ಉತ್ತಮ ಸಮಾಜಕ್ಕಾಗಿ

ರೈತರಿಂದ ಯಡಿಯೂರಪ್ಪಗೆ ಕಪ್ಪು ಬಾವುಟ ಪ್ರದರ್ಶನ: ಪರಿವರ್ತನಾ ಯಾತ್ರೆ ವೇಳೆ ಘಟನೆ

0

ಬೆಳಗಾವಿ: ಜಿಲ್ಲೆಯ ಖಾನಾಪೂರ ತಾಲೂಕಿನ ಬೀಡಿ ಗ್ರಾಮದಲ್ಲಿ ಸಾಗುತ್ತಿದ್ದ ಮಾಜಿ ಮು.ಮಂ. ಬಿ.ಎಸ್ ಯಡಿಯೂರಪ್ಪ ನೇತೃತ್ವದ ಪರಿವರ್ತನಾ ಯಾತ್ರೆಗೆ ಕರ್ನಾಟಕ ರಾಜ್ಯ ರೈತರ ಸಂಘ ಮತ್ತು ಹಸಿರು ಸೇನೆ ಮುಖಂಡರು ಹಾಗೂ ಸದಸ್ಯರು ಕಪ್ಪು ಬಾವುಟ ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.ಇಂದು ಯಲ್ಲಾಪುರ, ಹಳಿಯಾಳ, ಅಳ್ನಾವರ ಮಾರ್ಗವಾಗಿ ಬೀಡಿ ತಲುಪಿದ ಯಾತ್ರೆಯನ್ನು ತಡೆದ ಸ್ಥಳಿಯ ರೈತರು ಮಹಾದಾಯಿ ಹಾಗೂ ಸಾಲ ಮನ್ನಾ ವಿಚಾರವಾಗಿ ಕೇಂದ್ರ ಸರಕಾರದ ಮನವೊಲಿಸಲು ಯಡಿಯೂರಪ್ಪ ಮತ್ತು ರಾಜ್ಯದ ಸಂಸದರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: