ಉತ್ತಮ ಸಮಾಜಕ್ಕಾಗಿ

ಸಚಿವ ಅನಂತಕುಮಾರ ಅವಹೇಳನ; ಬಿಜೆಪಿಯಿಂದ AV ಬಿಡುಗಡೆ

0

ಬೆಳಗಾವಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಒಬ್ಬ ಆತಂಕವಾದಿ ಎಂದು ಅವಹೇಳನ ಮಾಡಿರುವ ಸಾದಿಕbಮಿರ್ಜಾ ಎಂಬಾತನ ವಿರುದ್ಧ ಸ್ವಯಂ ಪ್ರೇರಿತ ಕೇಸ್ ಪೊಲೀಸರು ಏಕೆ ದಾಖಲಿಸಿಲ್ಲ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದರು. ಬಿಜೆಪಿ ನಗರಾಧ್ಯಕ್ಷ ರಾಜೇಂದ್ರ ಹರಕುಣಿ ಇಂದು ಸುದ್ದಿಗೋಷ್ಠಿ ನಡೆಸಿ ಶಾಸಕ ಸಂಜಯ ಪಾಟೀಲ ಮತ್ತು ಕಾರ್ಯಕರ್ತರ ಮೇಲೆ ಸ್ವಯಂ ಪ್ರೇರಣೆಯ ಪೊಲೀಸ್ ಕೇಸ್ ಆಗಿದೆ ಆಗಲಿ. ಟಿಪ್ಪು ಸುಲ್ತಾನ ಸಂಘರ್ಷ ಸಮಿತಿಯ ಸಾದಿಕ್ ಮಿರ್ಜಾ ಅವಹೇಳನಕಾರಿ ಹೇಳಿಕೆ ಆಗಲೇ ನೀಡಿದ್ದಾರೆ, ಟಿಪ್ಪು ಸುಲ್ತಾನ ಜಯಂತಿ ಸರಕಾರಿ ವೇದಿಕೆಯಲ್ಲಿ ಶಾಸಕ ಫಿರೋಜ್ ಸೇಠ್ ಹಿಂದೂ ನಾಯಕರು ಹಾಗೂ ಹಿಂದೂಪರ ಸಂಘಟನೆಗಳ ವ್ಯಂಗ್ಯ ಅವಹೇಳನ ಮಾಡಿದ್ದಾರೆ ಪೊಲೀಸರು ಅವರಿಬ್ಬರ ಎದುರು ಏಕೆ ಕೇಸ್ ಹಾಕಲಿಲ್ಲ ಎಂದು ಪ್ರಶ್ನಿಸಿದರು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಒಬ್ಬ ಆತಂಕವಾದಿ ಎಂದು ಟಿಪ್ಪು ಸುಲ್ತಾನ ಸಂಘರ್ಷ ಸಮಿತಿಯ ಸಾದಿಕ ಮಿರ್ಜಾ ಮಾತನಾಡಿದ್ದಾನೆ ಎಂದ ಅವರು ಅದಕ್ಕೆ ಸಂಬಂಧಿಸಿದ ವಿಡಿಯೋ ಆಡಿಯೋ ಕ್ಲಿಪ್ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಪೊಲೀಸ್ ಮೇಲೆ ನಮಗೆ ವಿಶ್ವಾಸ ಕಳೆದುಹೋಗಿದೆ. ಸ್ವಯಂ ಪ್ರೇರಣೆಯಿಂದ ಕೇಸ್ ದಾಖಲಿಸಿಕೊಳ್ಳುವುದಾದರೆ ಅಂತಹ ಅನೇಕ ಅವಹೇಳನಕಾರಿ ಭಾಷಣಗಳು ಅನೇಕರಿಂದ ನ‌ಡೆದಿವೆ. ಅದನ್ನು ಪೊಲೀಸ್ ಇಲಾಖೆ ಗಮನಿಸಲಿ. ಪೊಲೀಸ್ ಆಯುಕ್ತರನ್ನು ಭೇಟಿ ಆಗಿ ಚರ್ಚಿಸುತ್ತೇವೆ. ಶಾಸಕ ಸೇಠ್ ಮತ್ತು ಸಾದಿಕ್ ಮಿರ್ಜಾ ಅವರ ಮೇಲೆ ಪೊಲೀಸರು ಕೇಸ್ ದಾಖಲಿಸದಿದ್ದರೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗುವುದು, ಜತೆಗೆ ಬಿಜೆಪಿ ಪ್ರತಿಭಟನೆ ಹಾದಿ ಹಿಡಿಯಲಿದೆ ಎಂದರು.

ಅನಿಲ ಬೆನಕೆ, ದೀಪಕ ಜಮಖಂಡಿ, ಉಜ್ವಲಾ ಬಡವನಾಚೆ, ದೀಪಾ ಕುಡಚಿ, ರಾಜು ಟೋಪನ್ನವರ ಇತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.