ಉತ್ತಮ ಸಮಾಜಕ್ಕಾಗಿ

ತಿಮ್ಮಯ್ಯ ಅವರ ಜನ್ಮದಿನದಂದು ಮ್ಯೂಸಿಯಂ ಉದ್ಘಾಟನೆಗೆ ಸರಕಾರ ಕ್ರಮ

0

ಬೆಳಗಾವಿ(ಸುವರ್ಣಸೌಧ): ಮಾರ್ಚ್ 21 ರಂದು ಜನರಲ್ ತಿಮ್ಮಯ್ಯ ಹುಟ್ಟುಹಬ್ಬವಿದ್ದು ಅಂದೇ ಅವರ ಮ್ಯೂಸಿಯಂ ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕು ಎಂದು ಪರಿಷತ್ತು ಸದಸ್ಯೆ ಎಸ್. ವೀಣಾ. ಅಚ್ಯುತಯ್ಯ ಪ್ರಶ್ನೆ ಪರಿಷತ್ ಪ್ರಾರಂಭಕ್ಕೆ ಎತ್ತಿದರು. ಜನರಲ್ ತಿಮ್ಮಯ್ಯ ಅವರ ಮ್ಯೂಸಿಯಂಗೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಸರಕಾರ ಕೊಡುತ್ತಿದೆ ಎಂದು ಮೋಟಮ್ಮ ಅಸಮಧಾನ ವ್ಯಕ್ತಪಡಿಸಿದರು. ವಿಪಕ್ಷ ನಾಯಕ ಕೆ. ಎಸ್. ಈಶ್ವರಪ್ಪ ಅಸಮಧಾನ ವ್ಯಕ್ತಪಡಿಸಿ ಈ ವಿಳಂಬ ಏಕೆ ಎಂದು ಸಚಿವೆ ಉಮಾಶ್ರೀ ಅವರನ್ನು ತರಾಟೆಗೆ ತೆಗೆದುಕೊಂಡರು. ಕೊಡಗು ಜಿಲ್ಲೆಯ ಆಡಳಿತಾತ್ಮಕ ಮತ್ತು ತಾಂತ್ರಿಕ ತೊಂದರೆ ಎಂದು ಉಮಾಶ್ರೀ ತಿಳಿಸಲೆತ್ನಿಸಿದರು. ಎರಡನೇ ಕಂತಿನ ಹಣ ಬಿಡುಗಡೆ ಮಾಡಲಾಗುವುದು ಎಂದು ಸರಕಾರ ತಿಳಿಸಿತು. ಸಭಾನಾಯಕ ಹಾಗೂ ಕೊಡಗು ಉಸ್ತುವಾರಿ ಸಚಿವ ಎಂ. ಆರ್. ಸೀತಾರಾಮ ಜನರಲ್ ತಿಮ್ಮಯ್ಯ ಅವರ ಜನ್ಮದಿನದಂದು ಮ್ಯೂಸಿಯಂ ಉದ್ಘಾಟನೆಗೆ ಸರಕಾರ ಕ್ರಮ ಕೈಗೊಳ್ಳುತ್ತದೆ ಎಂದು ತೆರೆ ಎಳೆದರು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: