ಉತ್ತಮ ಸಮಾಜಕ್ಕಾಗಿ

“ಬೆಲ್ಕಾನ-2017” ಪ್ರದರ್ಶನಕ್ಕೆ ಚಾಲನೆ

0

ಬೆಳಗಾವಿ:ಕ್ರೆಡೈ ಸಂಸ್ಥೆಯಡಿ ನೋಂದಾಯಿತಗೊಂಡ ಕಟ್ಟಡ ನಿರ್ಮಾತರಿಗೆ ಸರಕಾರದಿಂದ ಎಲ್ಲ ಸೌಲಭ್ಯ, ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡಲಾಗುವುದೆಂದು ನಗರಾಭಿವೃದ್ದಿ ಸಚಿವ ರೋಷನ ಬೇಗ ಅವರು ಇಂದಿಲ್ಲಿ ಹೇಳಿದರು.
ಬೆಳಗಾವಿಯ ಮಿಲೆನಿಯಂ ಗಾರ್ಡನದಲ್ಲಿ ಬೆಳಗಾವಿ ಕ್ರೆಡೈ ವತಿಯಿಂದ ಹಾಗೂ ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಬಾಲಾಜಿ ಕಾನ್ಕ್ರೆಟ್ಸ ಮತ್ತು ತಿರುಪತಿ ಬಾಲಾಜಿ ಮಾರ್ಬಲ್ಸ್ ಇವರ ಸಹ ಪ್ರಾಯೋಜಿಕತ್ವದಲ್ಲಿ ಆಯೋಜಿಸಲಾದ ಐದು ದಿನಗಳ “ಬೆಲ್ಕಾನ-2017” ಪ್ರದರ್ಶನವನ್ನು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ ಸಚಿವರು, ಕ್ರೆಡೈ ಸಂಸ್ಥೆಯ ವತಿಯಿಂದ ನಿರ್ಮಿಸಲ್ಪಟ್ಟ ಕಟ್ಟಡಗಳು ಗುಣಮಟ್ಟ ಹಾಗೂ ವಿಶ್ವಾಸರ್ಹತೆ ಹೊಂದಿರುತ್ತವೆ. ಸರಕಾರದ ಎಲ್ಲ ಮಾನ ದಂಡನೆಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡುವ ಮೂಲಕ ಕಟ್ಟಡಗಳನ್ನು ವಸತಿ ಸಮುಚ್ಛಯಗಳನ್ನು ನಿರ್ಮಿಸಲಾಗಿರುತ್ತದೆ. ಹಾಗಾಗಿ ಕ್ರೆಡೈ ಮಾನ್ಯತೆ ಪಡೆದ ವಸತಿ ಸಮುಚ್ಛಗಳನ್ನು ಖರೀದಿಸಲು ಗ್ರಾಹಕರು ಮುಂದಾಗಬೇಕೆಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಕ್ರೆಡೈ ಬೆಳಗಾವಿ ಅಧ್ಯಕ್ಷ ಕೆಯಸ್ ನೂರಾಣಿ ಅತಿಥಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕ್ರೆಡೈ ಕಾರ್ಯದರ್ಶಿ ಹರ್ಷದ ಕಲಘಟಗಿ, ಮದನಕುಮಾರ ಭೈರಪ್ಪನ್ನವರ, ವಿಜಯ ಪಾಟೀಲ, ವಿಜಯ ಭಂಢಾರಿ, ಅಭೀಜಿತ ಶಿವಯೋಗಿಮಠ, ಶ್ರೀಪಾಲ ಖೇಮಲಾಪೂರೆ, ದೀಪಕ ಗೊಜಗೆಕರ, ಮಾಜಿ ಮಹಾಪೌರ ವಿಜಯ ಮೊರೆ, ವಿಕಾಸ ಕಲಘಟಗಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಈ ಪ್ರದರ್ಶನವನ್ನು ಈ ಪ್ರದರ್ಶನದಲ್ಲಿ ಸುಮಾರು 20 ಕ್ಕೂ ಹೆಚ್ಚು ಬಿಲ್ಡ್‍ರಗಳು ಮತ್ತು ಡೆಪಲಪ್‍ರ್ಸ್‍ಗಳು ಭಾಗವಹಿಸಿದ್ದು, ಇವರು ತಮ್ಮ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅದಲ್ಲದೆ ಈ ಪ್ರದರ್ಶನದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಮತ್ತು ಇತ್ತಿಚಿನ ನೂತನ ತಂತ್ರಜ್ಞಾನದಿಂದ ಕೂಡಿದ ವಸತಿ ಸಮುಚ್ಛಯಗಳ ಮಾಹಿತಿ ನೀಡಲಾಗುವುದು. ಅದಲ್ಲದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಸತಿ ಖರೀದಿ ಮಾಡುವ ಗ್ರಾಹಕರಿಗೆ ವಿಶೇಷ ಹಣಕಾಸಿನ ನೆರವು ನೀಡುವ ಯೋಜನೆಯ ಬಗ್ಗೆ ಮಾಹಿತಿ ನೀಡಲಿದೆ.
“ಬೆಲ್ಕಾನ್-2017” ಪ್ರದರ್ಶನದಲ್ಲಿ ಸುಮಾರು 100 ಕ್ಕೂ ಹೆಚ್ಚು ಮಳಿಗೆಗಳು ಭಾಗವಹಿಸಲಿದ್ದು, ಇಲ್ಲಿ ಮನೆ ಖರೀದಿಸುವವರು, ಬಿಲ್ಡರ್, ಎಂಜಿನಿಯರ ಮತ್ತು ಮನೆಗಳ ಆಂತರಿಕ ವಿನ್ಯಾಸ, ನವೀಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಮಾಹಿತಿ ಲಭ್ಯವಾಗಲಿದೆ.ಆಸ್ತಿ ಖರೀದಿದಾರರ ಎಲ್ಲ ಅಗತ್ಯಗಳನ್ನು ಪೂರೈಸುವ ಮತ್ತು ವೃತ್ತಿಪರರನ್ನು ಒಂದೇ ವೇದಿಕೆಯಡಿ ತರುವ ಹಾಗೂ ಎಲ್ಲ ಶೇಣಿಯ ಉತ್ತಮ ಗುಣಮಟ್ಟದ ಉತ್ಪಾದನೆಗಳು, ಪರಿಪೂರ್ಣವಾದ ಕೇಂದ್ರಿಕೃತ ಉತ್ಪನ್ನಗಳ ಮತ್ತು ಸೇವೆಗಳ ಬೇಡಿಕೆ-ಪೂರೈಕೆ, ಆಧುನಿಕ ತಂತ್ರಜ್ಞಾನದೊಂದಿಗೆ ವಿನ್ಯಾಸ ರೂಪಿಸುವುದು ಸೇರಿದಂತೆ ಕಟ್ಟಡ ನಿರ್ಮಾಣ, ವಸತಿ ಸಮುಚ್ಛಯಗಳ ಅಗತ್ಯ ಬೇಡಿಕೆಗಳನ್ನು ಪೂರೈಸುವ ಮತ್ತು ಮಾಹಿತಿ ಒದಗಿಸುವ ಪ್ರದರ್ಶನ ಇದಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.