ಉತ್ತಮ ಸಮಾಜಕ್ಕಾಗಿ

ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿಗೆ ವಿಶೇಷ ಆಹ್ವಾನಿತರಾಗಿ ಶಂಕರಾಚಾರ್ಯ ನೇಮಕ

0

ಬೆಳಗಾವಿ: ಬೆಳಗಾವಿ ಜಿಲ್ಲಾ ಗ್ರಾಮೀಣ ಬಿಜೆಪಿ ಕಾರ್ಯಕಾರಿಣಿ ಸಮಿತಿಗೆ ವಿಶೇಷ ಆಹ್ವಾನಿತರೆಂದು ಭಾಗ್ಯ ನಗರದ ಶಾರದಾಂಭೆÉ ಡೆವಲೆಪರ್ಸ ಮಾಲೀಕ, ವಿಶ್ವಕರ್ಮ ಸಮಾಜದ ಧುರೀಣ, ಬಿಜೆಪಿ ಹಿರಿಯ ಕಾರ್ಯಕರ್ತ ಎನ್.ಎಸ್. ಶಂಕರಾಚಾರ್ಯ ಇವರನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷ ಬೈಲಹೊಂಗಲ ಶಾಸಕ ಡಾ. ವಿಶ್ವನಾಥ ಪಾಟೀಲ ಇವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಕರ್ನಾಟಕ ಬಿಜೆಪಿ 150 ಗುರಿಯನ್ನು ಸಾಕಾರಗೊಳಿಸಲು ತಾವು ಅವಿರತ ಶ್ರಮಿಸುವುದಾಗಿ ತಾವು ಆಶಿಸುವುದಾಗಿ ಶಾಸಕ ಪಾಟೀಲ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಎನ್.ಎಸ್. ಶಂಕರಾಚಾರ್ಯ ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯವರು. 2007ರಿಂದ ಬೆಳಗಾವಿ ಭಾಗ್ಯ ನಗರದಲ್ಲಿ ನೆಲೆಸಿ ಖಾಯಂ ರಹವಾಸಿಯಾಗಿದ್ದಾರೆ. ಕಳೆದ 10 ವರ್ಷಗಳಿಂದ ಬಿಜೆಪಿ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು ಕಳೆದ ಸಾಲಿನ ಕೆಲ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ.
ವಿಶ್ವಕರ್ಮ ಸಮುದಾಯದ ಧುರೀಣರಾದ ಇವರು ವಿರ್ಶಕರ್ಮ, ಮೌನೇಶ್ವರ ಜಯಂತಿಗಳ ಯಶಸ್ವಿಗೆ ಸಹಕರಿಸುತ್ತಾರೆ. ಕಳೆದ ಸಾಲಿನ ವಿಶ್ವಕರ್ಮ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾಗಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಹೆಗ್ಗಳಿಕೆ ಇವರದ್ದಾಗಿದೆ.
ಪ್ರತಿವರ್ಷ ಕನ್ನಡ ರಾಜ್ಯೋತ್ಸವ ದಿನದಂದು ಅಟೋರಿಕ್ಷಾ ಚಾಲಕರನ್ನು ಸತ್ಕರಿಸುವುದು ಹಾಗೂ ಪೊಲೀಸರಿಗೆ ಸಿಹಿ ವಿತರಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತ ಬಂದಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.