ಉತ್ತಮ ಸಮಾಜಕ್ಕಾಗಿ

102ನೇಕೆಎಲ್‍ಇ ಸಂಸ್ಥಾಪನಾ ದಿನಾಚರಣೆ

0

ಬೆಳಗಾವಿ:ಎದೆಒಣಗಬಾರದು, ಹೃದಯವಂತರಾಗಬೇಕು. ಜೀವನದಲ್ಲಿಅದ್ಭುತವಾದುದನ್ನು ಸಾಧಿಸಬೇಕು.ಸಮಾಜದ ಬೇರಾಗಿಆಶ್ರಯವಾಗಬೇಕೆಂದು ವಿಜಯಪುರಜ್ಞಾನಯೋಗಾಶ್ರಮದ ಪರಮಪೂಜ್ಯಶ್ರೀಸಿದ್ಧೇಶ್ವರ ಮಹಾಸ್ವಾಮೀಜಿಯವರು ನುಡಿದರು.
ದಿನಾಂಕ 13.11.2017 ರಂದುಕೆಎಲ್‍ಇ ಸಂಸ್ಥೆಯ102ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿಆಶೀರ್ವಚನ ನೀಡಿದರು.ಕೆಎಲ್‍ಇ ಸಪ್ತರ್ಷಿಗಳು ಸಾಮಾನ್ಯಶಿಕ್ಷಕರಾಗಿಅಸಮಾನ್ಯ ಸೇವೆ ನೀಡಿದರು.ಅವರಇಚ್ಛಾಶಕ್ತಿ ಬಹುದೊಡ್ಡದಾಗಿತ್ತು.ಅವರುಎಲ್ಲಿ ಹೋದರುಅಲ್ಲಿ ಬೆಳಕನ್ನುಚೆಲ್ಲಿದರು, ಸುವಾಸನೆಯನ್ನು ಬೀರಿದರು.ಅವರು ಹೃದಯವಂತರಾಗಿದ್ದರು, ಅವರ ಮನಸ್ಸು ಸಮಾಜವನ್ನುಕಟ್ಟಬೇಕೆಂದು ಹಂಬಲಿಸಿತುಅದರಲ್ಲಿ ಸಾಧಿಸಿತೋರಿಸಿದವರುಹಾಗಾಗೀಸಪ್ತರ್ಷಿಗಳುಅಮರರು.ವ್ಯಕ್ತಿ ಬೆಳೆಯಬೇಕು, ಜೊತೆಜೊತೆಗೆಇತರರನ್ನು ಬೆಳೆಸಬೇಕೆಂದರು.
ಪ್ರತಿಯೊಬ್ಬರಲ್ಲಿಯೂಒಂದೊಂದು ವಿಶೇಷವಾದ ಸಾಮಥ್ರ್ಯವಿರುತ್ತದೆ.ಅದನ್ನುಅಭಿವ್ಯಕ್ತಗೊಳಿಸಲುಕಾರ್ಯಪ್ರವೃತ್ತರಾಗಬೇಕು.ಅದಕ್ಕೆಅನುಗುಣವಾಗಿ ಸಮಾಜವುಅವರಿಗೆ ಬೆಂಬಲ ನೀಡಬೇಕು.ಒಂದು ಬೀಜಕ್ಕೆಅವಕಾಶವನ್ನು ನೀಡಿದರೆಅದು ಹೆಮ್ಮರವಾಗಿ ಬೆಳೆದು ಹೂ, ಹಣ್ಣು, ಕಾಯಿ, ನೆರಳುಆಶ್ರಯವನ್ನು ನೀಡುತ್ತದೆ.ಅದರಂತೆ ವಿಶೇಷವಾದ ಸಾಮಥ್ರ್ಯವನ್ನುತರುವುದುಒಂದುಯೋಗ.ಆ ಕಾರ್ಯವನ್ನುಕೆಎಲ್‍ಇ ಸಂಸ್ಥೆಯುಅನುಚಾಣವಾಗಿ ಮಾಡುತ್ತಿದೆಎಂದು ನುಡಿದರು.
ನಮ್ಮಲ್ಲಿರುವ ಶಕ್ತಿಯನ್ನುಇಟ್ಟುಕೊಂಡು ಮುನ್ನಡೆದರೆಗುರಿ ಸಾಧಿಸುವುದುಅಸಾಧ್ಯವೆನಲ್ಲ. ನಿರಂತರ ಪ್ರಯತ್ನಇದ್ದರೆಆತ್ಮವಿಶ್ವಾಸದೊಂದಿಗೆಏನನ್ನಾದರೂ ಸಾಧಿಸಬಹುದು. ವಿದ್ಯಾರ್ಥಿಗಳಾದವರುತಮ್ಮನ್ನುಇಂತಹ ಸಾಧನೆಯೆಡೆಗೆಕೊಂಡೊಯ್ಯಬೇಕು.ಸಾಮಾಜಿಕಜೀವನಕ್ಕೆಯೋಗ್ಯವಾದ ಸಂಶೋಧನೆಯನ್ನು ಕೈಗೊಳ್ಳಬೇಕು.ಒಳ್ಳೆಯಜೀವನಕ್ಕೆ ಬೆಲೆಯಿದೆ.ಕೆಎಲ್‍ಇ ಸಂಸ್ಥೆಒಳ್ಳೆಯ ವಿದ್ಯಾರ್ಥಿಗಳನ್ನು ನಿರ್ಮಿಸುತ್ತಿದೆ, ರಾಷ್ಟ್ರ ನಿರ್ಮಾಣಕ್ಕೆಕೈಜೋಡಿಸಿದೆಎಂದು ಪೂಜ್ಯರು ನುಡಿದರು.
ಮುಖ್ಯಅತಿಥಿಗಳಾಗಿಆಗಮಿಸಿದ್ದಕೆಎಲ್‍ಇ ವಿಶ್ವವಿದ್ಯಾಲಯದಕುಲಪತಿಗಳಾದಡಾ.ವಿವೇಕ ಸಾವಜಿಯವರು ಮಾತನಾಡುತ್ತ, ಕೆಎಲ್‍ಇ ಸಂಸ್ಥೆಯುಇಂದುಜಾಗತಿಕವಾಗಿ ವಿಸ್ತರಿಸಿದೆಶಿಕ್ಷಣದ ಹಲವಾರುಕ್ಷೇತ್ರಗಳಲ್ಲಿ ಮೌಲಿಕವಾದ ಸಾಧನೆಯನ್ನು ಮಾಡಿದೆ.ಸಂಸ್ಥೆಯು ಭವಿಷ್ಯದ ಸವಾಲುಗಳನ್ನು ಮೆಟ್ಟಿನಿಲ್ಲಲು ಸಜ್ಜಾಗಿದ್ದೇವೆ. ಅತ್ಯಂತ ಬಲಿಷ್ಠ ತಲಪಾಯದಲ್ಲಿ ಮುನ್ನಡೆಯಲುಅವಕಾಶವನ್ನು ಸೃಷ್ಠಿಸಿಕೊಂಡುಗುರಿಮುಟ್ಟಲು ಸನ್ನದ್ಧರಾಗಿದ್ದೇವೆ ಪರಿಶ್ರಮ ಹಾಗೂ ಸಂಕಲ್ಪದಿಂದಅಸಾಧ್ಯವಾದುದನ್ನುಸಾಧಿಸಬಹುದು.ಇಂದು ಸಾಮಾಜಿಕತಾಣಗಳು ಬಹುವೇಗ ಬೆಳೆಯುತ್ತಿದ್ದುಅವುಗಳಿಗೆಅನುಗುಣವಾದ ಬೋಧನಾಕೌಶಲವನ್ನು ಬದಲಾಯಿಸಿಕೊಳ್ಳಬೇಕಾಗಿದೆಎಂದು ಹೇಳಿದರು.
ಕೆಎಲ್‍ಇ ಸಂಸ್ಥೆಯಕಾರ್ಯಾಧ್ಯಕ್ಷರು ಹಾಗೂರಾಜ್ಯಸಭಾ ಸದಸ್ಯರಾದಡಾ.ಪ್ರಭಾಕರಕೋರೆಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಕೆಎಲ್‍ಇ ಸಪ್ತರ್ಷಿಗಳು ನೆಟ್ಟ ಸಸಿಇಂದು ಹೆಮ್ಮರವಾಗಿ ಬೆಳೆದಿದೆ. ಅವರ ನೆನಹೆಉದಯ.ಅವರ ಪ್ರಖರವಾದ ವಿಚಾರಗಳು ಹಾಗೂ ಸೇವಾ ಮನೋಭಾವದಿಂದಕೆಎಲ್‍ಇಇಂದುಜಾಗತಿಕವಾಗಿ ವಿಸ್ತರಿಸಿದೆ.ಕಳೆದ ವರ್ಷ ಪ್ರಧಾನಿಗಳು ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿಆಗಮಿಸಿ ನಮಗೆ ಮೂರು ಸವಾಲುಗಳನ್ನು ನೀಡಿದ್ದಾರೆ.ಒಂದುಒಲಂಪಿಕ್‍ದಲ್ಲಿ ಪದಕವನ್ನು ಪಡೆಯುವುದು, ನೂರು ವಿವಿಗಳಲ್ಲಿಒಂದಾಗುವುದು ಹಾಗೂ ಸಂಶೋಧನೆಯಲ್ಲಿ ದಿಟ್ಟವಾದ ಹೆಜ್ಜೆಯನ್ನಿಡುವುದು.ನಮ್ಮ ಸಂಸ್ಥೆ ಈ ಮೂರು ಸವಾಲುಗಳತ್ತದಾಪುಗಾಲಿಡುತ್ತಿದೆ.ಜಾಗತಿಕ ಮಟ್ಟದಲ್ಲಿ ನಾವುಇಂದು ಸಂಶೋಧನೆಗೆ ಹೆಚ್ಚುಒತ್ತು ನೀಡುತ್ತಿದ್ದೇವೆ, ಗುಣಮಟ್ಟದಪ್ರಯೋಗಾಲಯಗಳನ್ನು ನಿರ್ಮಿಸಿದ್ದೇವೆ, ಕಲಿಕಾ ವಿಧಾನದಲ್ಲಿ ನವಬದಲಾವಣೆಯನ್ನುತಂದಿದ್ದೇವೆಎಂದರು.
ಮುಂಬರುವ ದಿನಗಳಲ್ಲಿ ಬೆಳಗಾವಿಯಲ್ಲಿ ಹೋಮಿಯೋಪಥಿಆಸ್ಪತ್ರೆ ಹಾಗೂ ಮಹಾವಿದ್ಯಾಲಯ, ಪುಣೆಯಲ್ಲಿ 200 ಹಾಸಿಗೆಗಳಆಸ್ಪತ್ರೆ ನಿರ್ಮಾಣಗೊಳ್ಳುತ್ತಿದೆ.ಅದೇರೀತಿಯಲ್ಲಿ ನವೀಮುಂಬಯಿಯಲ್ಲಿಎಲ್ಲ ಸೌಲಭ್ಯಗಳುಳ್ಳಸಿಬಿಎಸ್‍ಸಿ ಶಾಲೆಯು ಸ್ಥಾಪನೆಗೊಳ್ಳಲಿದೆ.ಅಂತೆಯೆರೈತರ ಹಿತದೃಷ್ಟಿಯನ್ನುಗಮನದಲ್ಲಿಟ್ಟುಕೊಂಡುಕೃಷಿ ವಿಜ್ಞಾನಕೇಂದ್ರದ ಮೂಲಕದೇಸಿತಳಿ ಹಸುಗಳನ್ನುಉಳಿಸುವ ಹಾಗೂ ಬೀಜೋತ್ಪಾದನೆ ಮಾಡುವ, ಸಬ್ಸಿಡಿಯಲ್ಲಿರೈತರನ್ನುತಲುಪಿಸುವಕಾರ್ಯಮಾಡುತ್ತಿದ್ದೇವೆಎಂದರು. ವಿದ್ಯಾರ್ಥಿ ಹಾಗೂಸಿಬ್ಬಂದಿವರ್ಗದವರೆ ನಮ್ಮ ಶಕ್ತಿ. ಅವರ ಸಾಧನೆಯನ್ನುಗುರುತಿಸಿ ನಾವು ಪ್ರತಿವರ್ಷಅವರಿಗೆಗೌರವವನ್ನು ಸಲ್ಲಿಸುತ್ತಿದ್ದೇವೆ. ನಮ್ಮ ಸಂಸ್ಥೆಯಜೀವನಾಡಿಯಾಗಿರುವಅವರನ್ನುಗೌರವಿಸುವುದು ಸಂಸ್ಥೆಯಆದ್ಯಕರ್ತವ್ಯವೆಂದು ನಾನು ಮನಗಾಣಿದ್ದೇನೆಂದು ಹೇಳಿದರು.
ಕೆಎಲ್‍ಇಅಧ್ಯಕ್ಷರಾದಶ್ರೀಶಿವಾನಂದಕೌಜಲಗಿಯವರುಅಧ್ಯಕ್ಷೀಯ ನುಡಿಗಳನ್ನಾಡಿದರು. ವೇದಿಕೆಯ ಮೇಲೆಉಪಕಾರ್ಯಾಧ್ಯಕ್ಷರಾದಶ್ರೀಅಶೋಕಣ್ಣಾ ಬಾಗೇವಾಡಿ, ಕಾರ್ಯದರ್ಶಿಗಳಾದಡಾ.ಬಿ.ಜಿ.ದೇಸಾಯಿ, ಉಪಸ್ಥಿತರಿದ್ದರು. ಆಜೀವ ಸದಸ್ಯರಾದಶ್ರೀಎಸ್.ಡಿ.ಶಿರಗಾವೆ ಸ್ವಾಗತಿಸಿದರು.ಡಾ.ನೇಹಾದಡೇದ ಹಾಗೂಡಾ.ಮಹೇಶಗುರನಗೌಡರ ನಿರೂಪಿಸಿದರು.
ಇದೇ ಸಂದರ್ಭದಲ್ಲಿರಾಜ್ಯ ಹಾಗೂರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆಡಾ.ಪ್ರಭಾಕರಕೋರೆಯವರು ಸನ್ಮಾನಿಸಿದರು. 30 ಚಿನ್ನದ ಹಾಗೂ 44 ಬೆಳ್ಳಿಯ ಪದಕಗಳನ್ನು ವಿತರಿಸಲಾಯಿತು.ಡಾ.ಶಿವಪ್ರಸಾದಗೌಡರಹಾಗೂತಂಡದವರನ್ನು, ಡಾ.ಆರ್.ಎಸ್.ಮುಧೋಳ, ಶ್ರೀಅಮಿತಧನವಡೆ, ಶ್ರೀಮತಿ ಬಿಬಿಯಾನ್ ಪೆರೆರಾಅವರನ್ನುಗೌರವಿಸಿ ಸತ್ಕರಿಸಲಾಯಿತು.

Leave A Reply

 Click this button or press Ctrl+G to toggle between Kannada and English

Your email address will not be published.