ಉತ್ತಮ ಸಮಾಜಕ್ಕಾಗಿ

ಜಾರ್ಜ್ ರಾಜೀನಾಮೆಗೆ ಪ್ರತಿಪಕ್ಷ ಗಳ ಒತ್ತಾಯ, ಉಗ್ರಪ್ಪ ತರಾಟೆಗೆ; ತೀವ್ರ ಗೊಂದಲ

0

ಬೆಳಗಾವಿ: ಡಿವೈಎಸ್ಪಿ ಗಣಪತಿ ಭಟ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವ ಕೆ. ಜೆ. ಜಾರ್ಜ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಪರಿಷತ್ತಿನಲ್ಲಿ ಒತ್ತಾಯ ಮಾಡಿ ಗದ್ದಲ ಎಬ್ಬಿಸಿದವು. ಪ್ರತಿ ಪಕ್ಷದ ನಾಯಕ ಕೆ. ಎಸ್. ಈಶ್ವರಪ್ಪ ವಿಷಯ ಪ್ರಸ್ತಾಪಿಸಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಗಣಪತಿ ಭಟ್ ಆತ್ಮಹತ್ಯೆ ಪ್ರಕರಣದಲ್ಲಿ ಅಂದಿನ ಗೃಹ ಸಚಿವ ಜಾರ್ಜ್, ಎಡಿಜಿಪಿ ಅಶಿತಮೋಹನ ಪ್ರಸಾದ ಹಾಗೂ ಡಿಐಜಿ ಪ್ರಣಬ್ ಮೊಹಾಂತಿ ಆರೋಪಿಗಳಾಗಿದ್ದು ಎಫ್ ಐ ಆರ್ ಆಗಿದೆ. ಆದರೂ ಕಾಂಗ್ರೆಸ್ ಸರಕಾರ ಜಾರ್ಜ ರಾಜೀನಾಮೆ ಪಡೆಯುತ್ತಿಲ್ಲ ರಾಜೀನಾಮೆ ಪಡೆದು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳಗಳಬೇಕೆಂದರು.

ಈ ಸಂದರ್ಭ ಸರಕಾರವನ್ನು ಪ್ರತಿಪಾದಿಸಿಕೊಳ್ಳಲು ನಡುವೆ ಬಂದಾಗ ಉಗ್ರಪ್ಪ ಮತ್ತು ಈಶ್ವರಪ್ಪ ನಡುವರ ತೀವೃ ವಾಗ್ವಾದ ನಡೆಯಿತು. ಜೆಡಿಎಸ್ ನ ಎಚ್. ಡಿ. ರೇವಣ್ಣ ಸಹ ಮಧ್ಯಪ್ರವೇಶಿಸಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಉಗ್ರಪ್ಪ ಸಭಾಪತಿ ಶಂಕರಮೂರ್ತಿಗೆ ಸೂಕ್ತ ಗೌರವ ಕೊಡಲಿಲ್ಲ ಎಂದು ಪ್ರತಿಪಕ್ಷದ ಸದಸ್ಯರು ಶಿಸ್ತು ಕಲಿಯುವಂತೆ ಉಗ್ರಪ್ಪಗೆ ತರಾಟೆಯ ತಿಳಿವಳಿಕೆ ನೀಡಿದರು.

ಸಿ. ಎಂ. ಇಬ್ರಾಹಿಂ ಅವರು ಉತ್ತರ ಕರ್ನಾಟಕದ ಬಗೆಗಿನ ದಮಸ್ಯೆಗಳ ಬಗೆಗೆ ಚರ್ಚೆ ಹೆಚ್ಛಿಸಿದರೆ ಸೂಕ್ತ ಎಂದು ತಿಳಿ ಹೇಳಿದರು. ಗದ್ದಲ ಪ್ರಾರಂಭವಾಗಿ ಚರ್ಚೆ ಮಧ್ಯಾಹ್ನಕ್ಕೆ ಮುಂದೂಡಿತು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: