ಉತ್ತಮ ಸಮಾಜಕ್ಕಾಗಿ

ಮಗುವಿಗೆ ಪ್ರತಿಭಟನಾ ಸ್ಥಳಕ್ಕೆ ಅಂಬುಲೆನ್ಸ ಜೊತೆ ಬಂದ ತಾಯಿ

0

ಬೆಳಗಾವಿ : ರಾಜ್ಯ ಸರಕಾರ ಮಂಡಿಸಲು ಹೊರಟಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆಯನ್ನು ವಿರೋಧಿಸಿ ರಾಜ್ಯಾದಂತ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಿ ಬೆಳಗಾವಿಯ ಸುವರ್ಣ ಸೌಧದ ಪಕ್ಕ ಮುಶ್ಕರ ನಡೆಸುತ್ತಿರುವ ವೈದ್ಯರಿಗೆ ಇವತ್ತೊಂದ ಶಾಕಿಂಗ ಸನ್ನಿವೇಶ ಎದುರಾಯಿತು.

ವೈದ್ಯರೆಲ್ಲರೂ ಸೇರಿ ಪ್ರತಿಭಟಿಸುತ್ತಿದ್ದಾಗ ಅಂಬುಲೆನ್ಸನಲ್ಲಿ ನೇರವಾಗಿ ಪ್ರತಿಭಟನಾ ಪೆಂಡಾಲಿಗೆ ಆಗಮಿಸಿದ ಗಂಗಾ ಎಂಬ ಮಹಿಳೆ ವೈದ್ಯರನ್ನು ಕಂಡು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ತನ್ನ ಮಗುವಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಲ್ಲೂ ಸ್ಕಾನಿಂಗ್ ಮಾಡಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದಳು ವೈದ್ಯರ ಹಾಗೂ ಸರಕಾರದ ಮೇಲೆ ವಾಗ್ದಾಳಿ ನಡೆಸಿದಳು. ಇದರಿಂದ ಕೆಲ ಕಾಲ ತಬ್ಬಿಬ್ಬಾದ ಸಂಘಟಕರು ಅವಳನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು ಆದರೆ ಅವಳ ಆಕ್ರಂದನವನ್ನು ಅಲ್ಲಿ ಯಾರೂ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: