ಉತ್ತಮ ಸಮಾಜಕ್ಕಾಗಿ

ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0

ಡಿಸೆಂಬರ್ 13 ರಿಂದ 19ರ ವರೆಗೆ ಕೊಕಟನೂರ ಎಲ್ಲಮ್ಮಾದೇವಿ ಜಾತ್ರೆ
ಸೂಕ್ತ ಬಂದೋಬಸ್ತ, ಸ್ವಚ್ಚತೆ ಕಾಪಾಡಲು ಜಿಲ್ಲಾಧಿಕಾರಿ ಆದೇಶ
ಬೆಳಗಾವಿ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಡಿಸೆಂಬರ್ 13 ರಿಂದ 19ರ ವರೆಗೆ ಶ್ರೀ ಎಲ್ಲಮ್ಮಾದೇವಿ ಜಾತ್ರೆ ಜರುಗಲಿದೆ.
ಜಾತ್ರೆ ಸಂದರ್ಭದಲ್ಲಿ ಕೊಕಟನೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕಾನೂನು ಸುವ್ಯವಸ್ತೆ ಕಾಪಾಡಲು ಮತ್ತು ಜಾತ್ರೆಯನ್ನು ಶಾಂತಿಯುತವಾಗಿ ಆಚರಿಸಲು ಸೂಕ್ತ ಪೊಲೀಸ್ ಬಂಬೋಬಸ್ತ ಒದಗಿಸಲು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಮತ್ತು ಸಾರ್ವಜನಿಕ ಆರೋಗ್ಯ ಹಿತರಕ್ಷಣೆಯ ದೃಷ್ಟಿಯಿಂದ ಜಾತ್ರೆ ಜರುಗುವ ಸುತ್ತಮುತ್ತಲಿನ 10 ಕೀ.ಮಿ. ಅಂತರದಲ್ಲಿ ಯಾವುದೇ ಸಾಂಕ್ರಾಮಿಕ ರೋಗ ರುಜಿನಗಳು ಹರಡದಂತೆ ಮತ್ತು ಸ್ವಚ್ಚತೆ ಹಾಗೂ ಆರೋಗ್ಯ ಕಾಪಾಡುವಂತೆ ಕ್ರಮಕೈಗೋಳ್ಳಲು ಬೆಳಗಾವಿ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.

ನವೆಂಬರ 16 ರಂದು ಕಾಕತಿಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜನೆ
ಬೆಳಗಾವಿ: : ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ನವೆಂಬರ್ 16 ರಂದು ಬೆಳಿಗ್ಗೆ 9 ರಿಂದ ಮದ್ಯಾಹ್ನ 1 ಗಂಟೆವರೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜರುಗಲಿದೆ.
ಜಿಲ್ಲಾ ಪಂಚಾಯತ ಬೆಳಗಾವಿ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ರಕ್ತ ಬಂಡಾರ, ಬಿಮ್ಸ್, ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಪ್ರಾತಮಿಕ ಆರೋಗ್ಯಕೇಂದ್ರ ವಂಟಮೂರಿ ಹಾಗೂ ಕಾಕತಿ ಗ್ರಾಮ ಪಂಚಾಯತ ಸಹಯೋಗದಲ್ಲಿ ಈ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು, ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳಬೇಕೆಂದು ವಂಟಮೂರಿ ಪ್ರಾ.ಆ.ಕೇಂದ್ರದ ಆರೋಗ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರ ಸ್ವಚ್ಚತೆಗಾಗಿ ಸಾರ್ವಜನಿಕ ಸಹಕಾರ ಕೋರಿದ ಅಥಣಿ ಪುರಸಭೆ
ಬೆಳಗಾವಿ: ಅಥಣಿ ಪಟ್ಟಣವನ್ನು ಬಯಲು ಶೌಚಮುಕ್ತ ಮಾಡುವುದು ಎಲ್ಲ ನಗರವಾಸಿಗಳ ಕರ್ತವ್ಯವಾಗಿದ್ದು, ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಎಲ್ಲಿ ಬೆಕಾದಲ್ಲಿ ಕಸ ಎಸೆಯುವದನ್ನು ನಿಷೇಧಿಸಲಾಗಿದೆ. ಘನತ್ಯಾಜ ವಸ್ತು ನಿಯಮ 2016ರ ಅನ್ವಯ ಮನೆಮನೆಗಳಲ್ಲಿ ಉತ್ಪತಿಯಾಗುವ ಕಸವನ್ನು ಹಸಿ ಮತ್ತು ಒಣ ಕಸವನ್ನಾಗಿ ಬೇರ್ಪಡಿಸಿ ಸಾರ್ವಜನಿಕರು ಪುರಸಭೆ ವಾಹನಗಳಿಗೆ ನೀಡಬೇಕು.
ಭಾರತ ಸರಕಾರದ ಆದೇಶದಂತೆ ಅಥಣಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಪೆಟ್ರೋಲ್ ಬಂಕಗಳಲ್ಲಿ ಇರುವ ಶೌಚಾಲಯಗಳನ್ನು ಸಾರ್ವಜನಿಕರು ಉಪಯೋಗಿಸಿಕೋಳ್ಳಬಹುದಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ ಎಸೆದರೆ ಅಂತವರ ವಿರುದ್ದ ಕಾನೂನು ಕ್ರಮತೆಗೆದುಕೊಳ್ಳಲಾಗುವುದು ಮತ್ತು ದಂಡ ವಸೂಲಿ ಮಾಡಲಾಗುವದೆಂದು ಪುರಸಭೆ ಮಿಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ, ಚಿಕ್ಕೋಡಿ ಉಪಕೇಂದ್ರ
ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಉಚಿತ ತರಬೇತಿಗಳಿಗಾಗಿ ಅರ್ಜಿ ಆಹ್ವಾನ
ಬೆಳಗಾವಿ:  ನೂತನವಾಗಿ ನಿರ್ಮಿಸಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಚಿಕ್ಕೋಡಿ ಉಪಕೇಂದ್ರದಲ್ಲಿ “ಮುಖ್ಯ ಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ” ಕೌಶಲ್ಯ ಅಭಿವೃದ್ಧಿ ಯೋಜನೆಗೆ ಉಚಿತವಾಗಿ ನಡೆಸುವ ತರಬೇತಿಗಳಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

“ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ” ಕೌಶಲ್ಯ ಅಭಿವೃದ್ಧಿಯು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ನೀರುದ್ಯೋಗ ಯುವಕ, ಯುವತಿಯರಿಗೆ ವಿವಿಧ ತರಬೇತಿಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಟೂಲ್ ರೂಮ್ ಮಷಿನಿಷ್ಟ, ಟರ್ನರ್, ಮಿಲ್ಲರ್ , ಸೋಲಿಡ್ ವಕ್ರ್ಸ, ಆಟೊ ಕ್ಯಾಡ್ ಸೇರಿದಂತೆ ಇನ್ನು ಅನೇಕ ವಿಷಯಗಳ ತರಬೇತಿಗಾಗಿ ಜಿಟಿಟಿಸಿ ಕೇಂದ್ರವು ಅರ್ಜಿ ಆಹ್ವಾನಿಸಿದೆ. ತರಬೇತಿಗಳನ್ನು ಅತ್ಯಾಧುನಿಕ ತಾಂತ್ರಿಕತೆ ಹಾಗೂ ತಂತ್ರಜ್ಞಾನವನ್ನು ಬಳಸಿಕೊಂಡು ಜಾಗತಿಕ ಪ್ರಗತಿಯೊಂದಿಗೆ ಸರಿಸಮವಾಗಿರುವಂತೆ ಮೇಲಿನ ಕೋರ್ಸುಗಳು ಪ್ರಾಕ್ಟಿಕಲ್ ಓರಿಯೆಂಟೆಡ್ ತರಬೇತಿಯಾಗಿ ನೀಡಲಾಗುತ್ತದೆ.
ಕಂಪನಿಗಳಿಗೆ ಬೇಕಾಗುವ ಕೌಶಲ್ಯ ಮತ್ತು ಜ್ಞಾನವನ್ನು ಅಳವಡಿಸಿಕೋಳ್ಳಲು ಬೇಕಾಗುವ ಎಲ್ಲ ತಂತ್ರಜ್ಞಾನ ಮತ್ತು ಸೌಕರ್ಯಗಳನ್ನು ಜಿಟಿಟಿಸಿ ಕೇಂದ್ರ ಅಳವಡಿಸಿಕೊಂಡಿರುವುದರಿಂದ ಈ ಕೌಶಲ್ಯ ಅಭಿವೃದ್ಧಿ ತರಬೇತಿಗಳು ಬಹುಬೇಡಿಕೆಯ ತರಬೇತಿಗಳೆಂದು ಸಾಬೀತಾಗಿದೆ.
ಈ ಅವಕಾಶವನ್ನು ಬಡ ನೀರುದ್ಯೋಗ ಯುವಕ, ಯುವತಿಯರು ಸದುಪಯೋಗಪಡಿಸಿಕೋಳ್ಳಬೇಕು ಹಾಗೂ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ ನವೆಂಬರ್ 30,2017 ಆಗಿದ್ದು ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಚಿಕ್ಕೋಡಿ, ಸರ್ಕಾರಿ ಪದವಿ ಕಾಲೇಜು ಹತ್ತಿರ, ನಿಪ್ಪಾಣಿ ರೋಡ, ಚಿಕ್ಕೋಡಿ ದೂರವಾಣಿ: 9141630309, 7829567499, 9972851277 ಸಂಪರ್ಕಿಸಲು ಬೆಳಗಾವಿ ಉದ್ಯಮಬಾಗದಲ್ಲಿರುವ ಜಿಟಿಟಿಸಿ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.