ಉತ್ತಮ ಸಮಾಜಕ್ಕಾಗಿ

ಸಮಸ್ಯೆಗಳ ಚರ್ಚೆಗಿಂತ ಒಳಗೆ ಡಿಶುಂ, ಹೊರಗೆ ಓಪನ್ ಚರ್ಚೆ

0

ಬೆಳಗಾವಿ(ಸುವರ್ಣಸೌಧ): ಬೆಳಗಾವಿ ಚಳಿಗಾಲದ ಅಧಿವೇಶನ ಸಮಸ್ಯೆಗಳ ಚರ್ಚೆಗಿಂತ ತಮ್ಮ ತಮ್ಮ ರಾಜಕೀಯ ಬೆಳವಣಿಗೆಗಳ, ಭವಿಷ್ಯಗಳ ಮುನ್ನುಡಿ ಚರ್ಚೆಗೆ ಸೀಮಿತವಾದಂತೆ ಕಂಡುಬಂದಿದೆ. ಮುಂಬರುವ ಚುನಾವಣೆಯಲ್ಲಿ ತಮ್ಮ ರಾಜಕೀಯ ಭವಿಷ್ಯ ಹೇಗಿರಬೇಕು ಎಂಬ ಬಗ್ಗೆ ಚರ್ಚೆಯನ್ನು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಾಳೆಯದಲ್ಲಿ ನಡೆದಿದೆ.

ಪಲಾಯನವಾದಿಗಳು ಮತ್ತು ಸೆಳೆದುಬರುವ ಶಾಸಕರ ಬಗ್ಗೆ ಚರ್ಚೆ ಪಕ್ಷದ ಪಡಸಾಲೆಗಳಲ್ಲಿ ಕೇಳಿಬರುತ್ತಿದೆ. ವಿಧಾನಸಭೆ, ವಿಧಾನ ಪರಿಷತ್, ಲಾಂಜ್ ಸೇರಿದಂತೆ ಮತ್ತಿತರೆಡೆ ಗುಂಪು ಗುಂಪಾಗಿ ಶಾಸಕರು ಗುಪ್ತವಾಗಿ ಮಾತನಾಡುತ್ತಿರುವುದು ಪಕ್ಷಾಂತರ ಪರ್ವಕ್ಕೆ ಮುನ್ನುಡಿ ಎಂಬಂತಿದೆ. ಸದನಗಳಲ್ಲಿ ಅತಿರೇಕವಾಗಿ ಪರಸ್ಪರ ವರ್ತಿಸುವ ರಾಜಕೀಯ ದಿಗ್ಗಜರ ಚಲನವಲನ ತೀರಾ ಅನ್ಯೋನ್ಯವಾಗಿ ಕಾಣುತ್ತಿದೆ.

ಕಾಂಗ್ರೆಸನ ಹೆಚ್ಚಿನ ಶಾಸಕರು ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ವಿಲೂನವಾಗುವ ಪ್ರಯತ್ನ ಚುನಾವಣೆಗೆ ಮುಂಚಿತವಾಗಿ ನಡೆಸಿರುವ ಸಲ್ಲಾಪ ಈಗ ರಟ್ಟಾಗಿದೆ. ರಾಜಕೀಯ ಮಾಡಿದರೆ, ರಾಜಕೀಯವಾಗಿ ನಿಮ್ಮನ್ನು ಫೇಸ್ ಮಾಡುತ್ತೇವೆ ಎಂದು ಸ್ವತಃ ಸಿದ್ದರಾಮಯ್ಯ ಸದನದಲ್ಲಿ ಪ್ರತಿಪಕ್ಷ ಬಿಜೆಪಿಗೆ ಶೆಡ್ಡು ಹೊಡೆದ ಮಧ್ಯೆ ಕಾಂಗ್ರೆಸ್ ನಿಂದ ಬಿಜೆಪಿ ಜೆಡಿಎಸ್ ಗೆ ಜಿಗಿಯುವರ ಸಂಖ್ಯೆಯ ಬಗ್ಗೆ ಈಗ ಓಪನ್ ಚರ್ಚೆ ನಡೆದಿರುವುದು ಗಮನಾರ್ಹ. ಗೆಲ್ಲುವ ಕುದುರೆ ಹಿಂದೆ ಬೀಳುವ ಸಮಯಸಾಧಕ ರಾಜಕೀಯ ನಡೆಗಳು ಈಗಿಂದಲೇ ಪ್ರಾರಂಭವಾಗಿದ್ದು, ಮುಂಬರುವ ಚುನಾವಣೆ ಅಮಿತ ಕುತೂಹಲ ಮೂಡಿಸಿದೆ.

Leave A Reply

 Click this button or press Ctrl+G to toggle between Kannada and English

Your email address will not be published.