ಉತ್ತಮ ಸಮಾಜಕ್ಕಾಗಿ

ಇಡೀ ದಿನ ಚರ್ಚೆ, ವಾದ, ವಿವಾದ ನಡೆದು: ಬಿಜೆಪಿ ಸಭಾತ್ಯಾಗ

0

ಬೆಳಗಾವಿ(ಸುವರ್ಣಸೌಧ): ಅಧಿವೇಶನದ ಮೊದಲ ದಿನವೇ   ಸಚಿವ ಕೆ. ಜೆ. ಜಾರ್ಜ್ ರಾಜೀನಾಮೆ ಒತ್ತಾಯಿಸಿಇಡೀ ದಿನ ಚರ್ಚೆ, ವಾದ, ವಿವಾದ ನಡೆದು  ಸಂಜೆಗೆ ಬಿಹೆಪಿ ನಾಯಕರು ಸಭಾತ್ಯಾಗ ಮಾಡಿದರು.ಡಿಎಸ್ಪಿ ಗಣಪತಿ ಭಟ್ ಆತ್ಮಹತ್ಯೆಯ ಪ್ರಜರಣದಲ್ಲಿ ಇತ್ತೀಚೆಗೆ ಸಿಬಿಐ ನಿಂದ ಆರೋಪಿ ನಂ. 1 ಆಗಿರುವ ಜಾರ್ಜ್ ರಾಜೀನಾಮೆ ಪಡೆಯಬೇಕೆಂದು ಪರಿಷತ್ ನಲ್ಲಿ ಆಗ್ರಹವಾಯಿತು.ಮಧ್ಯಾಹ್ನ ಮತ್ತೆ ಕಲಾಪ ಆರಂಭವಾದಾಗ ಮುಖ್ಯಮಂತ್ರಿ ಪರಿಷತ್ ನಲ್ಲಿ ಹಾಜರಿದ್ದರು.ಈ ಸಂದರ್ಭ ಸಚಿವ ಕೆ. ಜೆ. ಜಾರ್ಜ್ ತಮ್ಮ ವಿರುದ್ಧ ನಡೆದಿರುವ ಪ್ರತಿಪಕ್ಷಗಳ ದಾಳಿಗೆ ತನ್ನ ಸಮರ್ಥನೆ ತಿಳಿಸಲು ಅವಕಾಶ ನೀಡುವಂತೆ ಜಾರ್ಜ್ ಮನವಿ ಮಾಡಿ ಎದ್ದು ನಿಂತಾಗ ಅವಕಾಶ ಕೊಡುವುದಾಗಿ ಸಭಾಪತಿ ಡಿ. ಎಚ್. ಶಂಕರಮೂರ್ತಿ ಕುಳ್ಳಿರಿಸಿದರು.ಪ್ರತಿಪಕ್ಷದ ನಾಯಕ ವಿ. ಸೋಮಣ್ಣ ಸರಕಾರವೇ ಈ ಚರ್ಚೆಯೂ ದೀರ್ಘವಾಗಿ ಸಮಯ ವ್ಯರ್ಥವಾಗಲು ಕಾರಣ ಎಂದಾಗ ಸರಕಾರದ ಪರ ಸಚಿವರು, ಶಾಸಕರು ಆಕ್ಷೇಪ ವ್ಯಕ್ತಪಡಿಸಿ ಅಸಮಧಾನ ವ್ಯಕ್ತಪಡಿಸಿದರು.ವಿ. ಸೋಮಣ್ಣ ಮಾತನಾಡಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇಲೆ ಸಿಬಿಐ ಜಾರ್ಜ್ ವಿರುದ್ಧ ಕೇಸ್ ದಾಖಲಿಸಿಕೊಳ್ಳಲು ಸೂಚಿಸಿತು. ಡಿಎಸ್ಪಿ  ಗಣಪತಿ ಭಟ್ ಅವರ ತಂದೆ ಕುಶಾಲಪ್ಪ ಸುಪ್ರೀಂ ಕೋರ್ಟ್ ಗೆ ಹೋದಾಗ; ರಾಜ್ಯ ಸಿಐಡಿ ಗಣಪತಿ ಭಟ್ ವಿಷಯದಲ್ಲಿ ಕೊಟ್ಟ ವರದಿ ಲೋಪಗಳನ್ನು ಗುರುತಿಸಿದೆ ಎಂದು ಸಭೆಯ ಗಮನ ಸೋಮಣ್ಣ ಸೆಳೆದರು.

ಅಲ್ಲದಿದ್ದರೆ ಜಾರ್ಜ್ ವಿರುದ್ಧ ಎಫ್ ಐ ಆರ್ ಏಕೆ ಆಗುತ್ತದೆ. ಎಫ್ ಐ ಆರ್ ಆದ ಮೇಲೆ ಅಧಿಕಾರದಲ್ಲಿರಲು ಜಾರ್ಜ್ ಅವರ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿ ರಾಜೀನಾಮೆ ಕೊಡಲು ಆಗ್ರಹಿಸಿದರು. ಜಾರ್ಜ್ ಮೇಲೆ ಗುರುತರವಾದ ಆಪಾದನೆ ಇದು. ೩ ತಿಂಗಳಲ್ಲಿ ಸುಪ್ರೀಂಕೋರ್ಟ್ ಸಿಬಿಐಯಿಂದ ವರದಿ ಕೇಳಿದೆ. ಸಿಬಿಐ ಮೊದಲು ಎಫ್ ಐ ಆರ್ ದಾಖಲಿಸಿಯೇ ವಿಚಾರಣೆಗೆ ಇಳಿದಿದೆ. ಡಿಎಸ್ಪಿ ಗಣಪತಿ ಭಟ್ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುವುದು ಪ್ರತಿಪಕ್ಷಗಳ ಜವಾಬ್ದಾರಿ ಎಂದು ಸೋಮಣ್ಣ ಚರ್ಚೆಗೆ ಅನುವು ಮಾಡಲು ಸಭಾಧ್ಯಕ್ಷರಿಗೆ ಕೋರಿದರು.ಚರ್ಚೆ ಗಂಭೀರತೆ ಮತ್ತು ವಾದಕ್ಕೆ ಕಾರಣವಾಗುತ್ತಿದ್ದಂತೆ ಸಮರ್ಥನೆಗೆ ಇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರ್ಜ್ ಒಬ್ಬ ಕೊಲೆಗಡುಕ ಎಂದರೆ ನಾವು ಸುಮ್ಮನೆ ಕುಳಿತುಕೊಳ್ಳಬೇಕಾ? ಎಂದು ಸಿಎಂ  ಪ್ರತಿಪಕ್ಷ ನಾಯಕರು ಹಾಗೂ ಸೋಮಣ್ಣ ಅವರಿಗೆ ತೀವೃ ತರಾಟೆಗೆ ತೆಗೆದುಕೊಂಡರು. ಸುಪ್ರೀಂ ಕೋರ್ಟ್ ಆಗಲಿ ಮತ್ಯಾವುದೇ ಕೋರ್ಟ್ ಆಗಲಿ ಇನ್ನೂವರೆಗೆ ಜಾರ್ಜ್ ಒಬ್ಬ ಅಪರಾಧಿಯೆಂದು ಘೋಷಿಸಿಲ್ಲ ಎಂದು ಜಾರ್ಜ್ ಅವರನ್ನು ರಕ್ಷಿಸಿಕೊಂಡರು.ಪ್ರಾಥಮಿಕ ನಿವೇದನೆ( preliminary submission) ಮಾಡಿದ್ದೀರಿ ಬಾವಿಯಿಂದ ಹೊರಹೋಗಿ ಆಸನದಲ್ಲಿ ಕೂಡ್ರಿ ಎಂದು ಸಿಎಂ ಬಿಜೆಪಿ ನಾಯಕರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

Preliminary submission ಗೆ ನಮಗೆ ಬಿಟ್ಟಿಲ್ಲ ಎಂದು ಬಿಜೆಪಿ ಸದಸ್ಯರು ಅಳಲು ತೋಡಿ ಕೊಂಡರು.ಸಚಿವ ಕೆ. ಜೆ. ಜಾರ್ಜ್ ಕೊಲೆಗಡುಕ ಎಂದಿರುವ ಕೆ. ಎಸ್. ಈಶ್ವರಪ್ಪ ತತಕ್ಷಣ ಕ್ಷಮೆ ಕೇಳಬೇಕು ಎಂದು ಉಗ್ರಪ್ಪ ಮತ್ತು ಆಡಳಿತ ಪಕ್ಷದ ಶಾಸಕರು ಆಗಲೇ ಸದನಕ್ಕೆ ಆಗಮಿಸಿದ ಪ್ರತಿಪಕ್ಷದ ನಾಯಕ ಈಶ್ವರಪ್ಪ ಮೇಲೆ ಮುಗಿಬಿದ್ದರು. ಪ್ರತಿಪಕ್ಷಗಳ ಪ್ರಜಾಪ್ರಭುತ್ವ ನೆಲೆಯ ವಾದಕ್ಕೆ ಬೆಲೆ ಕೊಡದೇ, ಬಾಯಿಮುಚ್ಚಿಸುವ ಸರಕಾರ ಇದು ಎಂದು ಈಶ್ವರಪ್ಪ ತಿರುಗಿಬಿದ್ದರು.ಆಡಳಿತ ಪಕ್ಷದವರೇ ಮಾತಾಡಲು ಬಿಡದೆ ಗದ್ದಲ ಎಬ್ಬಿಸಿದರೆ ಇದಕ್ಕೆ ವಿಧಾನ ಪರಿಷತ್ ಎನ್ನುತ್ತಾರೆಯೇ ಎಂದು ಈಶ್ವರಪ್ಪ ಅಸಮಧಾನ ವ್ಯಕ್ತಪಡಿಸಿದರು.ಅಡಳಿತ ಪಕ್ಷಗಳ ಶಾಸಕರು ಮಾತಾಡಲು ಬಿಡುವುದಿಲ್ಲ, ಇವರಿಂದ ಮುಖ್ಯಮಂತ್ರಿ ನನಗೆ ರಕ್ಷಣೆ ನೀಡಬೇಕು ಎಂದು ವ್ಯಂಗ್ಯವಾಡಿದರು.

ಈಶ್ವರಪ್ಪ ಗೆ ವಿಶೇಷ ರಕ್ಷಣೆ ಕೊಡುವೆ, ಆರು ಕೋಟಿ ಜನಸಂಖ್ಯೆಯ ರಕ್ಷಣೆ ಜವಾಬ್ದಾರಿ ನನ್ನದು ಎಂದು ಸಿಎಂ ಪ್ರತಿಕ್ರಿಯಿಸಿದರು. ಈಶ್ವರಪ್ಪ ತಿರುಗಿಬಿದ್ದು ನೀವು ಆರೋಪಿ ನಂ. 1( ಜಾರ್ಜ್) ಗೆ ರಕ್ಷಣೆ ಕೊಡುತ್ತಿದ್ದೀರಿ ಎಂದು ಸಿಎಂ ಅವರ ಕಾಲೆಳೆದರು. ಈ ಚರ್ಚೆ ನಧ್ಯೆ ಜಾರ್ಜ್ ಪ್ರತಿಕ್ರಿಯಿಸಿ ಗಣಪತಿ ಸಾವಿನ ವಿಚಾರ ಎರಡೂ ಹೌಸಗಳಲ್ಲಿ ಈಗಾಗಲೇ ಚರ್ಚೆಯಾಗಿದೆ. ನಾನೂ ಸಹ ಅವರ ಸಾವಿಗೆ ವಿಷಾದ ವ್ಯಕ್ತಪಡಿಸಿದ್ದೇನೆ. ಗೃಹಮಂತ್ರಿ ಸ್ಥಾನದಿಂದ ಅಂದು ನಾನು ಇಳಿದ ನಂತರ ಸಾವಿನ ಘಟನೆ ನಡೆದಿದೆ. ಸಿಬಿಐ ವಿಚಾರಣೆಗೆ ಸ್ವಾಗತ ಮಾಡುತ್ತೇನೆ. ಹೈಕೋರ್ಟ್ ಸೂಚನೆ ಮೇರೆಗೆ ಸ್ವತಃ ಡಿಜಿ ಮತ್ತು ಐಜಿ ಮೇಲ್ವಿಚಾರಣೆಯಲ್ಲಿ ಸಿಐಡಿ ತನಿಖೆ ಅಂದು ನಡೆಸಿತ್ತು ಮತ್ತು ಸಿಐಡಿ ‘ಬಿ’ ರಿಪೋರ್ಟ್ ಸಹ ಕೊಟ್ಟಿದೆ. ಆಗ ದಿ. ಗಣಪತಿ ಕುಟುಂಬ ವರದಿಗೆ ಆಕ್ಷೇಪ ಮಾಡಿಲ್ಲ. ಹೈಕೋರ್ಟ್ ಡಿವಿಶನ್ ಬೆಂಚ್ ಸಹ ಸಿಬಿಐ ವಿಚಾರಣೆಗೆ ಒಪ್ಪದಿದ್ದಾಗ, ಗಣಪತಿ ಅವರ ತಂದೆ ಕುಶಾಲಪ್ಪ ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ. ಕೊಲೆ ಪ್ರಜರಣ ಎನ್ನುವ ಮತ್ತು ನೇರವಾಗಿ  ನನ್ನನ್ನು ಕೊಲೆಗಡುಕ  ಎನ್ನುತ್ತಿದ್ದೀರಿ ಅದರ ಬಗ್ಗೆ ಸಿಬಿಐ ತನಿಖೆ ಮೂಲಕ ಕಂಡುಹಿಡಿಯಲಿ ಎಂದು ಜಾರ್ಜ್ ಪ್ರತಿಪಾದಿಸಿದರು. ಸಿಬಿಐ ನಿಂದ ಹೊರಬರುವ  ತನಿಖಾ ನಿರ್ಧಾರ ಸ್ವಾಗತಿಸುತ್ತೇನೆ. Embassy golfix ಕಂಪನಿಯೊಂದಕ್ಕೆ ನಾನೇ ಚೇರಮನ್ ಎಂದು ವಾದವೊಂದಕ್ಕೆ  ಒಪ್ಪಿಕೊಂಡರು.  ಬಿಜೆಪಿಯವರು ನಿಮ್ಮ ಬಳಿಯ ಎಲ್ಲ ದಾಖಲೆಗಳನ್ನು ಸಿಬಿಐಗೆ ಕೊಡಿ, ಅವರು ತನಿಖೆ ಮಾಡಲಿ ಎಂದು ಜಾರ್ಜ ಬಿಜೆಪಿಗೆ ತಿರುಗೇಟು ನೀಡಿದರು.

ನೀವೆ( ಸರಕಾರ) ಸಿಐಡಿಗೆ ಹೇಳಿ ಆರೋಪಿ ನಂ. 1 ಬಗ್ಗೆ ಕ್ಲೀನ್ ಚಿಟ್ ಪಡೆದುಕೊಂಡಿದ್ದೀರಿ. ಬರೀ ಆರೇ ವಾರದಲ್ಲಿ ಸಿಐಡಿ ತನಿಖೆ ಮಾಡಿ ಕ್ಲೀನಚೀಟ್ ಕೊಡುತ್ತದೆ! ಎಂದರೆ ಏನರ್ಥ.  ಅದೂ ಸಹ FSL  ರಿಪೋರ್ಟ್ ಬರುವ ಮುಂಚೆ ಕ್ಲೀನಚಿಟ್ ಎಂದು ಈಶ್ವರಪ್ಪ ಪ್ರಶ್ನೆ ಮಾಡಿದರು. ಸಿಐಡಿ ದುರುಪಯೋಗ ಸರಕಾರ ಮಾಡಿಕೊಂಡಿದ್ದು ಸ್ಪಷ್ಠ. ಸ್ವತಃ ಸಚಿವರೇ ನಂ. 1 ಆರೋಪಿಯಾಗಿದ್ದು ಸರಕಾರಕ್ಕೆ ಮಜುಗುರವಾಗಬೇಕು ಎಂದು ಈಶ್ವರಪ್ಪ ವ್ಯಂಗ್ಯವಾಡಿದರು. ಕುಶಾಲಪ್ಪ ಅವರು ಸುಪ್ರೀಂ ಕೋರ್ಟ ಗೆ ಹೋಗದಿದ್ದರೆ ಡುಎಸ್ಪಿ ಗಣಪತಿ ಭಟ್ ಕೇಸ್ ಮುಚ್ಚಿ ಹೋಗುತ್ತಿತ್ತು ಎಂದು ಈಶ್ವರಪ್ಪ ಆತಂಕ ವ್ಯಕ್ತಪಡಿಸಿದರು. ಪೆನ್ ಡ್ರೈವ್ ಮತ್ತಿತರ ದಾಖಲೆಗಳು ಅಂದು ಕಣ್ಮರೆಯಾದವು ಹೇಗೆ?  6 ವಾರದ ಸಿಐಡಿ ವರದಿ ಮತ್ತು ಕ್ಲೀನ್ ಚಿಟ್ ಮಹಾ ಅನ್ಯಾಯವೇ ಸರಿ ಎಂದರು. ಸುಪ್ರೀಂ ನಲ್ಲಿ ಕ್ಲೀನ್ ಚಿಟ್ ಸಿಕ್ಕರೆ ಮತ್ತೆ ಸಚಿವರಷ್ಟೇ ಅಲ್ಲ, ಉಪಮುಖ್ಯಮಂತ್ರಿ ಮಾಡಿಕೊಳ್ಳಿ ಎಂದು ಸಿಎಂಗೆ ಈಶ್ವರಪ್ಪ ಒತ್ತಾಯಿಸಿದರು.ಸಿಎಂ ಪ್ರತಿಕ್ರಿಯಿಸಿ ಅವತ್ತು ಸಹ ಜಾರ್ಜ್ ರಾಜೀನಾಮೆ ಕೊಡುವ ಅವಶ್ಯಕತೆವಿರಲಿಲ್ಲ. ಎಫ್ ಐ ಆರ್ ಎಂದರೆ ಬರೀ ಆರೋಪವಷ್ಟೇ. ಆದರೆ ಜಾರ್ಜ್ ತಾವೇ ಸ್ವತಃ ರಾಜೀನಾಮೆ ಕೊಟ್ಟರು. ಆಗ ರಾಜೀನಾಮೆ ಸ್ವೀಕರಿಸಿದೆ ಎಂದು ಸಿಎಂ ನುಡಿದರು.ಬಿಜೆಪಿ ಜಾರ್ಜ್ ರಾಜೀನಾಮೆಗೆ ತೀವೃ ಪಟ್ಟು ಹಿಡಿದು ಬಾವಿಗಿಳಿದು ಹೋರಾಟಕ್ಕೆ ಅಣಿಯಾಗಿ ಮತ್ತೆ ಸಭಾತ್ಯಾಗ ಮಾಡಿದ್ದರಿಂದ ಇಂದಿನ ಕಲಾಪ ಮುಕ್ತಾಯವಾಯಿತು.

Leave A Reply

 Click this button or press Ctrl+G to toggle between Kannada and English

Your email address will not be published.