ಉತ್ತಮ ಸಮಾಜಕ್ಕಾಗಿ

ಬೆಳಗಾವಿ ಅಧೀವೇಶನಕ್ಕೆ ಸ್ಥಳೀಯ ಪತ್ರಿಕೆಗಳ ಸಂಪಾದಕರಿಗೆ ಅವಮಾನ

0


ಬೆಳಗಾವಿ, –  ಬಹಳ ವರ್ಷಗಳ ಕನಸು ಇದ್ದ ಬೆಳಗಾವಿಯಲ್ಲಿ ಅಧಿವೇಶನಕ್ಕೆ ಕಳೆದ 10 ವರ್ಷಗಳ ಹಿಂದೆ ಈ ಭಾಗದ ಜನರ ಆಶಯ ಈಡೇರಿತು. ಆದರೆ ಪ್ರಾದೇಶಿಕ ಅಸಮಾನತೆ ನೀಗಿಸುವ ನೆಪದಲ್ಲಿ ಮಾಡುತ್ತಿರುವ ಅಧಿವೇಶನ ವರ್ಷ ವರ್ಷಕ್ಕೆ ವ್ಯವಸ್ಥಿತೆಗಳು ಹಾಳಾಗುತ್ತಿವೆ. ಇದರಲ್ಲಿ ಕಳೆದ 20, 30, 40 ವರ್ಷಗಳಿಂದ ಬಹಳ ಕಷ್ಟ ಪಟ್ಟು ಗಡಿಭಾಗವಾದ ಬೆಳಗಾವಿಯಲ್ಲಿ ಕನ್ನಡ ಪತ್ರಿಕೆಗಳನ್ನು ನಡೆಸುತ್ತಿರುವುದು ಸಾಹಸದ ಕೆಲಸವೇ ಸರಿ, ಅಂತಹ ಸಂಪಾದಕರುಗಳಿಗೆ ಇಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಪತ್ರಕರ್ತರ ಗ್ಯಾಲರಿ ಪಾಸ್ ನೀಡದೇ ಸಾಮಾನ್ಯ ಸಾರ್ವಜನಿಕರಂತೆ ಅವರೆಲ್ಲರಿಗೂ ಪ್ರೇಕ್ಷರ ಗ್ಯಾಲರಿಯಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿ ಅವರನ್ನು ಅವಮಾನಿಸಲಾಗಿದೆ.
ಕೇವಲ ಅಧಿವೇಶನಕ್ಕೋಸ್ಕರವೇ ಕೋಟಿ ಕೋಟಿ ಖರ್ಚು ಮಾಡುವ ಆಡಳಿತ ವ್ಯವಸ್ಥೆಗೆ ಪತ್ರಿಕೆಗಳ ಹಿರಿಯ ಸಂಪಾದಕರುಗಳ ಮನಸ್ಸು ನೋಯಿಸುವ ಕೆಲಸ ಮಾಡುವದು ತಪ್ಪಲ್ಲವೇ ಎಂದು ಹೆಸರು ಹೇಳಲಿಚ್ಚಿಸದ ಸಂಪಾದಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇನ್ನು ಯಾವ ಅಬ್ಬರಕ್ಕೆ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ,  ಈ ಜಿಲ್ಲೆಗೆ ಸಂಬಂಧಿಸಿದ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಮತ್ತು ವಾರ್ತಾ ಇಲಾಖೆ ಅಧಿಕಾರಿಗಳಿಗೆ ಯಾವ ಪತ್ರಿಕೆ ಎಷ್ಟು ವರ್ಷಗಳಿಂದ ಪ್ರಕಟಗೊಳ್ಳುತ್ತಿದೆ ಎಂದು ಅವರ ಕಡತದಲ್ಲಿಯೇ ಗೊತ್ತಾಗುತ್ತದೆ. ಅಂತಹವರಿಗಾದರೂ ಗೌರವಕ್ಕೆ ಅವರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡಿದ್ದರೆ ಈ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತಿತ್ತು,
ಸಂವಿಧಾನದ 4ನೇ ಅಂಗ ಎಂದು ಉದ್ಘಾರವಾಗಿ ಎಲ್ಲ ಕಡೆ ಹೇಳಿ ಹೇಳಿ ಪತ್ರಿಕೆಗಳವರನ್ನು ಎತ್ತರಕ್ಕೆ ಏರಿಸುತ್ತಾರೆ, ಹಿರಿಯ ಸಂಪಾದಕರುಗಳಿಗೆ ಈ ಅನ್ಯಾಯವಾದರೆ ಇನ್ನು ಸಾಮಾನ್ಯ ಜನರು ಇವರಿಂದ ಏನು ಅಪೇಕ್ಷಿಸಬಹುದು ಎಂದು ಸಂಪಾದರಕು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ

Leave A Reply

 Click this button or press Ctrl+G to toggle between Kannada and English

Your email address will not be published.