚ್ಚಾಗಿ ಸರ್ಕಾರಿ ವಾಹನಗಳೇ ಕಾಣಿಸಿಕೊಳ್ಳುತ್ತಿವೆ. ನಗರದಲ್ಲಿನ ಹೋಟೇಲಗಳಲ್ಲಿ ಬರುವ ಅಥಿತಿಗಳಿಗಾಗಿ ಸಮರ್ಪಕ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಸಂಪೂರ್ಣ ಜಿಲ್ಲಾಡಳಿತ ಅಧಿವೇಶನದ ಯಶಸ್ಸಿಗೆ ಶೃಮಿಸುತಿದ್ದು ನಗರದ ವ್ಯಾಪಾರಸ್ಥರಲ್ಲಿ, ಮಾರುಕಟ್ಟೆಗಳಲ್ಲಿ ಹೊಸ ಉತ್ಸಾಹ ಕಾಣ ಸಿಗುತ್ತಿದೆ.

Leave A Reply

 Click this button or press Ctrl+G to toggle between Kannada and English

Your email address will not be published.