ಉತ್ತಮ ಸಮಾಜಕ್ಕಾಗಿ

ಹೊಸ ಉದ್ಯಮಗಳಿಂದ ರಾಜ್ಯದಲ್ಲಿ 8.98 ಲಕ್ಷ ಉದ್ಯೋಗ ಅವಕಾಶ: ಸಚಿವ ಆರ್.ವಿ ದೇಶಪಾಂಡೆ

0

ಬೆಳಗಾವಿ: ರಾಜ್ಯದಲ್ಲಿ ಕಳೆದ ಮೂರು ವರ್ಷಗಳ 1823 ಹೊಸ ಕೈಗಾರಿಕೆ ಹಾಗೂ ಉದ್ಯಮಗಳಿಗೆ ಅನುಮೊದನೆ ನೀಡಲಾಗಿದೆ. ಈ ಉದ್ಯಮಗಳಿಗೆ 3.34 ರೂ. ಲಕ್ಷ ಕೋಟಿ ಬಂಡವಾಳ ಹೊಡಿಕೆಯಾಗಿದೆ. 8.98 ಲಕ್ಷ ಜನರಿಗೆ ಉದ್ಯೋಗಾವಕಾಶ ದೊರಕಲಿದೆ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಖಾತೆ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.
ವಿಧಾನ ಸಭೆ ಪಶ್ನೋತ್ತರ ಕಲಾಪದಲ್ಲಿ ಸದಸ್ಯ ನಾರಾಯಣಸ್ವಾಮಿ ಅವರ ಪ್ರಶ್ನೇಗೆ ಉತ್ತರ ನೀಡಿದ ಅವರು ಬೃಹತ್ ಮತ್ತು ಮದ್ಯಮ ಗಾತ್ರದ ಈ ಯೋಜನೆಗಳ ಆರಂಭಕ್ಕೆ 3 ರಿಂದ 5 ವರ್ಷ ಸಮಯ ಅಗತ್ಯವಿದೆ ಎಂದು ತಿಳಿಸಿದರು.

ನೇಮಕಾತಿ ಹಂತದಲ್ಲಿ ಖಾಲಿ ಉಳಿಯುವ
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳನ್ನು ಹೊಸ ರಿಕ್ತ ಸ್ಥಾನಗಳಾಗಿ ಪರಿಗಣನೆ;
-ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿ: ಗೆಜೆಟೆಡ್ ಪ್ರೊಬೇಷನರ್ಸ್ ಹುದೆಗಳ ನೇಮಕಕ್ಕೆ ಸಂಭಂಧಿಸಿದಂತೆ ಅಚಿತಿಮ ಆಯ್ಕೆ ಪಟ್ಟಿ ಪ್ರಕಟವಾದ ನಂತರ ಕೆಲವು ಅಭ್ಯರ್ಥಿಗಳು ಹಂಚಿಕೆಯಾದ ಇಲಾಖೆಯಲ್ಲಿ ವರದಿ ಮಾಡಿಕೊಳ್ಳದೇ ಖಾಲಿ ಉಳಿಯುವ ಹುದ್ದೆಗಳನ್ನು ಹೊಸ ರಿಕ್ತ ಸ್ಥಾನಗಳು ಎಂದು ಪರಿಗಣಿಸಿ,ಮುಂದಿನ ನೇಮಕಾತಿಗೆ ಸೇರಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿಂದು ಸದಸ್ಯ ಪಿಳ್ಳ ಮುನಿಶಾಮಪ್ಪ ಅವರ ಪ್ರಶ್ನೆಗೆ ಉತ್ತರ ಒದಗಿಸಿದ ಮುಖ್ಯಮಂತ್ರಿಗಳು ಈ ಮಾಹಿತಿ ನೀಡಿದರು. ಕರ್ನಾಟಕ ಸಿವಿಲ್ ಸೇವಾ ನಿಯಮಗಳು-2006ರನ್ವಯ ಯಾವುದೇ ವಿಶೇಷ,ನಿರ್ದಿಷ್ಟ ಅಥವಾ ಸಾಮಾನ್ಯ ನೇಮಕಾತಿ ನಿಯಮಗಳು ಜಾರಿಯಲ್ಲಿರದ ಗ್ರೂಪ್ ಎ,ಬಿ,ಸಿ,ಡಿ ನೇರ ನೇಮಕಾತಿ ಹುದ್ದೆಗಳಿಗೂ ಅನ್ವಯಿಸುತ್ತವೆ. ಈ ನಿಯಮಗಳನ್ವಯ ಒಂದು ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಲು ಆಸ್ಪದ ಕಲ್ಪಿಸಲಾಗಿದೆ. ಆದರೆ ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿ ನಿಯಮ 1997 ರ ನಿಯಮಗಳಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಿಸಲು ಆಸ್ಪದವಿಲ್ಲ.ಈ ನಿಯಮಗಳನ್ವಯ ಅಭ್ಯರ್ಥಿಗಳಿಂದ ಅವರ ಆಯ್ಕೆಯ ಹುದ್ದೆಗಳ ಆದ್ಯತೆಯನ್ನು ಪಡೆಯಲಾಗುತ್ತದೆ.ಮೆರಿಟ್ ಆಧರಿಸಿ 14 ಇಲಾಖೆಗಲಲ್ಲಿನ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಒಂದು ವೇಳೆ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಿದರೆ ಈಗಾಗಲೇ ಆಯ್ಕೆಯಾಗಿ ವರದಿ ಮಾಡಿಕೊಂಡ ಅಭ್ಯರ್ಥಿಗಳ ಇಲಾಖೆಯಲ್ಲಿಯೂ ಬದಲಾವಣೆಗಳಾಗಬೇಕಾಗುತ್ತದೆ.ಇದರಿಂದ ಆಡಳಿತದಲ್ಲಿ ಗೊಂದಲಗಳು ಉದ್ಭವವಾಗುವ ಸಾಧ್ಯತೆಗಳಿರುವದರಿಂದ ಈ ನಿಯಮಗಳಿಗೆ ತಿದ್ದುಪಡಿ ತರುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.