ಉತ್ತಮ ಸಮಾಜಕ್ಕಾಗಿ

ನಾನು ವಚನ ಭೃಷ್ಟನಲ್ಲ ಯಡಯೂರಪ್ಪನವರ ಅಧಿಕಾರ ತಪ್ಪಿಸಿದ್ದು ಬಿಜೆಪಿಯವರೇ: HDK

0

ಬೆಳಗಾವಿ: ಎಚ್‌.ಡಿ.ಕುಮಾರಸ್ವಾಮಿಯವರು ಇಂದು ನಗರದ ಸಿಪಿಎಡ್ ಮೈದಾನದಲ್ಲಿ ಕುಮಾರಪರ್ವ 2018 ಜೆಡಿಎಸ್ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡುತ್ತ ನಾನು ವಚನ ಭೃಷ್ಟನಲ್ಲ ಯಡಯೂರಪ್ಪ ನವರ ಅಧಿಕಾರ ತಪ್ಪಿಸಿದ್ದು ಬಿಜೆಪಿಯವರೇ ಎಂದು ಆರೋಪಿಸಿದರು. ಸಮಿಶ್ರ ಸರಕಾರ ಇದ್ದಾಗ ನಾವು 20 ತಿಂಗಳ ಅಧಿಕಾರದ ನಡೆಸಿದ ನಂತರ ಬಿ.ಎಸ್‌.ಯಡಿಯೂರ​‍ಪ್ಪಗೆ ಕೊಡಲಿಲ್ಲವೆಂದು ಜನರು ನಮಗೆ ಶಿಕ್ಷೆ ನೀಡಿದ್ದೀರಿ. ಆದರೆ ಬಿಜೆಪಿಯವರೆ ಯಡಿಯೂರ​‍ಪ್ಪರನ್ನು ಸೋಲಿಸಿದ್ದು. ಈ ಬಗ್ಗೆ ಮಾದ್ಯಮಗಳ ಎದುರು ಯಡಿಯೂರ‍ಪ್ಪನವರೆ ಬಾಯಿ ಬಿಟ್ಟಿರುವುದನ್ನು ವಿಡಿಯೋ ಮೂಲಕ ಸಮಾವೇಶದಲ್ಲಿ ತೋರಿಸಿದರು. ಆ ಸಂದರ್ಭದಲ್ಲಿ ಜನರ ಮುಂದೆ ನಾನು ಸತ್ಯವನ್ನು ಇಡಲು ಹೋದಾಗ ನನ್ನನ್ನು ಕಡೆಗಣಿಸಿ ನನಗೆ ಶಿಕ್ಷೆ ನೀಡಿದ್ದೀರಿ. ಈ ಸಲ ವಿಡಿಯೋ ಮೂಲಕ ತೋರಿಸಿದ್ದೇನೆ. ಜೆಡಿಎಸ್‌ಗೆ ಬೆಂಬಲಿಸಿ ಸರಕಾರ ರಚಿಸಲು ಅನುಮಾಡಿಕೊಡಿ ಎಂದು ಮನವಿ ಮಾಡಿದರು.ಜೆಡಿಎಸ್ ಅಧಿಕಾರಕ್ಕೆ ಬಂದರೆ ಆತ್ಮಹತ್ಯೆ ನಿಲ್ಲುತ್ತವೆ ಎಂದು ಹೇಳಿದರು. ರಾಜ್ಯದಲ್ಲಿ ಸಾವಿರಾರು ರೈತರು ಆತ್ಮಹತ್ಯೆಗೆ ಬಲಿಯಾಗಿದ್ದಾರೆ. ಆಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾರಪೋರೇಟ್ ಕಂಪನಿಗಳ ಮಿತ್ರರಾಗಿದ್ದು ರೈತರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಜೆಡಿಎಸ್ ಪಕ್ಷ ರೈತರ ಕೈ ಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಕೇವಲ ಸಾಲ ಮನ್ನಾ ಮಾಡಿದರೆ ಆಗದು. ದುಡಿಯುವವರಿಗೆ ಕೆಲಸ ಕೊಡುವ ನೀರ್ಧಾರವನ್ನು ಮಾಡಿದ್ದೇನೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಡಲಾಗುವುದು. ಮುಖ್ಯಮಂತ್ರಿಯಾಗಿದ್ದಾಗ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಅಲ್ಲದೇ ಗ್ರಾಮವಾಸ್ತವ್ಯ ಮಾಡಿದ್ದೇನೆ ಎಂದರು.

ಮಾಜಿ ಪ್ರಧಾನಿ ದೇವೆಗೌಡ, ವಿಪ ಸದಸ್ಯ ಬಸವರಾಜ ಹೊರಟ್ಟಿ, ಎಚ್‌.ಡಿ.ರೇವಣ್ಣ, ಮಧುಬಂಗಾರೆಪ್ಪ, ಶರವಣ್ಣ, ಬಂಡೆಪ್ಪ ಕಾಶಪ್ಪಗೋಳ ಸೇರಿದಂತೆ ಮುಂತಾದ ಮುಖಂಡರು ಹಾಜರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.