ಉತ್ತಮ ಸಮಾಜಕ್ಕಾಗಿ

15 ಟಿಕೇಟ್ ಪಡೆದು ಸಿಬಿಟಿ ಬಸ್ ನಲ್ಲಿ ಪ್ರಯಾಣಿಸಿದ ಸಿಎಂ ಸಿದ್ದರಾಮಯ್ಯ

0

ಬೆಳಗಾವಿ(ಏರಪೋರ್ಟ್): NWKRTC ವತಿಯಿಂದ ಇಂದು ಆಯೋಜಿಸಿದ್ದ ‘ಬಸ್ ದಿನ’ದ ಅಂಗವಾಗಿ ನಾಡಿನ ದೊರೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಕೆಟ್ ಪಡೆದು ಸರಕಾರ ಬಸಲ್ಲಿ ಪ್ರಯಾಣಿಸಿದ್ದಾರೆ. ಬೆಂಗಳೂರಿಂದ ಸಂಜೆ 6:30 ಕ್ಕೆ ಸಾಂಬ್ರಾ ವಿಮಾನದಲ್ಲಿ ಬಂದಿಳಿಯುತ್ತಿದ್ದಂತೆ ಸಾಂಪ್ರದಾಯಿಕ ಡೊಳ್ಳು ವಾದ್ಯದೊಂದಿಗೆ ಆಹ್ವಾನಿಸಿಕೊಳ್ಳಲಾಯಿತು. ಬಳಿಕ ತಮ್ಮ ಕಾರು ತ್ಯಜಿಸಿದ ಸಿಎಂ ಸರಕಾರಿ ಬಸ್ ಏರಿ ಸುವರ್ಣಸೌಧದ ವರೆಗೆ ₹ 15 ಟಿಕೇಟ್ ಪಡೆದು ಪ್ರಯಾಣಿಸಿದರು.ಸಾರಿಗೆ ಸಚಿವ ಎಚ್. ಎಂ. ರೇವಣ್ಣ, ಲೊಕೋಪಯೋಗಿ ಸಚಿವ ಎಚ್. ಸಿ. ಮಹಾದೇವಪ್ಪ, ಸಚಿವ ಕೆ. ಜೆ. ಜಾರ್ಜ್, ಮುಖ್ಯ ಸಚೇತಕ ಅಶೋಕ ಪಟ್ಟಣ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಸರಕಾರದ ಕಾರ್ಯದರ್ಶಿಗಳು, ಕೆಎಸ್ ಆರ್ ಟಿಸಿ ಡಿಸಿ ಗಣೇಶ ರಾಠೋಡ್, ಡಿಟಿಓ ಜಾಧವ ಮತ್ತು ಇತರ ಅಧಿಕಾರಿ, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಅಚ್ಚುಕಟ್ಟಾದ ಬಿಳಿ ಸಮವಸ್ತ್ರ, ತಲೆಗೆ ಟೋಪಿ ಧರಿಸಿದ್ದ ಕಂಡಕ್ಟರ್ ನಾಡಿನ ದೊರೆಯಿಂದಲೇ ಟಿಕೇಟ್ ಹಣ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದರು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: