ಉತ್ತಮ ಸಮಾಜಕ್ಕಾಗಿ

ಜನ ವಿರೋಧಿ ಸರಕಾರ: ಮಾಜಿ ಸಿಎಂ HDK ವೈದ್ಯ ಪ್ರತಿಭಟನೆಯಲ್ಲಿ ಅಸಮಧಾನ

0

ಬೆಳಗಾವಿ( ಸುವರ್ಣಸೌಧ): ಜನಪರ ಸರಕಾರವಾಗಿದ್ದರೆ ವೈದ್ಯರು ಬೀದಿಗೆ ಇಳಿಯುವ ಪ್ರಶ್ನೆಯೇ ಬರುತ್ತಿರಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಸುವರ್ಣವಿಧಾನ ಸೌಧ ಬಳಿಯ ಸುವರ್ಣಗಾರ್ಡನನಲ್ಲಿ ನಡೆದ ವೈದ್ಯರ ಬೃಹತ್ ಪ್ರತಿಭಟನಾ ವೇದಿಕೆಯಲ್ಲಿ ಭಾಗವಹಿಸಿ ಮಾತನಾಡಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಹಿಂದಿನ ತಮ್ಮ ನೇತೃತ್ವದಲ್ಲಿ ಸರಕಾರ ಯಾವ ಜನಪರ ಸಂಘಟನೆಗಳು ಬೀದಿಗೆ ಬರಲು ಅವಕಾಶ ಮಾಡಿಕೊಟ್ಟಿಲ್ಲ. ಹಲವಾರು ಸಚಿವ ಸಂಪುಟದ ಸಹುದ್ಯೋಗಿಗಳೆ ಹೇಳುವಂತೆ ಸಚಿವ ರಮೇಶಕುಮಾರಗೆ ಬುದ್ದಿ ಇಲ್ಲ ಎಂದರು. ರಾಜ್ಯ ಸರಕಾರ ಜಾರಿಗೆ ತಂದಿರುವ ನೂತನ ಮಸೂದೆ ವೈದ್ಯರಿಗೆ ಮಾರಕವಾಗಿದೆ. ರಮೇಶಕುಮಾರ ಯಾವ ಅನುಭವದ ಮೇಲೆ ಕಾನೂನು ಜಾರಿಗೆ ತಂದಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಕೆ. ಎಸ್. ಈಶ್ವರಪ್ಪ, ಎಂ. ಬಿ. ಕಾರಜೋಳ, ಬಸವರಾಜ ಹೊರಟ್ಟಿ, ಸಿ. ಟಿ. ರವಿ, ಮಾಜಿ ಸಿಎಂ ಜಗದೀಶ ಶೆಟ್ಟರ, ಸುರೇಶಕುಮಾರ ಉಪಸ್ಥಿತರಿದ್ದರು.

ನಂತರ ಸುವರ್ಣಸೌಧದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ವೈದ್ಯ ಸಂಘಟನೆ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಚರ್ಚೆ ನಡೆದು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಸರಕಾರ ಭರವಸೆ ನೀಡಿತು. ಸರಕಾರ ಇನ್ನೂ ಯಾವ ನಿರ್ಧಾರ ಪ್ರಕಟಿಸಿಲ್ಲ ಎಂದು ವೈದ್ಯ ಸಂಘಟನೆಯ ಮುಖಂಡರು ತಿಳಿಸಿದರು. ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ವೈದ್ಯರು ಮೊದಲು ಕೆಲಸಕ್ಕೆ ಹಾಜರಾಗಲಿ, ಅವರ ಬೇಡಿಕೆಗಳನ್ನು ಪರಿಶೀಲಿಸಲಾಗುವುದು ಎಂದರು

Leave A Reply

 Click this button or press Ctrl+G to toggle between Kannada and English

Your email address will not be published.