ಉತ್ತಮ ಸಮಾಜಕ್ಕಾಗಿ

ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮನವರ ಗದ್ದುಗೆ ಅಭಿವೃದ್ದಿ ಸುವರ್ಣ ಸೌಧದ ಪ್ರತಿಭಟನಾ ಸ್ಥಳದಲ್ಲಿ ಧರಣಿ ನಡೆಸಿದರು.

0

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿರುವ 12 ನೇ ಶತಮಾನದ ಮಹಾನ್ ಬಸವ ಶರಣ ಸಮಗಾರ ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮನವರ ಗದ್ದುಗೆಯನ್ನು ಅಭಿವೃದ್ದಿ ಪಡಿಸುವಂತೆ ಆಗ್ರಹಿಸಿ ಬಸವಾದಿ ಶರಣ ಸಮಗಾರ ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮನವರ ಗದ್ದುಗೆ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳು ಶುಕ್ರವಾರದಂದು ಸುವರ್ಣ ಸೌಧದ ಪ್ರತಿಭಟನಾ ಸ್ಥಳದಲ್ಲಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಎಸ್.ದರ್ಗೆ ಅವರು, 12 ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ವಿಶ್ವದ ಅಪರೂಪದ ಮತ್ತು ರೋಮಾಂಚನಕಾರಿ ಕ್ರಾಂತಿಯಲ್ಲಿ ಭಾಗವಹಿಸಿ ವಿಶ್ವಮಾಣ್ಯ ವಚನ ಸಾಹಿತ್ಯವನ್ನು ಕಟ್ಟಿಕೊಟ್ಟಿರುವ ಮತ್ತು ಆ ವಚನ ಸಾಹಿತ್ಯದ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೆ ಬಲಿಕೊಟ್ಟ ಅನೇಕ ಶರಣರ ಸಮಾಧಿಗಳು ಈ ಬೆಳಗಾವಿಯ ಪುಣ್ಯಭೂಮಿಯಲಿವೆ. ಆ ಮಹಾನ್ ಶರಣರ ಸಮಾಧಿಗಳು ಮಹಾಮನೆಗಳಾಗಿ ಕಂಗೋಳಿಸಬೇಕಿತ್ತು. ಆದರೆ, ಆ ಸಮಾಧಿಗಳು ತೀರ ಶಿಥಿಲಾವಸ್ತೆಯಲ್ಲಿರುವದು ಕಳವಳಕಾರಿ ಎಂದರು.
ಬಸವಾದಿ ಶರಣರ ಆ ಮಹಾನ್ ಸಂಕೇತಗಳನ್ನು ಅಭಿವೃದ್ದಿ ಪಡಿಸಲು ಸಂಕಲ್ಪ ಮಾಡಲಾಗಿದೆ. ಬಸವ ಧರ್ಮಕ್ಕೆ ಮೊದಲ ಬಲಿದಾನ ನೀಡಿದ ಸಮಗಾರ ಹರಳಯ್ಯನವರು ಧರ್ಮಪತ್ನಿ ಕಲ್ಯಾಣಮ್ಮನವರ ಸಮಾಧಿ ಸ್ಥಳದ ಅಭಿವೃದ್ದಿಯ ನಂತರ ಹಂತ ಹಂತವಾಗಿ ಇನ್ನುಳಿದ ಶರಣರ ಐಕ್ಯ ಸ್ಥಳಗಳ ಅಭಿವೃದ್ದಿಗೆ ಅವಿರತವಾಗಿ ಶ್ರಮಿಸಲಾಗುವದು ಎಂದರು.
ಕಲ್ಯಾಣಮ್ಮನವರ ಸಮಾಧೀ ಸ್ಥಳದ ಅಭಿವೃದ್ದಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 30 ಲಕ್ಷ ರೂ. ಅನುದಾನ ನೀಡುವಂತೆ ಸಮಾಜ ಕಲ್ಯಾಣ ಸಚಿವ ಎಚ್. ಅಂಜನೇಯ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಸಚಿವ ಅಂಜನೇಯ ಅವರು, ತಕ್ಷಣ ಅನುದಾನ ಮಂಜೂರು ಮಾಡಿರುವದಾಗಿ ಪ್ರಕಟಿಸಿದರು. ತಕ್ಷಣ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಮಿತಿಯ ಅಧ್ಯಕ್ಷ ಬಸವಣ್ಣೆಪ್ಪ ಪರಸಪ್ಪಗೋಳ, ಗ್ರಾಮ ಪಂಚಾಯತಿಯ ಅಧ್ಯಕ್ಷ ಮುನ್ನಾ ಬಾಗವಾನ, ಗ್ರಾಮ ಪಂಚಾಯತಿಯ ಸದಸ್ಯ ಅಡಿವೆಪ್ಪ ಮಾಳಗಿ, ಯಲ್ಲಪ್ಪ ತಳವಾರ ಸೇರಿದಂತೆ ಅನೇಖ ಪ್ರಮುಖರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.