ಉತ್ತಮ ಸಮಾಜಕ್ಕಾಗಿ

ಶಾಲೆಯಲ್ಲೊಂದು ವಿಶಿಷ್ಟ ಮಕ್ಕಳ ದಿನಾಚರಣೆ

0

ಬೆಳಗಾವಿ: ಮಕ್ಕಳ ದಿನಾಚರಣೆ ನಗರದಾದ್ಯಂತ ಚಿಣ್ಣರ ಶಾಲೆಗಳಲ್ಲಿ ಸಂಭ್ರಮ. ಅದರಲ್ಲೂ ಖಾಸಗಿ, ಶ್ರೀಮಂತ ಶಾಲೆಗಳಲ್ಲಿ ಇದು ತುಸು ಹೆಚ್ಚೇ ಎನ್ನಬಹುದು. ಆದರೆ ಇಲ್ಲೊಂದು ಸರಕಾರಿ ಶಾಲೆಯಲ್ಲಿ ಅದರಲ್ಲೂ ಕನ್ನಡ ಶಾಲೆಯಲ್ಲಿ ಗ್ರಾಮಸ್ಥರೇ ಮಕ್ಕಳಿಗಾಗಿ ಕೇಕ್ ತರಿಸಿ, ಅವರ ಜೊತೆ ಸಂಭ್ರಮಿಸಿ ಮಕ್ಕಳ ದಿನಾಚರಣೆಯನ್ನು ಸಮೀಪದ ಹೊನಗಾ ಗ್ರಾಮದ ಸರಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮದ ಶಾಲೆಯಲ್ಲಿ ವಿಶಿಷ್ಠವಾಗಿ ಆಚರಿಸಿದರು.ಹೆಚ್ಚಾಗಿ ರೈತರ ಹಾಗೂ ಅಕ್ಕಪಕ್ಕದಲ್ಲಿರುವ ಕಾರ್ಖಾನೆಗಳ ಕಾರ್ಮಿಕರ ಹಾಗೂ ಬಡ ಮಧ್ಯಮವರ್ಗದವರ ಮಕ್ಕಳೇ ಕಲಿಯುವ ಸರಕಾರಿ ಕನ್ನಡ ಹಿರಿಯ ಹಾಗೂ ಉರ್ದು ಶಾಲೆ ಹೊನಗಾದಲ್ಲಿ ಉರ್ದು ಶಾಲೆ ಎಸ್.ಡಿ.ಎಮ್.ಸಿ ಅಧ್ಯಕ್ಷ ನಜೀರ ಅಹ್ಮದ ಶೇಕ್, ಹಾಗೂ ಕನ್ನಡ ಶಾಲೆ ಎಸ್. ಡಿ. ಎಮ್.ಸಿ. ಅಧ್ಯಕ್ಷ ಭೈರು ಕಾಂಬಳೆ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಜೈತುನಬಿ ಶೇಕ್, ಮತ್ತು ಬಿ.ಎಸ್ ನಾಯಕ, ಕಲ್ಲಪ್ಪ ಕಾಂಬಳೆ, ಸಿದ್ದು ಕಾಂಬಳೆ, ಹಾಗೂ ಗ್ರಾಮಸ್ಥರು ಸೇರಿ ಸುಮಾರು 50 kg ಯ ಬೃಹತ ಕೇಕ್ ನ್ನು ತರಿಸಿ ಹಾಗೂ ಜಿಲ್ಲಾ ಪಂಚಾಯತ ಸದಸ್ಯ ಸಿದ್ದು ಸುಣಗಾರ ಹಾಗೂ ಉದ್ಯಮಿ ಪ್ರದೀಪ MJ ಅವರನ್ನು ವಿಶೇಷ ಅಥಿತಿಗಳಗಾಗಿ ಕರೆಸಿ ಮಕ್ಕಳ ಜೊತೆ ಸಂಭ್ರಮಿಸಿದ್ದಾರೆ.ಮಕ್ಕಳ ಕೈಯಲ್ಲಿ ಕೇಕನ್ನು ಕಟ್ ಮಾಡಿ ಮಕ್ಕಳ ತೊದಲು ನುಡಿಗಳಿಗೆ ಕಿವಿಯಾಗಿದ್ದಾರೆ ಮಕ್ಕಳೂ ಕೂಡ ಸಿಹಿ ಸಿಹಿ ಕೇಕ್ ಸವಿದು ಖುಷಿ ಪಟ್ಟು ನಲಿದಿದ್ದಾರೆ. ಒಟ್ಟಾರೆಯಾಗಿ ಮಕ್ಕಳ ಜೊತೆ ಗ್ರಾಮಸ್ಥರೆಲ್ಲರೂ ಸೇರಿ ಮಕ್ಕಳ ದಿನಾಚರಣೆ ನಡೆಸಿದ್ದು ಎಲ್ಲರ ಮನ ಸೂರಗೊಂಡಿತು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: