ಉತ್ತಮ ಸಮಾಜಕ್ಕಾಗಿ

ಕಾರ್ಯಕರ್ತರ ಬೈಕ್ ಗಳಲ್ಲೇ ಜಾಲಿ ರೈಡ್ ಮಾಡಿ ಕಾಲಕಳೆದ ಡಾ.ಜಿ.ಪರಮೇಶ್ವರ್

0

ತುಮಕೂರು/ಕೊರಟಗೆರೆ:- ಕೆ.ಪಿ.ಸಿ.ಸಿ‌ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ರವರು ತಮ್ಮ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಕಾರ್ಯಕರ್ತರ ಬೈಕ್ ನಲ್ಲೇ ಜಾಲಿ ರೈಡ್ ಮಾಡಿಕೊಂಡು ಓಡಾಡ್ತಿದ್ದಾರೆ. ರವಿವಾರ ಕೊರಟಗೆರೆ ತಾಲ್ಲೂಕಿನ ದೊಡ್ಡಪಾಲನಹಳ್ಳಿ ಸೇರಿ ಐದಾರು ಹಳ್ಳಿಗಳಿಗೆ ಭೇಟಿ ನೀಡಿದ್ದ ಪರಮೇಶ್ವರ್ ಸಾಹೇಬರು ಕಾರ್ಯಕರ್ತರ ಬೈಕ್ ಗಳಲ್ಲೇ ಸಂಚರಿಸಿ ಜನರೊಂದಿಗೆ ಕಾಲ ಕಳೆದಿದ್ದಾರೆ.ನಮ್ ಬೈಕ್ ನಲ್ಲಿ ಹತ್ತಿ, ನಮ್ ಬೈಕ್ ನಲ್ಲಿ ಹತ್ತಿ ಅಂತಾ ಹತ್ತಾರು ಮಂದಿ ಪರಮೇಶ್ವರ್ ಗೆ ದುಂಬಾಲು ಬಿದ್ದಿದ್ದಾರೆ. ಯಾರಿಗು ನಿರಾಸೆ ಅಗಬಾರದು ಅಂತಾ ಪರಮೇಶ್ವರ್ ಅವರು ಎಲ್ಲರ ಬೈಕ್ ಏರಿ ಹಳ್ಳಿ ಹಳ್ಳಿಯಲ್ಲಿ ಜಾಲಿಯಾಗಿ ಸುತ್ತಾಡಿದ್ದಾರೆ. ಯಾವಾಗ್ಲೂ ಸೆಕ್ಯೂರಿಟಿ, ಎಸ್ಕಾರ್ಟ್ ಅಂತಾ ಪರಮೇಶ್ವರ್ ಅವರ ಸುತ್ತಲೂ ಪೊಲೀಸರೇ ಇರ್ತಿದ್ರೂ. ಆದ್ರೆ‌ ನಿನ್ನೆ ಮಾತ್ರ ಎಲ್ಲರನ್ನ ದೂರ ಕಳಿಸಿ, ಜನರೊಂದಿಗೆನೇ ಪರಮೇಶ್ವರ್ ರವರು ಸುಮಾರು ಹೊತ್ತು ಬೈಕ್‌ನಲ್ಲೇ ಸುತ್ತಾಡಿರುವುದು ಕಾರ್ಯಕರ್ತತರಲ್ಲಿ ಮತ್ತಷ್ಟು ಹುರುಪು ಮೂಡಿದೆ.

Leave A Reply

 Click this button or press Ctrl+G to toggle between Kannada and English

Your email address will not be published.