ಉತ್ತಮ ಸಮಾಜಕ್ಕಾಗಿ

‘ರಂಗ ಸಂಪದ’ ಕಲಾವಿದರ ತವರುಮನೆ

0

ಬೆಳಗಾವಿ – ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದರದಲ್ಲಿ ನಿನ್ನೆ ಸಾಯಂಕಾಲ ನಗರದ ರಂಗ ಸಂಪದದವರಿಂದ ಬೆಂಗಳೂರಿನ ಸಮುದಾಯ ತಂಡದವರ ಕೆ. ವಾಯ್ ನಾರಾಯಣಸ್ವಾಮಿ ರಚಿಸಿದ “ಪಂಪ ಭಾರತ” ನಾಟಕ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಭಾರತ ಸರ್ಕಾರದ ನಾಗಪುರಿನ ಕಲ್ಚರಲ್ ಸೆಂಟರ್, ದಕ್ಷೀಣ ಕೇಂದ್ರದ ಸದಸ್ಯರಾಗಿರುವ ಹಾಗೂ ಬೆಂಗಳೂರಿನ ಸಮುದಾಯ ತಂಡದ ಮಾಜಿ ಕಾರ್ಯದರ್ಶಿಗಳಾಗಿರುವ ರವೀಂದ್ರ ಸಿರಿವಾರ ಅವರು ಮಾತನಾಡುತ್ತ ಬೆಳಗಾವಿ ರಂಗ ಸಂಪದವೆಂದರೆ ನನಗೇನೂ ಹೊಸದಲ್ಲ ಹಲವಾರು ನಾಟಕಗಳನ್ನು ಇಲ್ಲಿ ಆಡಿದ್ದೇವೆ. ಕಲಾವಿದರನ್ನು ತುಂಬು ಮನಸ್ಸಿನಿಂದ ಪ್ರೋತ್ಸಾಹಿಸುವ ಗುಣವನ್ನಿವರು ಹೊಂದಿದ್ದಾರೆ. ಒಟ್ಟಿನಲ್ಲಿ ರಂಗಸಂಪದವೆಂದರೆ ಕಲಾವಿದರ ತವರುಮನೆ ಇದ್ದಂತೆ ಎಂದು ಅಭಿಮನದ ನುಡಿಗಳನ್ನಾಡಿದರು.
ಈ ನಾಟಕದ ಪ್ರತಿಯೊಂದು ಪಾತ್ರವೂ ಜೀವತುಂಬಿ ಪ್ರೇಕ್ಷಕರನ್ನು ಒಂದೂವರೆ ಗಂಟೆಗಳ ಕಾಲ ಮೈಮರೆಸಿದ್ದವು. ಸರಳ ಭಾಷೆ, ಪರಿಣಾಮಕಾರಿ ಅಭಿನಯಯದಿಂದ ಜನರ ಮನಸ್ಸನ್ನು ಹಿಡದಿಡುವಲ್ಲಿ ಈ ನಾಟಕ ಯಶಸ್ವಿಯಾಯಿತೆಂದು ಹೇಳಬಹುದು ಈ ನಾಟಕ ಪ್ರಮೋದ ಶಿಗ್ಗಾಂವ ಅವರ ನಿರ್ದೇಶನ, ಗಜಾನನ ನಾಯಕರ ಸಂಗೀತ, ರಾಮಕೃಷ್ಣ ಬೆಳ್ಳತ್ತೂರರವರ ಪ್ರಸಾದನ ಮಹಾದೇವ ಅವರ ನೆಳಲು ಬೆಳಕಿನಲ್ಲಿ ತುಂಬ ಸುಂದವಾಗಿ ಮೂಡಿ ಬಂತು
ರಂಗ ಸಂಪದದ ಅಧ್ಯಕ್ಷ ಡಾ| ಎ. ಎಲ್. ಕುಲಕರ್ಣಿಯವರು ಮಾತನಾಡಿ ಹೊಸ ಪದಾಧಿಕಾರಿಗಳಾದ ನಂತರದ ಮೊದಲ ನಾಟಕ ಇದ್ದಾಗಿದ್ದು ನಾವು ವರ್ಷವಿಡಿ 6 ನಾಟಕಗಳನ್ನು ಕೊಡುವವರಿದ್ದು, ಇದೇ ದಿ. 25 ರಂದು ರಂಗಸಂಪದ ತಂಡದವರಿಂದಲೇ ಶಿರೀಷ ಜೋಶಿಯವರು ರಚಿಸಿದ ಹಾಗೂ ಅವರ ನಿರ್ದೇಶನದಲ್ಲಿಯ ‘ಗತಿ’ ನಾಟಕವನ್ನು ಕೊಡುವವರಿದ್ದೇವೆ. ಸಮಯಕ್ಕೆ ಸರಿಯಾಗಿ ನಾವು ನಾಟಕವನ್ನು ಪ್ರಾರಂಭಿಸುತ್ತೇವೆಯಾದ್ದರಿಂದ ಪ್ರೇಕ್ಷಕರು ಸರಿಯಾದ ಸಮಯಕ್ಕೆ ಬಂದು ಸಹಕರಿಸಬೇಕೆಂದು ವಿನಂತಿಸಿಕೊಂಡರು.
ರಂಗಸಂಪದ ಉಪಾಧ್ಯಕ್ಷರಾದ ಗುರುನಾಥ ಕುಲಕರ್ಣಿ, ಕಾರ್ಯದರ್ಶಿ ರಮೇಶ ಅನಿಗೋಳ, ಪೋಷಕರಾದ ಶಿವಕುಮರ ಸಂಬರಗಿಮಠ, ಪ್ರಾಯೋಜಕರಾದ ಉದ್ಯಮಿಗಳಾದ ಚಿದಾನಂದ ವಾಳಕೆ, ಶ್ರೀ ವಿದ್ಯಾಮಂದಿರ ಟ್ರಸ್ಟೀಗಳಾದ ಸಿದ್ಧಾರೂಠ ಸಂಗೊಳ್ಳಿ ಉಪಸ್ಥಿತರಿದ್ದರು. ಶ್ರೀಮತಿ ಪದ್ಮಾ ಕುಲಕರ್ಣಿ ನಿರೂಪಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.