ಉತ್ತಮ ಸಮಾಜಕ್ಕಾಗಿ

ಮುಂದುವರೆದ ವೈದ್ಯರ ಮುಷ್ಕರ

0

ಬೆಳಗಾವಿ: KPMEA ತಿದ್ದುಪಡಿ ಮಸೂದೆ 2017 ವೈದ್ಯರಿಗೆ ಮಾರಕ ಆಗಿ ಹೊರಬರುತ್ತಿದ್ದು ಅದನ್ನು ಮಾರ್ಪಡಿಸಬೇಕು ಇಲ್ಲವೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಖಾಸಗಿ ವೈದ್ಯರು, ಅರೆವೈದ್ಯರ ಪ್ರತಿಭಟನೆ ಸಿಎಂ ಅವರೊಂದಿಗಿನ ಮಾತುಕತೆ ಬಳಿಕವೂ ಇಂದು ಮುಂದುವರೆದಿದೆ. ಸುವರ್ಣವಿಧಾನಸೌಧದ ಬಳಿಯ ಸುವರ್ಣಗಾರ್ಡನನಲ್ಲಿ ಅಧಿವೇಶನದ ಮೊದಲ ದಿನವೇ ಪ್ರತಿಭಟನೆ ಆರಂಭಿಸಿದ್ದ ಸಾವಿರಾರು ವೈದ್ಯರು ಸಿಎಂ ಅವರೊಂದಿಗಿನ ಮಾತುಕತೆ ತೃಪ್ತಿಯಾಗಿಲ್ಲ ಎಂಬುವುದನ್ನು ತೋರ್ಪಡಿಸಿದೆ.

ಕೆಪಿಎಂಇ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ವಿಧಾನಸಭೆಯಲ್ಲಿ ಮಂಡಿಸಕೂಡದು ಎಂಬುವುದು ವೈ‌ದ್ಯರ ಪ್ರಮುಖ ಬೇಡಿಕೆಯಾಗಿದೆ. ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭಾಂಗಣದಲ್ಲಿ ನಡೆದ ವೈದ್ಯರೊಂದಿಗಿನ ಚರ್ಚೆಯಲ್ಲಿ ಫಲಪ್ರದ ಮಾತುಕತೆಯಾಗಿಲ್ಲ ಎಂಬುವುದನ್ನುವ ವೈದ್ಯರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಾಯಕರು ಸ್ಪಷ್ಠಪಡಿಸಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ವೈದ್ಯರ ಬೇಡಿಕೆ ಪರಿಶೀಲಿಸಲಾಗುತ್ತಿದೆ. ಆರೋಗ್ಯ ಸಚಿವರೊಂದಿಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದ್ದ ಬೆನ್ನಿಗೆ ಪ್ರತಿಭಟನೆ ಎರಡನೇ ದಿನಕ್ಕೆ ಮುಂದುವರೆದಿದೆ.
ಬೆಳಗಾವಿ ನಗರದ ಖಾಸಗಿ ವೈದ್ಯಕೀಯ ಸಂಸ್ಥೆಗಳ ವೈದ್ಯರು, ಅರೆವೈದ್ಯರು ಭಾಗವಹಿಸಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.