ಉತ್ತಮ ಸಮಾಜಕ್ಕಾಗಿ

ದಿವಂಗತ ಗಣ್ಯರಿಗೆ ದ್ವಿಸದನಗಳ ಗೌರವಾರ್ಪಣೆ

0

ಬೆಳಗಾವಿ (ಸುವರ್ಣಸೌಧ): ಇಂದು ಸುವರ್ಣಸೌಧ ದಲ್ಲಿ ಸರಿಯಾಗಿ 11:10 ಕ್ಕೆ ವಂದೇ ಮಾತರಂ ಗೀತೆಯೊಂದಿಗೆ ಪ್ರಾರಂಭವಾದ ಪರಿಷತ್ ಮತ್ತು ವಿಧಾನಸಭೆ ಕಲಾಪದಲ್ಲಿ ಇತ್ತೀಚೆಗೆ ಮಡಿದ ರಾಜಕೀಯ ದಿಗ್ಗಜರನ್ನು ಸ್ಮರಿಸಿಕೊಂಡು ಗೌರವಾರ್ಪನೆ ಸಲ್ಲಿಸಲಾಯಿತು.

ಮಾಜಿ ಮುಖ್ಯಮಂತ್ರಿ ದಿ. ಎನ್, ಧರ್ಮಸಿಂಗ್, ದಿ. ಖಮರುಲ್ಲಾ ಇಸ್ಲಾಂ, ದಿ. ರಾಮಬಾಹು ಪೋತದಾರ, ಶಾಸಕರಾಗಿದ್ದ ದಿ. ಚಿಕ್ಕಮಾದು, ದಿ. ಏಣಗಿ ಬಾಳಪ್ಪ, ದಿ. ಯಕ್ಷಗಾನ ಕಲಾವಿದ ದಿ. ಚಿಟ್ಟಾಣಿ ರಾಮಚಂದ್ರ, ದಿ. ವಿಧ್ಯಾಧರ ಗುರೂಜಿ, ದಿ. ಸಿದ್ದನಗೌಡ ಪಾಟೀಲ, ದಿ. ಬಿ. ಬಿ. ಶಿವಪ್ಪ, ದಿ. ಜಯಪ್ರಕಾಶ ಶೆಟ್ಟಿ, ದಿ. ಬಿ. ಜಿ. ಕೊಟ್ಟರಪ್ಪ, ದಿ. ಪ್ರೊ. ಯು. ಆರ್. ರಾವ್, ಪತ್ರಕರ್ತೆ ದಿ. ಗೌರಿ ಲಂಕೇಶ, ದಿ. ಖಾದ್ರಿ ಅಚ್ಯುತನ್ ಸೇರಿ ಹಲವರಿಗೆ ಪರಿಷತ್ ಮತ್ತು ಅಸೆಂಬ್ಲಿ ಎರಡೂ ಕಡೆ ಗೌರವ ಸಲ್ಲುಸಲಾಯಿತು. ಸಭಾಧ್ಯಕ್ಷ ಕೆ. ಬಿ. ಕೋಳಿವಾಡ ಮತ್ತು ಡಿ. ಎಚ್. ಶಂಕರಮೂರ್ತಿ ಶೃದ್ಧಾಂಜಲಿ, ಸಂತಾಪ ಮೇಸೇಜ್ ಸಭೆಗೆ ಓದಿ ಹೇಳಿದರು.

Leave A Reply

 Click this button or press Ctrl+G to toggle between Kannada and English

Your email address will not be published.