ಉತ್ತಮ ಸಮಾಜಕ್ಕಾಗಿ

CS ಜತೆ CM ಚರ್ಚೆ

0

ಬೆಳಗಾವಿ: ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಸರಕಾರವನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚೆ ನಡೆಸಿದರು. ತಾವು ಉಳಿದುಕೊಂಡಿರುವ ಸರ್ಕ್ಯೂಟ್ ಹೌಸನಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಷಚಂದ್ರ ಕುಂಟಿಯಾ ಅವರೊಂದಿಗೆ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಮುಖ್ಯಮಂತ್ರಿ ಸಚಿವರ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್, ತುಶಾರ್ ಗಿರಿನಾಥ ಶೇಖರಪ್ಪ ಮತ್ತಿತರ ಅಧಿಕಾರಿಗಳು ಮುಖ್ಯಮಂತ್ರಿ ಬಯಸಿದ ಮಾಹಿತಿ ವಿವರಗಳನ್ನು ಈ ಸಂದರ್ಭದಲ್ಲಿ ನೀಡಿದರು.

ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿರುವ ಪ್ರತಿಪಕ್ಷಗಳ ಗದ್ದಲ ಮತ್ತು ಸಭಾತ್ಯಾಗದಿಂದ ಸಿಎಂ ಬೇಸತ್ತಂತೆ ಕಂಡುಬಂದರು. ರಾಜೀನಾಮೆ ಪಡೆಯಲಾರೆ ಎಂದು ಸಿಎಂ ವಾದಿಸಿದರೆ, ನಾವು ಬಿಡೇವು ಎಂದು ಪ್ರತಿಪಕ್ಷಗಳು ಪರಸ್ಪರ ಸಡ್ಡು ಹಿಡೆದಿದ್ದಾರೆ. ಕಾರ್ಯಕಲಾಪಗಳಲ್ಲಿ ಸರಕಾರ ನಡೆದುಕೊಳ್ಳಬೇಕಾದ ವಿಷಯಗಳ ಬಗ್ಗೆ ಸಿಎಂ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

Leave A Reply

 Click this button or press Ctrl+G to toggle between Kannada and English

Your email address will not be published.