ಉತ್ತಮ ಸಮಾಜಕ್ಕಾಗಿ

ಲ್ಯಾಪಟಾಪ್ ಖರೀದಿಯಲ್ಲಿ ಅವ್ಯವಹಾರ: ಕಮಿಷ್ನರ್ ಅಜಯ ನಾಗಭೂಷಣ ಉಲ್ಲೇಖಿಸಿ ಮಲ್ಕಾಪುರೆ ಆರೋಪ

0

ಬೆಳಗಾವಿ: ನಿಜವಾದ ದರಕ್ಕಿಂತ ಹೆಚ್ಚಿನ 10 ಸಾವಿರ ರೂಪಾಯಿಗೆ ಲ್ಯಾಪಟಾಪ್ ಖರೀದಿ ಮಾಡಿದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆಯ ಅವ್ಯವಹಾರದ ಆರೋಪ ಇಂದು ಪರಿಷತ್ ನಲ್ಲಿ ಕೇಳಿಬಂತು. ಅವ್ಯವಹಾರ ಮುಚ್ಚಿಕೊಳ್ಳಲು ಆಯುಕ್ತರು ಕಾಲೇಜು ಶಿಕ್ಷಣ ಇಲಾಖೆ ಅಜಯ ನಾಗಭೂಷಣ ಅವರನ್ನು ಇಲಾಖೆಯಿಂದ ವರ್ಗಾವಣೆ ಸಹ ಮಾಡಿದ್ದಾರೆ ಎಂದು ರಘುನಾಥ ಮಲ್ಕಾಪುರೆ ಸದನದಲ್ಲಿ ಆರೋಪಿಸಿದರು.
ಪರಿಷತ್ ಪ್ರಾರಂಭವಾಗುತ್ತಿದ್ದಂತೆ ಸಚಿವ ರಾಯರೆಡ್ಡಿ ಉತ್ತರಿಸಿ ವಿಷಯ ತಿಳಿದುಕೊಳ್ಳದೇ ಕೆಲವರು ಪತ್ರಿಕಾ ಹೇಳಿಕೆ ಕೊಡುತ್ತಾರೆ ಎಂದರು.

ಎಸ್ ಸಿ/ ಎಸ್ ಟಿ ವಿದ್ಯಾರ್ಥಿಗಳಿಗೆ ಕೊಡಬೇಕಾದ ಲ್ಯಾಪಟಾಪ್ ವಿತರಣೆಯ ಟೆಂಡರ್ ವಿಳಂಬವಾಯಿತು. ಏಸರ್ (acer) ಕಂಪನಿಯವರು ಲ್ಯಾಪಟಾಪ್ ವಿತರಿಸಿದ್ದಾರೆ. ಹೊರಗಡೆ 20 ಸಾವಿರ ಇದ್ದರೂ ಸರಕಾರಕ್ಕೆ 14 ಸಾವಿರಕ್ಕೆ ಲ್ಯಾಪಟಾಪ್ ಸಿಕ್ಕಿದ್ದು, ಸರಕಾರಕ್ಕೆ ಹಣ ಉಳಿತಾಯವಾಗಿದೆ. ಯಾವುದೇ ಅವ್ಯವಹಾರವಾಗಿಲ್ಲ ಎಂದು ಉತ್ತರಿಸಿದರು. ಪ್ರಸಕ್ತ ಸಾಲಿನ ಲ್ಯಾಪಟಾಪ್ ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ಪದವಿ ಮೊದಲ ವರ್ಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕೊಡಲು ಯೋಚಿಸಲಾಗಿದೆ. ಮತ್ತೆ 6 ತಿಂಗಳು ವಿಳಂಬವಾಗಿದೆ. ಇಲಾಖೆಯ ಹೊಸ ಕಮಿಷ್ನರ್ ಟೆಂಡರ್ ಕರೆದು Lowest Bidding ನವರಿಗೆ ಲ್ಯಾಪಟಾಪ್ ವಿತರಣಾ ಆದೇಶ ಕೊಡಲಾಗುವುದು ಎಂದರು. ಸರಕಾರ ಯಾರಿಗೂ 10 ಸಾವಿರ ಹೆಚ್ಚಿಗೆ ಸಂದಾಯ ಮಾಡಿಲ್ಲ ಎಂದು ಸಚಿವ ರಾಯರೆಡ್ಡಿ ಅಸಮಧಾನದಿಂದ ಉತ್ತರಿಸಿದರು.

ಪತ್ರಿಕೆಯಲ್ಲಿ ಬರೆದಿದ್ದನ್ನು ಗಮನಿಸಿ ಆರೋಪಿಸಬೇಡಿ ಎಂದು ರಾಯರೆಡ್ಡಿ ಸಲಹೆ ನೀಡಿದರು. ಗುಣಮಟ್ಟದ ಲ್ಯಾಪಟಾಪ್ ಒದಗಿಸಲು ಸರಕಾರ ಬದ್ಧವಾಗಿದೆ ಎಂದರು. ಕಲ್ಲು ಹಾಕಬೇಡಿ ಎಂದು ಸಚಿವರಿ ಹೇಳಿದ್ದಕ್ಕೆ ಅರುಣ ಶಹಾಪುರ ಮತ್ತು ಮಲ್ಕಾಪುರೆ ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಅಜಯ ನಾಗಭೂಷಣ ಅವರು ಲ್ಯಾಪಟಾಪ್ ಅಕ್ರಮಕ್ಕೆ ಸಹಕರಿಸದ್ದಕ್ಕೆ ಅವರಿಗೆ ಮಾನಸಿಕ ಕಿರುಕುಳ ನೀಡಲಾಯಿತು ಎಂಬುವುದನ್ನು ಉಲ್ಲೇಖಿಸಿ ಮಲ್ಕಾಪುರೆ ಸದನದ ಗಮನ ಸೆಳೆದರು.

Leave A Reply

 Click this button or press Ctrl+G to toggle between Kannada and English

Your email address will not be published.