ಉತ್ತಮ ಸಮಾಜಕ್ಕಾಗಿ

ನ. 20 ರವರೆಗೆ 64 ನೇ ಸಹಕಾರ ಸಪ್ತಾಹ: ರಮೇಶ ಜಾರಕಿಹೊಳಿ

0

ಬೆಳಗಾವಿ: 64ನೇ ಅಖಿಲ ಭಾರತ ಸಹಕಾರ ಸಪ್ತಾಹ ನ.14 ರಂದು ಬೆಳಿಗ್ಗೆ 10ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಸಹಕಾರ ಸಚಿವ ರಮೇಶ ಜಾರಕಿಹೊಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರ ಸಪ್ತಾಹ ಉದ್ಘಾಟಿಸುವರು. ಎಚ್. ಕೆ. ಪಾಟೀಲ, ಆರ್. ವಿ. ದೇಶಪಾಂಡೆ, ಡಿ. ಕೆ. ಶಿವಕುಮಾರ, ಉಮಾಶ್ರೀ, ವಿನಯ ಕುಲಕರ್ಣಿ, ರುದ್ರಪ್ಪ ಲಮಾಣಿ, ಅನಂತಕುಮಾರ ಹೆಗಡೆ, ರಮೇಶ ಕತ್ತಿ ಇತರರು ಉಪಸ್ಥಿತರಿರಲಿದ್ದಾರೆ ಎಂದರು.
ಮುಖ್ಯ ಸಚೇತಕ ಅಶೋಕ ಪಟ್ಟಣ , ಗಣೇಶ ಹುಕ್ಕೇರಿ, ಸುರೇಶ ಅಂಗಡಿ, ಪ್ರಕಾಶ ಹುಕ್ಕೇರಿ, ಡಾ. ಪ್ರಭಾಕರ ಕೋರೆ, ಫಿರೋಜ್ ಸೇಠ್, ಲಕ್ಷಮಣ ಸವದಿ ಮುಖ್ಯ ಅತಿಥಿ ಯಾಗಿ ಆಗಮಿಸಲಿದ್ದಾರೆ ಎಂದರು.

ನಾಳೆ ಬೆಳಗಾವಿ, ನ.15 ಕ್ಕೆ ಮಂಗಳೂರು, ನ.16 ಕ್ಕೆ ಕೋಲಾರ, ನ.17 ಕ್ಕೆ ಬಾಗಲಕೋಟ, ನ.18 ತುಮಕೂರು, ನ.19 ಬೆಂಗಳೂರು ಹಾಗೂ 20 ಕ್ಕೆ ರಾಯಚೂರಿನಲ್ಲಿ ನಡೆಯಲಿದೆ. ಭಾರತದ ಸಹಕಾರ ಚಳುವಳಿಯಲ್ಲಿ ರಾಜ್ಯ ವಿಶಿಷ್ಠ ಸ್ಥಾನ ಹೊಂದಿದ್ದು, ಪ್ರಸ್ತುತ ಸರಕಾರ ಕಳೆದ 4 ವರ್ಷಗಳಲ್ಲಿ ಶೂನ್ಯ ಬಡ್ಡಿಯ ಕೃಷಿ ಸಾಲ, ಶೇ.3ರ ಕೃಷಿ ಸಾಲ, ಹಾಲು ಉತ್ಪಾದಕರಿಗೆ 5₹ ಸಹಾಯಧನ ನೀಡಿದೆ. ಜವಾಹರಲಾಲ್ ನೆಹರೂ ಜನ್ಮದಿನ ನ.14 ರಿಂದ 20 ರವರೆಗೆ ಸಹಕಾರ ಸಪ್ತಾಹ ನಡೆಯಲಿದೆ ಎಂದರು. ಎಂ. ಕೆ. ಅಯ್ಯಪ್ಪ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತ ರು 8 ಜನ: 2017 ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಆಯ್ಕೆಯಾದವರು. ಪಾಥಿಮಾ ಕ್ರಿಸ್ಟಿನಾ ಲಾರೆನ್ಸ್‌(ಬೆಂಗಳೂರು), ಬಾಬುರೆಡ್ಡಿ( ಬೆಂಗಳೂರು), ಕೆ. ಎಸ್. ಸುಧಾಕರ(ರಾಮನಗರ), ಕೆ. ಲಿಂಗೇಗೌಡ ಪಾಪಣ್ಣ( ಮೈಸೂರು), ಸುಭಾಷ ಜೋಶಿ( ಬೆಳಗಾವಿ), ರಾಜಶೇಖರ ನಾಯಕ( ಗುಲ್ಬರ್ಗ), ಎಸ್. ಬಿ. ರೆಡ್ಡಿ( ಗುಲ್ಬರ್ಗಾ), ಕಮಲೇಕರ ಶಿವಾಜಿ.

Leave A Reply

 Click this button or press Ctrl+G to toggle between Kannada and English

Your email address will not be published.