ಉತ್ತಮ ಸಮಾಜಕ್ಕಾಗಿ

ವಿಂಟೇಜ್ ಕಾರಲ್ಲಿ ಸಚಿವ ಖಂಡ್ರೆ ಜಾಲಿ ರೈಡ್

0

ಬೆಳಗಾವಿ: 1931 ನೇ ಮಾದರಿಯ ವಿಂಟೇಜ್ ಕಾರಿನಲ್ಲಿ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಸುವರ್ಣಸೌಧಕ್ಕೆ ಆಗಮಿಸಿ ಗಮನ ಸೆಳೆದರು. ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರ ಮಾಲಿಕತ್ವಕ್ಕೆ ಸೇರಿದ ಕಾರಿನಲ್ಲಿ ನಗರದ ಸರ್ಕ್ಯೂಟ್ ಹೌಸನಿಂದ ಕಲಾಪ ವೀಕ್ಷಣೆಗೆ ಆಗಮಿಸಿದರು.

 

ಸರ್ಕ್ಯೂಟ್ ಹೌಸನಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಬಂದಿದ್ದ ಖಂಡ್ರೆ ಅಲ್ಲಿಯೇ ಹಾಜರಿದ್ದ ಎರಡು ವಿಂಟೇಜ್ ಕಾರುಗಳ ಪೈಕಿ ಹಳದಿ ಕಾರಿನಲ್ಲಿ ಶಾಸಕ ಗಣೇಶ್ ಹುಕ್ಕೇರಿ ಅವರೊಂದಿಗೆ ಆಗಮಿಸಿದರು. ಆ ನಂತರ ಇನೋವಾದಲ್ಲಿ ಆಗಮಿಸಿದ ಬಿಜೆಪಿ ಶಾಸಕ, ಮಾಜಿ ಸಚಿವ ಉಮೇಶ ಕತ್ತಿ ಹಳದಿವಕಾರಿನ ಬಗ್ಗೆ ಪ್ರೀತಿ ವ್ಯಕ್ತಪಡಿಸಿ ಮಾಧ್ಯಮದವರೊಂದಿಗೆ ಹಾಸ್ಯ ಚಟಾಕೆಗೆ ಇಳಿದರು. ಬರಿರ್ರಿ ಬರಿರ್ರೀ ಪ್ರಕಾಶ ಹುಕ್ಕೇರಿ ಮೆರೆಯುತ್ತಿದ್ದಾರೆ ಎಂದು ಲಘು ಚಟಾಕೆ ಹಾರಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.