ಉತ್ತಮ ಸಮಾಜಕ್ಕಾಗಿ

ಮುಚ್ಚಿಟ್ಟ ಪ್ರೀತಿಯನು ಬಚ್ಚಿಟ್ಟುಕೊಂಡು ನಾಲ್ಕು ಕೃತಿಗಳ ಲೋಕಾರ್ಪಣೆ

0

ಜಯಶ್ರಿ ಅಬ್ಬಿಗೇರಿ ಕೃತಿ ಬಿಡುಗಡೆ ಸಮಾರಂಭದಲ್ಲಿ ಡಾ. ಕಾಟ್ಕರ ಅಭಿಪ್ರಾಯ
ಓದುಗರು ಕಡಿಮೆಯಾಗುತ್ತಿದ್ದಾರೆಂಬ ಕೊರಗು ಬೇಡ
ಬೆಳಗಾವಿ: ಕನ್ನಡ ಓದುಗರು ಕಡಿಮೆಯಾಗುತ್ತಿದ್ದಾರೆಂಬ ಕೊರಗು ಬೇಡ. ಸಾಹಿತ್ಯಕ್ಕೆಂದೂ ಸಾವಿಲ್ಲ. ಕಳೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಂದೂವರೆ ಕೋಟಿ ರೂಪಾಯಿಗಳ ಪುಸ್ತಕಗಳು ಮಾರಟವಾಗಿರುವುದೇ ಇದಕ್ಕೆ ಸಾಕ್ಷಿ. ಓದುಗರಿಲ್ಲದೇ ಪುಸ್ತಕಗಳು ಮಾರಾಟವಾಗಲು ಸಾಧ್ಯವೆ? ಎಂದು ಹಿರಿಯ ಪತ್ರಕರ್ತ, ಕವಿ ಸರಜು ಕಾಟ್ಕರ್ ಇಂದಿಲ್ಲಿ ಪ್ರಶ್ನಿಸಿದರು.

ನಗರದ ಕನ್ನಡ ಸಾಹಿತ್ಯ ಭವನÀದಲ್ಲಿ ರವಿವಾರ  ಲೋಕವಿದ್ಯಾ ಪ್ರಕಾಶನ ,ಸಂಕೇಶ್ವರ ಆಶ್ರಯದಲ್ಲಿ ,ಲೇಖಕಿ ಜಯಶ್ರೀ ಅಬ್ಬಿಗೇರಿಯವರ ಹೊಡೆದ ಕಲ್ಲುಗಳಿಂದಲೇ ಕೋಟೆ ಕಟ್ಟಿಕೊಳ್ಳಿ, ಬದುಕೇ ವಿಸ್ಮಯ!, ಮನಃಶಾಂತಿಗೆ ಇಲ್ಲಿದೆ ರಾಜಮಾರ್ಗ ಹಾಗೂ ಮುಚ್ಚಿಟ್ಟ ಪ್ರೀತಿಯನು ಬಚ್ಚಿಟ್ಟುಕೊಂಡು ನಾಲ್ಕು ಕೃತಿಗಳ ಲೋಕಾರ್ಪಣೆ ಮಾಡಿದ ಡಾ ಕಾಟ್ಕರ್ ಮೇಲಿನಂತೆ ಅಭಿಪ್ರಾಯ ಪಟ್ಟರು.
ಲೇಖಕಿ ಜಯಶ್ರೀಯವರ ಬರವಣಿಗೆ ಅಪರೂಪವಾದದ್ದು. ಓದಿಸಿಕೊಂಡು ಹೋಗುವ ಶೈಲಿ ಇವರದಾಗಿದ್ದು ಪ್ರತಿದಿನವೂ ಒಂದೂಂದು ಪತ್ರಿಕೆಯಲ್ಲಿ ಇವರ ಲೇಖನಗಳು ಪ್ರಕಟಗೊಳ್ಳತ್ತಲೇ ಇರುತ್ತವೆ. ಅತಿವೇಗದಲ್ಲಿ ಲೇಖನ ಬರೆಯುವ ಕರ್ನಾಟಕದ ಏಕೈಕ ಲೇಖಕಿ ಎಂದರೆ ತಪ್ಪಾಗಲಾರದು. ಅಲ್ಲದೇ ಆಳವಾದ ಇಂಗ್ಲೀಷ ಅಭ್ಯಾಸ ಮಾಡಿರುವದು ಇವರ ಬರªಣಿಗೆಯಲ್ಲಿ ಎದ್ದು ಕಾಣುತ್ತದೆ. ಇಂದಿನ ಜಾಲತಾಣಗಳಿಂದಾಗಿ ದೇಶಹೊರದೇಶದ ಅಭಿಮಾನಿಗಳನ್ನೂ ಇವರು ಹೊಂದಿದವರಾಗಿದ್ದಾರೆ ಎಂದು ಹೇಳಿದರು.
ರವಿ ಬೆಳಗೆರೆಯವರ ಪ್ರಭಾವವಿರುವುದು ಲೇಖಕಿ ಜಯಶ್ರೀ ಅಬ್ಬಿಗೇರಿಯವರಲ್ಲಿ ಕಂಡುಬಂದರೂ ಇವರ ಬರವಣಿಗೆಯಲ್ಲಿ ಸ್ವಂತಿಕೆಯನ್ನು ಕಂಡುಕೊಂಡಿರುವುದು. ವಿಶೇಷ. ಇಂಥ ಅಪರೂಪದ ಬರಹಗಾರ್ತಿ ಬೆಳಗಾವಿ ಜಿಲ್ಲೆಯವರೆಂಬುದು ಅಭಿಮಾನದ ಸಂಗತಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಾನಪದ ವಿದ್ವಾಂಸ ಡಾ.ಬಸವರಾಜ ಜಗಜಂಪಿ ಅಧ್ಯಕ್ಷೀಯ ನುಡಿಗಳನ್ನಾಡುತ್ತ ಇಂಗೀಷ ಪ್ರಾಧ್ಯಾಪಕರಾಗಿ ಕನ್ನಡ ಸಾಹಿತ್ಯ ಕೊಡುಗೆ ಕೊಟ್ಟವರಲ್ಲಿ ಡಾ ವಿ.ಕೆ. ಗೋಕಾಕ, ಡಾ. ಚಂಪಾ, ಡಾ. ಗಿರಡ್ಡಿ ಗೋವಿಂದರಾಜ್ ಹೀಗೆ ದೊಡ್ಡ ಪರಂಪರೆಯೇ ಇದೆ. ಈಗ ಅದೇ ಸಾಲಿನಲ್ಲಿ ಇಂಗ್ಲೀಷ ಪ್ರಾಧ್ಯಾಪಕಿ ಜಯಶ್ರೀ ಅಬ್ಬಿಗೇರಿ ಅವರು ಆಶಾಕಿರಣವಾಗಿ ನಮ್ಮ ಮಧ್ಯೆ ಮೂಡಿದ್ದಾರೆ ಎಂದು ಹೇಳಿದರು

ಕೃತಿಗಳನ್ನು ಪರಿಚಯಿಸಿದ ಡಾ. ವಾಯ್. ಎಂ. ಯಾಕೊಳ್ಳಿ ಹಾಗೂ ಡಾ. ಗುರುದೇವಿ ಹುಲೆಪ್ಪನವರಮಠ ಜಯಶ್ರೀ ಅಬ್ಬಿಗೇರಿಯವರ ಬರವಣಿಗೆ ಅಪರೂಪವಾದದ್ದು. ಪುಸ್ತಕ ಶಿರ್ಷಿಕೆ ಕೊಡುವುದು ಒಂದು ಕಲೆ ಅದು ಜಯಶ್ರೀಯವರಿಗೆ ಸಿದ್ದಿಸಿದೆ. ಎಲ್ಲರೂ ನಕ್ಕು ಹಗುರಾಗಿ ಎಂದು ಹೇಳಿದರೆ ಲೇಖಕಿ ಅತ್ತು ಹಗುರಾಗಿ ಎಂದು ಹೇಳುತ್ತಾರೆ. ಸಹನೆ ಎಂಬ ಕವಚವನ್ನು ಧರಿಸಿದರೆ ಜೀವನ ಸುಖಮಯ ಎಂಬ ಮಾತನ್ನು ಹೇಳುತ್ತಾರೆ. ಇವರ ಕೃತಿಗಳು ಸಂಗ್ರಾಹ್ಯ ಯೋಗ್ಯವಾದ ಕೃತಿಗಳೆಂದು ಅವರು ಹೇಳಿದರು.

ಲೇಖಕಿ ಜಯಶ್ರೀ ಅಬ್ಬಿಗೇರಿ ಮಾತನಾಡುತ್ತ ಇಂದಿನ ಕಾರ್ಯಕ್ರಮದಲ್ಲಿ ನೀವೆಲ್ಲ ನನ್ನ ಬರವಣಿಗೆ ಕುರಿತು ತೋರುತ್ತಿರುವ ಪ್ರೀತಿ, ವಿಶ್ವಾಸ, ಅಭಿಮಾನ ನನ್ನಲ್ಲಿಂದು ಆತ್ಮವಿಶ್ವಾಸ ಮೂಡಿಸಿದೆ ಎಂದರು
ಇದೇ ಸಂದರ್ಭದಲ್ಲಿ ಸಾಹಿತಿ ದಂಪತಿಗಳಾದ ಜಯಶ್ರೀ ಅಬ್ಬಿಗೇರಿ ಹಾಗೂ ಜಯಪ್ರಕಾಶ ಅವರನ್ನು ಶಾಲು ಹೊದಿಸಿ, ಫಲಪುಷ್ಟ ನೀಡಿ ಸನ್ಮಾನಿಸಿ ಗೌರವಿಸಲಾಯಿತು

ಕಸಾಪ ಮಾಜಿ ಅಧ್ಯಕ್ಷ ಯ.ರು. ಪಾಟೀಲ ಉಪಸ್ಥಿತರಿದ್ದರು ಅಕ್ಷಯ ಹಿರೇಮಠ ಅವರ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರೊ. ಎಲ್. ವಿ. ಪಾಟೀಲ ಸ್ವಾಗತಿಸಿದರು. ಜಿ. ಎಸ್. ಸೋನಾರ ನಿರೂಪಿಸಿದರು. ಜಯಪ್ರಕಾಶ ಅಬ್ಬಿಗೇರಿ ವಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.