ಉತ್ತಮ ಸಮಾಜಕ್ಕಾಗಿ

ಮಾಧ್ಯಮ ಕೇಂದ್ರ ಉದ್ಘಾಟನೆ

0

ಬೆಳಗಾವಿ: ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ಅಂಗವಾಗಿ ಇಲ್ಲಿನ ಸುವರ್ಣ ವಿಧಾನಸೌಧದ ಎರಡನೇ ಮಹಡಿಯಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕೇಂದ್ರವನ್ನು ವಿಧಾನಸಭೆಯ ಸಭಾಧ್ಯಕ್ಷರಾದ ಕೆ.ಬಿ. ಕೋಳಿವಾಡ ಅವರು ಉದ್ಘಾಟಿಸಿದರು.
ಏಕಕಾಲದಲ್ಲಿ ಸುಮಾರು 80ಕ್ಕೂ ಹೆಚ್ಚು ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದ ಪ್ರತಿನಿಧಿಗಳು ಸುದ್ದಿ ರವಾನಿಸಲು ಅನುಕೂಲವಾಗುವಂತೆ ಗಣಕಯಂತ್ರಗಳು, ಅಂತರ್ಜಾಲ, ವೈಫೈ ವ್ಯವಸ್ಥೆ, ಸ್ಕ್ಯಾನರ್, ಪ್ರಿಂಟರ್, ಝುರಾಕ್ಸ್ ಯಂತ್ರಗಳ ವ್ಯವಸ್ಥೆ ಮಾಡಲಾಗಿದೆ.
ಉಭಯ ಸದನಗಳ ಕಲಾಪಗಳನ್ನು ನೇರವಾಗಿ ವೀಕ್ಷಿಸಲು ಎಲ್‍ಇಡಿ ಟಿ.ವಿ ಗಳನ್ನು ಮಾಧ್ಯಮ ಕೇಂದ್ರದಲ್ಲಿ ಅಳವಡಿಸಲಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಡಾ.ಪಿ.ಎಸ್. ಹರ್ಷ, ಜಂಟಿ ನಿರ್ದೇಶಕರಾದ ರವಿಕುಮಾರ ಹಾಗೂ ಎ.ಆರ್. ಪ್ರಕಾಶ, ಉಪನಿರ್ದೇಶಕ ಬಸವರಾಜ ಕಂಬಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.