ಉತ್ತಮ ಸಮಾಜಕ್ಕಾಗಿ

ಅಮಾಯಕರನ್ನು ಬಂಧಿಸುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ರಾಜಕುಮಾರ ಟೋಪಣ್ಣವರ ಆರೋಪಿಸಿದ್ದಾರೆ.

0

ಬೆಳಗಾವಿ: ನಗರದಲ್ಲಿ ಕಳೆದ ಎರಡು ವಾರದಲ್ಲಿ ಮೂರು ಗಲಭೆಗಳು ನಡೆದಿವೆ. ಇದಕ್ಕೆ ಕಾರಣ ಉತ್ತರ ಕ್ಷೇತ್ರದ ಶಾಸಕರು ಹಾಗೂ ಅವರ ಬೆಂಬಲಿಗರು. ಆದರೆ ಪೊಲೀಸ್ ಇಲಾಖೆ ಮೇಲೆ ಶಾಸಕರು ಒತ್ತಡ ಹಾಕಿ ಗಲಭೆಗೆ ಕಾರಣರಾಗದ ಅಮಾಯಕರನ್ನು ಬಂಧಿಸುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಬಿಜೆಪಿ ನಗರ ಘಟಕದ ಪ್ರಧಾನಕಾರ್ಯದರ್ಶಿ ರಾಜಕುಮಾರ ಟೋಪಣ್ಣವರ ಆರೋಪಿಸಿದ್ದಾರೆ.
ಸಮಾಜ ಘಾತುಕ ಶಕ್ತಿಗಳನ್ನು ಪೊಲೀಸರು ಬಂಧನ ಮಾಡಿದಾಗ ಅವರನ್ನು ಬಂಧನ ಮಾಡದಂತೆ ಒತ್ತಡ ಹಾಕುವ ಶಾಸಕರು ಅಮಾಯಕರನ್ನು ಬಂಧಿಸುವಂತೆ ಮೌಕಿಕವಾಗಿ ಸೂಚನೆ ನೀಡುತ್ತಿದ್ದಾರೆ. ಗುರುವಾರ ನಡೆದ ಗಲಭೆಯ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದ್ದಾರೆ.
ನಗರದ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯತ್ತಿರುವುದು ಇಲ್ಲಿನ ಜನರ ಹೆಮ್ಮೆಯ ವಿಷಯವಾಗಿದೆ. ಆದರೆ ಇದೇ ಸಂದರ್ಭದಲ್ಲಿ ಉತ್ತರ ಕ್ಷೇತ್ರದ ಶಾಸಕರ ಬೆಂಬಲಿಗರು ಖಡಕಗಲ್ಲಿ, ಬಡಕಲಗಲ್ಲಿ ಗಾಜಿನ ಬಾಟಲ್ ಹಾಗೂ ಒಂದೇ ಗಾತ್ರದ ಕಲ್ಲುಗಳನ್ನು ಸಂಗ್ರಹಿಸಿ ಅಶಾಂತಿ ಕದಡಿಸುವ ಹುನ್ನಾರ ನಡೆಸಿದರು. ಈ ಪ್ರಕರಣದಲ್ಲಿ ಪೊಲೀಸರು ನಿಜವಾದ ಆರೋಪಿಗಳನ್ನು ಬಂಧಿಸುವ ಬದಲು ಶಾಸಕರ ಅಣತೆಗೆ ಮಣಿದು ಅಮಾಯಕರನ್ನು ಬಂಧಿಸಿದ್ದಾರೆ. ಈ ಗಲಭೆಯಲ್ಲಿ ಒಂದೇ ಗಾತ್ರದ ಕಲ್ಲು ಹಾಗೂ ಗಾಜಿನ ಬಾಟಲಿಗಳು ಎಲ್ಲಿಂದ ಬಂದವು. ಎಂಬುದನ್ನು ಪೊಲೀಸರು ಸಾರ್ವಜನಿಕರ ಎದುರು ಸ್ಪಷ್ಟಪಡೆಸಬೇಕು. ಪ್ರತಿ ಬಾರಿ ಗಲಭೆಯಾದ ಸಂದರ್ಭದಲ್ಲಿ ಪ್ರಕರಣವನ್ನು ಮುಚ್ಚಿ ಹಾಕಲು ಉತ್ತರ ಕ್ಷೇತ್ರದ ಶಾಸಕರು ಪೊಲೀಸರ ಮೇಲೆ ಒತ್ತಡ ಹಾಕುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಆದ್ದರಿಂದ ಅಧಿವೇಶನ ನಡೆಯುವ ವೇಳೆಯಲ್ಲಿ ಗಲಭೆಯನ್ನು ಸಿಬಿಐ ತನಿಖೆ ವಹಿಸಿ ಇದರ ಹಿಂದೆ ಇರುವ ಸೂತ್ರದಾರರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಕಳೆದ 10 ವರ್ಷಗಳಿಂದ ಮುಸ್ಲಿಂ ಸಮುದಾಯದವರು ಉತ್ತರ ಕ್ಷೇತ್ರದ ಶಾಸಕರ ದಬ್ಬಾಳಿಕೆ ಹಾಗೂ ವರ್ತನೆಯಿಂದ ಬೇಸತ್ತು ಅವರಿಗೆ ವಿರೋಧವ್ಯಕ್ತಪಡೆಸುತ್ತಿದ್ದಾರೆ. ನಗರದಲ್ಲಿ ಇಂಥ ಕಾನೂನು ಬಾಹಿರ ಚಟುವಟಿಕೆ ನಡೆಸುವುದಲ್ಲದೆ. ಶಾಸಕರು ಗಲಭೆಯನ್ನು ಸೃಷ್ಠಿಸಿ ಹಿಂದು ಮುಸ್ಲಿಂ ಗಲಾಟೆ ಎಂದು ಸಮಾಜಕ್ಕೆ ಬಿಂಬಿಸಿ ವಿರೋಧ ವ್ಯಕ್ತಪಡೆಸುತ್ತಿರುವ ಮುಸ್ಲಿಂ ಸಮುದಾಯದವರು ತಮ್ಮನ್ನು ಬೆಂಬಲಿಸುವಂತೆ ಪರೋಕ್ಷವಾಗಿ ಗಲಭೆ ನಡೆಸುತ್ತಿದ್ದಾರೆ ಇದಕ್ಕೆ ಪೊಲೀಸ್ ಇಲಾಖೆಯ ಅಧಿಕಾರಿಗಳ ಶಾಸಕರ ಸಾಥ್ ನೀಡುತ್ತಿದ್ದಾರೆ. ರಾಜ್ಯ ಸರಕಾರದ ಅಧಿನದಲ್ಲಿರುವ ಪೊಲೀಸ್ ಇಲಾಖೆ, ಸಿಐಡಿ ಮೇಲೆ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸ ಸಾರ್ವಜನಿಕರಿಗಿಲ್ಲ. ಆದ್ದರಿಂದ ಗುರುವಾರ ರಾತ್ರಿ ನಡೆದ ಗಲಭೆಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಟೋಪಣ್ಣವರ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.