ಉತ್ತಮ ಸಮಾಜಕ್ಕಾಗಿ

ವೈದ್ಯರು Assumption, Presumption ಬಿಟ್ಟು ಕರ್ತವ್ಯಕ್ಕೆ ಹೋಗಲಿ: ಪರಿಷತ್ತಿನಲ್ಲಿ ಸಿಎಂ

0

ಬೆಳಗಾವಿ: ವಾಸ್ತವದ ಹೊರತಾಗಿ ಸ್ವಗ್ರಹಿಕೆಯಿಂದ ವೈದ್ಯರು ಶಾಸನ ತಿದ್ದುಪಡಿಗೆ ಅಡ್ಡಿಪಡಿಸುತ್ತಿದ್ದಾರೆ. ಮುಖ್ಯಮಂತ್ರಿ ವೈದ್ಯರನ್ನು ಭೇಟಿಯಾಗಿ ಆಗಲೇ ಸಮಾಧಾನ ಪಡಿಸಿದ್ದಾರೆ.
ಇಂದು ಸಂಜೆ ಸಹ ಮತ್ತೆ ಕುಳಿತು ಚರ್ಚೆ ಮಾಡಲಾಗುವುದು. ಹೋರಾಟದಲ್ಲಿರುವ ಕೆಲ ಸಂಘಟನೆಯವರು ತಿದ್ದುಪಡಿ ಹಿಂತೆಗೆದುಕೊಳ್ಳಲು ಒತ್ತಾಯಿಸಿದರೆ ಹೆಂಗೆ? ಸಂಘಟನೆಗಳ ಒತ್ತಾಯಕ್ಕೆ ಮಣಿದು ತಿದ್ದುಪಡಿ ಇಲ್ಲವೇ ಶಾಸನ ರಚನೆ ಸದನ ಕೈ ಬಿಡಲು ಸಾಧ್ಯವೇ. ಸಂಘಟನೆಗಳ ಮಾತಿಗೆ ಶಾಸನಾಧಿಕಾರ ಹೊಂದಿರುವ ದ್ವಿಸದನಗಳು ಕೈ ಬಿಡಲು ಸಾಧ್ಯವೇ. ಶಾಸನವನ್ನು ಸದನಗಳು ರಚಿಸ ಬೇಕೋ, ಸಂಘಟನೆಗಳೋ ಎಂದು ವೈದ್ಯರನ್ನು ಪ್ರಶ್ನಿಸಿ, ಸರಕಾರದ ಮೇಲೆ ನಿಮಗೆ ಸಿಟ್ಟಿದ್ದರೆ, ಅದನ್ನು ರೋಗಿಗಳ ಮೇಲೆಕೆ ತಿರುಗಿಸುತ್ತೀರಿ ಎಂದು ವೈದ್ಯರನ್ನು ಸಚಿವ ರಮೇಶಕುಮಾರ ಪ್ರಶ್ನಿಸಿದ್ದಾರೆ. ಚಿಕಿತ್ಸಾ ದರ ನಿಗದಿಯನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಅನುವಾಗುವಂತೆ ಪರಿಷ್ಕರಿಸಿ ಅಧಿಸೂಚನೆ ಹೊರಡಿಸುತ್ತೇವೆ ಎಂದು ರಮೇಶಕುಮಾರ ತಿಳಿಸಿದರು.

ವೈದ್ಯಕೀಯ ‘ಸೇವೆ’ ಅಲ್ಲ ‘ವ್ಯಾಪಾರ’ ಮಾಡುತ್ತಿದ್ದಾರೆ. ಕೆಲವರು ಸರಕಾರಕ್ಕೆ ಗೌರವ ಕೊಟ್ಟರು ಮತ್ತು ಕೆಲವರು ಪ್ರತಿಭಟನೆಗಿಳಿದರು. ಜೀವ ಬಹಳ ಅಮೂಲ್ಯ ಅದಕ್ಕಾಗಿ ಸರಕಾರ ಪ್ರತಿಷ್ಠೆಗಿಳಿದಿಲ್ಲ. ವೈದ್ಯ ಸಂಘಟನೆಗಳೂ ಪ್ರತಿಷ್ಠೆಗೆ ಇಳಿಯದೇ ಪ್ರತಿಭಟನೆ ಹಿಂತೆಗೆದುಕೊಳ್ಳಬೇಕು ಎಂದು ರಮೇಶಕುಮಾರ ಮನವಿ ಮಾಡಿದರು. ತಿದ್ದುಪಡಿ ಅಧಿಕಾರ ಸರಕಾರ ಮತ್ತು ಶಾಸನ ಸಭೆಗೆ ಬಿಡಿ‌ ಒತ್ತಾಯದ ಪ್ರತಿಭಟನೆ ಮೂಲಕ ಸದನದ ಶಾಸನ ರಚನೆ ತಪ್ಪಿಸಲು ಸಾಧ್ಯವಿಲ್ಲ. ತಿದ್ದಪಡಿ ಬಿಲ್ ಇನ್ನೂ ಸದನದ ಮುಂದೆ ಮಂಡನೆ ಆಗಬೇಕಿದೆ. ಹಳೆಯ ಕಾಯ್ದೆಗೆ ಈಗ ತಿದ್ದುಪಡಿ ಮಾಡಲಾಗುವುದು. ಜಂಟಿ ಸದನ ಸಮಿತಿ ಎದುರು ಸಹ ಅಧ್ಯಯನಕ್ಕೆ ನೀಡಲಾಗಿತ್ತು.

ಸಿಎಂ: ಖಾಸಗಿ ವೈದ್ಯರಿಗೆ ಕಡಿವಾಣ ಹಾಕುವುದು ಸರಕಾರದ ಉದ್ದೇಶವಲ್ಲ. ಬಡ ಸಾಮಾನ್ಯ ರೋಗಿಗಳ ಹಿತ ಇದರಲ್ಲಿ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಜಂಟಿ ಸದನ ಸಮಿತಿಯಲ್ಲಿ ವೈದ್ಯರ ಸಲಹೆಯನ್ನು ಪಡೆಯಲಾಗಿದೆ. ಬೆಳಗಾವಿ ಅಧಿವೇಶನ ಪ್ರಾರಂಭದಲ್ಲೇ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಅವರಿಗೆ ಕರೆದು ಸಾಕಷ್ಟು ತಿಳಿ ಹೇಳಿದ್ದೇನೆ ಎಂದು ಸಿಎಂ ತಿಳಿಸಿದರು. ಆದರೂ ಸಹ ವೈದ್ಯರು ಮತ್ತೆ ಪ್ರತಿಭಟನೆ ಮುಂದುವರೆಸಿದ್ದಾರೆ. ಅವರನ್ನು ಸರಕಾರ ವಿಶ್ವಾಸಕ್ಕೆ ತೆಗೆದುಕೊಂಡಿದೆ. ಆದರೆ ಅವರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಸಿಎಂ ತಿಳಿಸಿದರು. ಆಸ್ಪತ್ರೆ, ಓಪಿಡಿ ಬಂದ್ ಮಾಡುವುದರಿಂದ ಸಾಮಾಜಿಕ ಜವಾಬ್ದಾರಿಯಿಂದ ಅವರೇ ತಪ್ಪಿಸಿಕೊಂಡಂತಾಗಿದೆ. Assumption & Presumption ಗೆ ಅವಕಾಶ ಕೊಡದೇ ವೈದ್ಯರು ತಮ್ಮ ಕರ್ತವ್ಯಕ್ಕೆ ಹಿಂದಿರುಗಬೇಕು ಎಂದು ಸಿಎಂ ಸದನಕ್ಕೆ ತಿಳಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.