ಉತ್ತಮ ಸಮಾಜಕ್ಕಾಗಿ

” ವಿಶ್ವ ಮದುಮೇಹ ದಿನಾಚರಣೆ 2017 “ ಜಿಲ್ಲಾ ಮಟ್ಟದ ಜಾಥಾ

0

ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಬೆಳಗಾವಿ ಹಾಗೂ ಜಿಲ್ಲಾ ಅಸಾಂಕ್ರಾಮಿಕ ರೋಗಗಳ (ಎನ್.ಸಿ.ಡಿ) ಘಟಕ ಇವರ ಸಹಯೋಗದಲ್ಲಿ ದಿನಾಂಕ: 14.11.2017 ರಂದು ” ವಿಶ್ವ ಮದುಮೇಹ ದಿನಾಚರಣೆ 2017 “ ಅಂಗವಾಗಿ ಜಿಲ್ಲಾ ಮಟ್ಟದ ಜಾಥಾ ಕಾರ್ಯಕ್ರಮ ಜರುಗಿತು.
ಡಾ: ಚಾಂದನಿ ದೇವಡಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳು, ಬೆಳಗಾವಿ ಇವರು ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಜಾಥಾದಲ್ಲಿ ಡಾ: ಬಿ ಎನ್ ತುಕ್ಕಾರ, ಜಿಲ್ಲಾ ಸಮೀಕ್ಷಾಧಿಕಾರಿಗಳು, ಡಾ: ನಿತಿನ್ ಹೆಚ್, ಡಿಸ್ಟ್ರಿಕ್ಟ್ ಕೊ-ಆರ್ಡಿನೇಟರ್, ಎನ್.ಸಿ.ಡಿ ಬೆಳಗಾವಿ, ಶ್ರೀ ಧಾಮನೆಕರ, ಪ್ರಾಂಶುಪಾಲರು, ಎ.ವ್ಹಿ.ಎಂ ಆದರ್ಶ ವಿದ್ಯಾ ಮಂದಿರ ಹಾಗೂ ಕಾಂಪೊಜಿಟ್ ಜ್ಯೂನಿಯರ ಕಾಲೇಜ ವಡಗಾವಿ, ಶ್ರೀ ಖನ್ನುಕರ, ಹಿರಿಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಮತ್ತು ಶ್ರೀ ಬಿ ಪಿ ಯಲಿಗಾರ, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು. ಜಾಥಾದಲ್ಲಿ ಆದರ್ಶ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು. ವಡಗಾವಿಯ ಬೀದಿಗಳಲ್ಲಿ ಜಾಥಾ ಸಂಚರಿಸಿ ಘೋಷಣೆಗಳನ್ನು ಕೂಗಿ ಸಾರ್ವಜನಿಕರಿಗೆ ಮಧುಮೇಹದ ಕುರಿತು ಅರಿವು ಮೂಡಿಸಿದರು. ಕೊನೆಗೆ ವಿದ್ಯಾ ಮಂದಿರದ ಆವರಣದಲ್ಲಿ ಕೊನೆಗೊಂಡಿತು.
ಜಾಥಾ ಪೂರ್ವದಲ್ಲಿ ಶಾಲೆಯಲ್ಲಿ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಜರುಗಿಸಲಾಯಿತು ಡಾ: ಬಿ ಎನ್ ತುಕ್ಕಾರ, ಜಿಲ್ಲಾ ಸಮೀಕ್ಷಾಧಿಕಾರಿಗಳು, ಡಾ: ನಿತಿನ್ ಹೆಚ್, ಡಿಸ್ಟ್ರಿಕ್ಟ್ ಕೊ-ಆರ್ಡಿನೇಟರ್, ಎನ್.ಸಿ.ಡಿ ಬೆಳಗಾವಿ ಇವರು ಮಾತನಾಡಿದರು ಶ್ರೀ ಸಿ.ಜಿ.ಅಗ್ನಿಹೋತ್ರಿ ಸ್ವಾಗತಿಸಿದರು. ಶ್ರೀ ಪಾತಳಿ, ಹಿ.ಪು.ಆ.ಸ ಇವರು ವಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.