ಉತ್ತಮ ಸಮಾಜಕ್ಕಾಗಿ

ಸುವರ್ಣ ಸೌಧ ಉತ್ತರ ಕರ್ನಾಟಕ ಜನತೆಯ ಆಶೊತ್ತರಗಳನ್ನು ಈಡೆರಿಸುವ ಕೇಂದ್ರವಾಗಬೇಕಾಗಿತ್ತು ಶಶಿಕಾಂತ ಸಿದ್ನಾಳ

0

ಬೆಳಗಾವಿ: ನಗರದ ಹೊರ ವಲಯದಲ್ಲಿರುವ ಸುವರ್ಣ ಸೌಧ ಉತ್ತರ ಕರ್ನಾಟಕ ಜನತೆಯ ಆಶೊತ್ತರಗಳನ್ನು ಈಡೆರಿಸುವ ಕೇಂದ್ರವಾಗಬೇಕಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಸುವರ್ಣ ಸೌಧವನ್ನು ಸದ್ಬಳಕೆ ಮಾಡಿಕೊಳ್ಳದೇ ಹಾಳು ಗೆಡವುತ್ತಿದೆ ಎಂದು ಬಿ.ಜೆ.ಪಿ. ಯುವ ಮುಖಂಡ ಶಶಿಕಾಂತ ಸಿದ್ನಾಳ ಆರೋಪಿಸಿದ್ದಾರೆ. ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉತ್ತರ ಕರ್ನಾಟಕ ಜನತೆಯ ಆಶೊತ್ತರಗಳನ್ನು ನೇರವೇರಿಸಲೆಂದು ಸಾರ್ವಜನಿಕರ ತೆರಿಗೆ ಹಣದಲ್ಲಿ ಸುಮಾರು 450 ಕೋಟಿ ರೂ ವೆಚ್ಚದಲ್ಲಿ ಇದು ನಿರ್ಮಾಣವಾಗಿದೆ ಆದರೆ ಇದು ಸದುಪಯೋಗವಾಗುತ್ತಿಲ್ಲ ಎಂದು ಆರೋಪಿಸಿದರು.

ಸೌಧದ ವಾರ್ಷಿಕ ನಿರ್ವಹಣಾ ಮೊತ್ತ ಈಗ 6 ಕೋಟಿಗೆ ಏರಿಕೆಯಾಗಿದ್ದು ಇದು ಜನರ ಮೇಲೆ ಹೊರೆ ಎಂದು ತಿಳಿಸಿದರು. ಇಲ್ಲಿ ಬೇರೆ ಬೇರೆ ಇಲಾಖೆಗಳ ಕಾರ್ಯಾಲಯ ಗಳನ್ನು ಸ್ಥಾಪಿಸಿ ಇದರ ಸದುಪಯೋಗಕ್ಕೆ ಗಮನ ಹರಿಸಬೇಕೆಂದರು. ಉತ್ತರ ಕರ್ನಾಟಕದಿಂದ ಬೆಂಗಳೂರು ತುಂಬ ದೂರವಾಗಿದ್ದು ಶಾಸಕ, ಸಚಿವರ ಹತ್ತಿರ ಕೆಲಸಗಳಿದ್ದರೆ ಅಲ್ಲಿಗೆ ತೆರಳಲು ಸಾಕಷ್ಟು ಖರ್ಚು ವೆಚ್ಚ ಮಾಡಬೇಕಾಗುತ್ತದೆ. ಈ ಕಷ್ಟ ತಪ್ಪಬೇಕು ಎಂದರ . ಕಾಂಗ್ರೆಸ್ ನವರು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಜಾತಿರಾಜಕಾರಣ ಮಾಡುತ್ತಿದ್ದಾರೆ ಇದರಿಂದ ರಾಜ್ಯದ ಅಭಿವೃದ್ಧಿ 50 ವರ್ಷ ಹಿಂದಕ್ಕೆ ಸರಿದಿದೆ ಎಂದು ಅವರು ಆರೋಪಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.